ಹೊನ್ನಾವರ: ಕಾಸರಕೋಡ ಟೊಂಕಾ ಬಂದರು ಕಾಮಗಾರಿಯನ್ನು ಸರ್ಕಾರ ಖಾಸಗಿ ಕಂಪನಿಯವರಿಗೆ ನೀಡಿರುದನ್ನು ವಿರೋದಿಸಿ ಮೀನುಗಾರರು ತಮ್ಮ ವ್ಯಾಪಾರ ವಹಿವಾಟು ಜಿಲ್ಲೆಯಾದ್ಯಂತ ಸ್ಥಗಿತಗೊಳಿಸಿ ಟೊಂಕಾದಿAದ ಪಟ್ಟಣದ ಶರಾವತಿ ಸರ್ಕಲನವರೆಗೆ ಕಾಲ್ನಡಿಗೆಯಲ್ಲಿ ಸಹಸ್ರಾರು ಸಂಖ್ಯೆಯಲ್ಲಿ ಮೀನುಗಾರರು ಬಂದು ಪ್ರತಿಭಟಿಸಿದರು.

ನಂತರ ಪಟ್ಟಣದ ಪೋಲಿಸ್ ಮೈದಾನದಲ್ಲಿ ಜಮಾಹಿಸಿದ ಮೀನುಗಾರರು ಕೇಂದ್ರ, ರಾಜ್ಯ ಸರ್ಕಾರ, ಹೊನ್ನಾವರ ಪೋರ್ಟ ಲಿಮಿಟೆಡ್ ವಿರುದ್ದ ಘೋಷಣೆ ಕೂಗಿದರು. ಮೀನುಗಾರರ ಫೆಡರೇಶನ್ ಅಧ್ಯಕ್ಷ ರಾಜು ತಾಂಡೇಲ್ ಮಾತನಾಡಿ ನಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದೇವೆ. ರಾಜ್ಯ ಮತ್ತು ಕೇಂದ್ರ ಸರ್ಕಾರ ಜನವಿರೋಧಿ ಜಾರಿಗೆ ತಂದು ಮೀನುಗಾರರನ್ನು ಬೀದಿಗೆ ತರುತ್ತಿದೆ. ವಾಣಿಜ್ಯ ಬಂದರಿನ ಕಾಮಗಾರಿ ತಕ್ಷಣ ಸ್ಥಗಿತಗೊಳಿಸಬೇಕು. ನಮ್ಮ ಮೀನುಗಾರರಿಗೆ ಮೀನುಗಾರಿಕೆ ಬಿಟ್ಟು ಬೇರೆ ಉದ್ಯೋಗ ಮಾಡಲು ಬರುವುದಿಲ್ಲ. ಸಹಸ್ರಾರು ಸಂಖ್ಯೆಯ ಮೀನುಗಾರರು ಅನಾಥರಾಗುತ್ತಿದ್ದಾರೆ. ಸರ್ಕಾರ ಯೋಜನೆ ಕೈಬಿಡದಿದ್ದರೆ, ಕರಾವಳಿಯ ಮೀನುಗಾರರೆಲ್ಲರು ಸೇರಿ ವಿಧಾನಸೌಧಕ್ಕೆ ಮುತ್ತಿಗೆ ಹಾಕಲಿದ್ದೇವೆ ಎಂದು ಎಚ್ಚರಿಸಿದರು.

ರಾಷ್ರಿö್ಟÃಯ ಮೀನುಗಾರ ಸಂಘಟನೆಯ ರಾಷ್ಟಿçÃಯ ಅಧ್ಯಕ್ಷ ಮಾಜಿ ಶಾಸಕ ಯು.ಆರ್.ಸಭಾಪತಿ ಮಾತನಾಡಿ ಮೀನುಗಾರರು ತೀರಾ ಬಡತನದಲ್ಲೆ ಬೆಳೆದು, ಬಡತನದಲ್ಲಿಯೇ ನ್ಯಾಯಕ್ಕಾಗಿ ಹೋರಾಡುತ್ತಿದ್ದೇವೆ. “ನಮ್ಮ ಭೂಮಿ ನಮ್ಮದು, ನಮ್ಮ ಸಮುದ್ರ ನಮ್ಮ ಹಕ್ಕು” ಎನ್ನುವ ಧೈಯ ವಾಕ್ಯದಂತೆ ನಾವು ಹೋರಾಟ ಮಾಡುತ್ತಿದ್ದೇವೆ. ಕರಾವಳಿ ಉದ್ದಕ್ಕೂ ಮೀನುಗಾರಿಕೆಯಿಂದ ದೇಶದ ಆರ್ಥಿಕತೆ ಹೆಚ್ಚಿಸಿದೆ. ಇಂತಹ ಮೀನುಗಾರಿಕೆಯನ್ನು ಒಕ್ಕಲೆಬ್ಬಿಸುವ ಯೋಜನೆಯನ್ನು ಕೈಬಿಡಬೇಕು. ಮೀನುಗಾರಿಕೆಯ ಬಗ್ಗೆ ಮಾಹಿತಿಯೇ ಇಲ್ಲದವರು ಮೀನುಗಾರಿಕಾ ಮಂತ್ರಿಯಾಗಿ ಕುಳಿತಿದ್ದಾರೆ. ಅಧಿಕಾರಿಗಳ ಮಾಹಿತಿ ಪಡೆದು ಸರ್ಕಾರ ನಡೆಸುತ್ತಿರುದರಿಂದ ಈ ಸಮಸ್ಯೆ ಉಂಟಾಗುತ್ತಿದೆ. ಮಂಗಳೂರು ವಾಣಿಜ್ಯ ಬಂದರಿನಿAದ ಅಲ್ಲಿಯ ಮೀನುಗಾರರ ಪರಿಸ್ಥಿತಿ ನೋಡಿಯಾದರೂ ಸರ್ಕಾರ ಮೀನುಗಾರರಿಗೆ ಆಗುವ ತೊಂದರೆ ಪರಿಗಣಿಸಿ ಯೋಜನೆ ಕೈಬಿಡದಿದ್ದರೆ ಉಗ್ರ ಹೋರಾಟಕ್ಕೆ ಮುಂದಾಗಲಿದ್ದೇವೆ ಎಂದರು.
ಮಾಜಿ ಶಾಸಕ ಮಂಕಾಳ ವೈದ್ಯ ಮಾತನಾಡಿ ೨೪ ದಿನದಿಂದ ಮೀನುಗಾರರು ವಾಣಿಜ್ಯ ಬಂದರು ಕಾಮಗಾರಿ ವಿರೋಧಿಸಿ ಪ್ರತಿಭಟಿಸುತ್ತಿದ್ದಾರೆ. ಆದರೆ ಜಿಲ್ಲಾಧಿಕಾರಿಯಾಗಲಿ, ಮಂತ್ರಿಗಳಾಗಲಿ, ಬಂದು ಮೀನುಗಾರರ ಸಮಸ್ಯೆ ಆಲಿಸಲಿಲ್ಲ. ಸ್ಥಳಕ್ಕೆ ಆಗಮಿಸಿದ ಭಟ್ಕಳ ಶಾಸಕ ಸುನೀಲ ನಾಯ್ಕ ಈ ಯೋಜನೆಯನ್ನು ಕಾಂಗ್ರೇಸ್ ಸರ್ಕಾರ ಮಾಡಿದೆ ಎಂದು ಸುಳ್ಳು ಮಾಹಿತಿ ನೀಡಿ ತೆರಳಿದಿದ್ದಾರೆ. ಇವರ ಸರ್ಕಾರ ಇರುವಾಗ ಇವರು ಈ ಯೋಜನೆಯನ್ನು ನಾಳೆ ಕೈಬಿಡಲಿ. ಮೀನುಗಾರರ ಪರವಾಗಿ ನಾನೇ ಅಭಿನಂದಿಸುತ್ತೇನೆ. ಸುಳ್ಳು ಹೇಳಿ ಆಯ್ಕೆ ಆಗಿ, ಆಯ್ಕೆಯಾದ ಮೇಲೆ ಸುಳ್ಳು ಹೇಳುತ್ತಾ ಅಧಿಕಾರ ನಡೆಸುವುದು, ಇದೇ ಇವರ ಬಿಟ್ಟಿ ಸರ್ಕಾರದ ಕಾಯಕವಾಗಿದೆ. ಹೈದರಬಾದ ಮೂಲದ ಕಂಪನಿ ಹೊನ್ನಾವರ ಪೋರ್ಟ ಲಿಮಿಟೆಡ್ ಎಂದು ಗೋಲಮಾಲ್ ನಡೆಸಿದೆ. ಶಾಸಕರು ಜನರನ್ನು ತಪ್ಪು ದಾರಿಗೆ ಏಳೆಯುತ್ತಿದ್ದಾರೆ. ಪ್ರತಿಭಟನಾಕಾರ ಬಳಿ ಹೋಗಿ ನನ್ನನ್ನು ಜೋಕರ್ ಎಂದು ವ್ಯಂಗ್ಯವಾಡುತ್ತಾರೆ. ಆದರೆ ಶಾಸಕರು ತೆನಾಲಿ ರಾಮಕೃಷ್ಣನಂತೆ ಬೆಕ್ಕು ಸಾಕಲು ಬರದೇ ಬೆಕ್ಕು ಹಾಲು ಕುಡಿಯಲು ಬರುವುದಿಲ್ಲ ಎಂದAತಾಗಿದೆ. ಇವರು ಸರ್ಕಾರದ ಮುಂದೊAದು ಮೀನುಗಾರರ ಮುಂದೊAದು ಮಾತನಾಡುವ ಜೋಕರ್ ಕಾರ್ಡ ಇದ್ದಂತೆ. ಶಾಸಕರಿಗೆ ಮೀನುಗಾರರ ನೋವಿಗೆ ಸ್ಪಂದಿಸಲು ಕಣ್ಣು ಕಿವಿ ಇಲ್ಲದ ಶಾಸಕರು ಬಿಟ್ಟಿ ಸರ್ಕಾರದಾಗಿದೆ. ಮೀನುಗಾರರ ತಾಳ್ಮೆ ಪರೀಕ್ಷಿಸಬೇಡಿ ತಕ್ಷಣ ಕೈಬಿಡಿ ಎಂದು ಎಚ್ಚರಿಸಿದರು.

ರಾಷ್ಟಿçÃಯ ಮೀನುಗಾರ ಸಂಘಟನೆಯ ಜಿಲ್ಲಾಧ್ಯಕ್ಷ ರಾಮ ಮೋಗೇರ ಮಾತನಾಡಿ ಜನವಿರೋಧಿ ಯೋಜನೆ ಕೈಬಿಡಿ. ಸರ್ಕಾರಕ್ಕೆ ೧೫ದಿನ ಗಡುವು ನೀಡುತ್ತೇವೆ. ಇಲ್ಲದಿದ್ದರೆ ರಾಜ್ಯವ್ಯಾಪಿ ಹೋರಾಟಕ್ಕೆ ಮುಂದಾಗಲಿದ್ದೇವೆ.
ಮಾಜಿ ಶಾಸಕ ಶಾರದಾ ಶೆಟ್ಟಿ ಮಾತನಾಡಿ ಮೀನುಗಾರರು ತಮ್ಮ ಹಕ್ಕಿಗಾಗಿ ಹೋರಾಟ ಮಾಡುತ್ತಿದ್ದಾರೆ. ಹೋರಾಟದಲ್ಲಿ ಸ್ಥಳಿಯ ಎರಡು ಶಾಸಕರು ಸಂಸದರು ಪಾಲ್ಗೊಂಡು ಮೀನುಗಾರರಿಗೆ ನ್ಯಾಯ ಒದಗಿಸಬೇಕಿತ್ತು. ಆದರೆ ಇವರು ಇದ್ದಾರೆಯೋ ಸರ್ಕಾರ ಇದೆಯೋ ಇಲ್ಲವೊ ಎಂದು ತಿಳಿಯದಂತಾಗಿದೆ. ಕರಾವಳಿ ಭಾಗದಲ್ಲಿ ಮೀನುಗಾರ ಆಸ್ತಿಯಾಗಿದ್ದು, ಚುನಾವಣೆ ಸಮಯದಲ್ಲಿ ಮಾತ್ರ ಬಳಸಿಕೊಂಡು ಈಗ ದೂರವಾಗಿದ್ದಾರೆ. ನಿಮಗೆ ನ್ಯಾಯ ಒದಗಿಸಲು ಎಂದಿಗೂ ನಿಮ್ಮೊಂದಿಗೆ ಇರಲಿದ್ದೇನೆ ಎಂದು ಭರವಸೆ ನೀಡಿದರು.
ಬಂದರು ಕಾಮಗಾರಿ ಸ್ಥಗಿತಗೊಳಿಸುವಂತೆ ಕೋರಿ ಭಟ್ಕಳ ಉಪವಿಭಾಗಧಿಕಾರಿ ಸಾಜಿದ್ ಮುಲ್ಲಾ ಮೂಲಕ ರಾಜ್ಯಪಾಲರಿಗೆ ಮನವಿ ಸಲ್ಲಿಸಿದರು.
ವೇದಿಕೆಯಲ್ಲಿ ರಾಷ್ಟಿçÃಯ ಮೀನುಗಾರ ಸಂಘಟನಾ ಕಾರ್ಯದರ್ಶಿ ಅಜಿತ್ ತಾಂಡೇಲ್, ಕಾಯದರ್ಶಿ ಚಂದ್ರಕಾAತ ಕೊಚಡೇಕರ್, ಮೀನುಗಾರ ಮುಖಂಡರಾದ ರಾಜೇಶ ತಾಂಡೇಲ್, ಅಮಾಜ್ ಪಟೇಲ್, ಯಮುನಾ ಗಾವಂಕರ್, ತಿಲಕ ಗೌಡ, ವಿವನ್ ಫರ್ನಾಂಡಿಸ್ ವೇದಿಕೆಯಲ್ಲಿ ಉಪಸ್ಥಿತರಿದ್ದರು.
Leave a Comment