ಹಳಿಯಾಳ:- ತಾಲೂಕಿನ ಬಿಕೆ ಹಳ್ಳಿ ಗ್ರಾಮದಲ್ಲಿ ಗ್ರಾಮದೇವಿ ಶ್ರೀ ಲಕ್ಷ್ಮೀ ದೇವಿಯ ಜಾತ್ರಾ ಮಹೋತ್ಸವದ ಅಂಗವಾಗಿ ಶುಕ್ರವಾರ ಮಹಾರಥೋತ್ಸವಕ್ಕೆ ಬೆಂಗಳೂರಿನ ಗೋಸಾಯಿ ಮಹಾಸಂಸ್ಥಾನ ಮಠದ ಭವಾನಿ ಪಿಠದ ಮರಾಠಾ ಜಗದ್ಗುರು ಮಂಜುನಾಥ ಮಹಾರಾಜರು ಚಾಲನೆ ನೀಡಿದರು.

ಶುಕ್ರವಾರ ಮಧ್ಯಾಹ್ನ 12 ಗಂಟೆಗೆ ಮಂಜುನಾಥ ಮಹಾರಾಜರು ಹಾಗೂ ಶ್ರೀಕ್ಷೇತ್ರ ಕಾಶಿಯ ಸೋಹಂ ಚೈತನ್ಯ ಪುರಿ ಮಹಾರಾಜರು ವಿಶೇಷ ಪೂಜೆ ಸಲ್ಲಿಸಿ ಬಳಿಕ ರಿಬ್ಬನ್ ಕಟ್ ಮಾಡುವ ಮೂಲಕ ರಥಕ್ಕೆ ಚಾಲನೆ ನೀಡಿದರು.
ಸಾವಿರಾರು ಭಕ್ತರು ಭಂಡಾರ ಎರಚುತ್ತ ಭಕ್ತಿ ಘೊಷ, ಜಯಘೋಷಗಳ ಮಧ್ಯೆ ರಥವನ್ನು ಎಳೆದರು, ವಿಜೃಂಭಣೆಯಿಂದ ರಥೋತ್ಸವ ಗ್ರಾಮದಲ್ಲಿ ನಡೆಯಿತು. ಗ್ರಾಮದ ಜಾತ್ರಾ ಕಮೀಟಿಯವರು, ಪ್ರಮುಖರು ಇದ್ದರು.

Leave a Comment