ಹಳಿಯಾಳ:- ಫೆ.19 ಛತ್ರಪತಿ ಶಿವಾಜಿ ಮಹಾರಾಜರ ಜಯಂತಿ ಹಿನ್ನೆಲೆ ಮಂಗಳವಾಡ ಗ್ರಾಮದಲ್ಲಿ ಪ್ರತಿಷ್ಠಾಪನೆ ಆಗಲಿರುವ ಪಂಚಲೋಹದ ಭವ್ಯ ಅಶ್ವಾರೂಢ ಶಿವಾಜಿ ಮೂರ್ತಿಗೆ ಮಂಗಳವಾಡ ಗ್ರಾಮಸ್ಥರು ವಿಜೃಂಭಣೆಯ ಸ್ವಾಗತ ಕೊರಿದರು.
ಛತ್ರಪತಿ ಶಿವಾಜಿ ಮಹಾರಾಜರ ಪಂಚಲೋಹದ ಮೂರ್ತಿ ಪ್ರತಿಷ್ಠಾಪಣೆಯು ಮಂಗಳವಾಡ ಗ್ರಾಮದಲ್ಲಿ ಜಾತ್ರೆಯಂತೆ ಆಚರಿಸಲಾಗುತ್ತಿದೆ. ಗ್ರಾಮಕ್ಕೆ ಗ್ರಾಮಕ್ಕೆ ತಳಿರು ತೊರಣ, ವಿದ್ಯುತ್ ದೀಪಾಲಂಕಾರ, ಕೇಸರಿ ಪತಾಕೆಗಳು, ಬ್ಯಾನರ್ ಬಂಟಿಗ್ಸ್‍ಗಳಿಂದ ಕೆಸರಿಮಯವಾಗಿ ಕಂಗೋಳಿಸುತ್ತಿದೆ.

ಗುರುವಾರ ಗ್ರಾಮದಲ್ಲಿ ಶಿವಾಜಿ ಮಹಾರಾಜರ ಮೂರ್ತಿಯ ಭವ್ಯ ಮೇರವಣಿಗೆ ನಡೆಸಲಾಯಿತು. ದಾಖಲೆಯ ಜನತೆ ಮೆರವಣಿಗೆಯಲ್ಲಿ ಪಾಲ್ಗೊಂಡಿದ್ದರು. ಯುವಕರು ಕೇಸರಿ ಪೇಟಾ, ಕೇಸರಿ ಶಾಲು, ಶ್ವೇತ ವರ್ಣದ ಸಮವಸ್ತ್ರಗಳಲ್ಲಿ ಕಂಗೊಳಿಸುತ್ತಿದ್ದರೇ ಯುವತಿಯರು ಕೂಡ ಇದೇ ರೀತಿಯ ವಸ್ತ್ರಗಳಲ್ಲಿ ಕಂಗೊಳಿಸಿದ್ದು ವಿಶೇಷವಾಗಿತ್ತು.
Leave a Comment