ಹೊನ್ನಾವರ ತಾಲೂಕಿನಹೆರಂಗಡಿ ಪಂಚಾಯತಿ ವ್ಯಾಪ್ತಿಯ ಅಳ್ಳಂಕಿ ಪ್ರೌಡಶಾಲೆಯ 10 ಲಕ್ಷ ವೆಚ್ಚದ ನೂತನ ಕಟ್ಟಡ ಮಂಜೂರಾಗಿದ್ದು, ಕ್ಷೇತ್ರದ ಶಾಸಕ ಸುನೀಲ ನಾಯ್ಕ ಮಂಗಳವಾರ ಶಂಕುಸ್ಥಾಪನೆ ನೇರವೇರಿಸಿದರು. ಈ ಸಂದರ್ಭದಲ್ಲಿ ಕ್ಷೇತ್ರ ಶಿಕ್ಷಣಾಧಿಕಾರಿ ಡಿ.ಆರ್.ನಾಯ್ಕ, ಕಾಲೇಜಿನ ಪ್ರಾರ್ಚಾಯರಾದ ಜಿ.ಎಸ್.ಹೆಗಡೆ, ಪಂಚಾಯತ ಅಧ್ಯಕ್ಷರು ಹಾಗೂ ಸದಸ್ಯರು, ಪಕ್ಷದ ಕಾರ್ಯಕರ್ತರು, ಸಾರ್ವಜನಿಕರು ಉಪಸ್ಥಿತರಿದ್ದರು. ನಂತರ ಶಾಲಾ ಶಿಕ್ಷಕರು ಕಟ್ಟಡ ರಿಪೇರಿ ಅಗತ್ಯವಿದೆ ಎಂದು ಮನವಿ ಸಲ್ಲಿಸಿದಾಗ ಕೂಡಲೇ ಸ್ಪಂದಿಸಿ ಅಧಿಕಾರಿಗಳಿಗೆ ಕಟ್ಟಡ ರಿಪೇರಿ ನಡೆಸುವಂತೆ ಸೂಚನೆ ನೀಡಿದರು.

Leave a Comment