ಸ್ಯಾಂಡಲ್ವುಡ್ನ ಸ್ಟಾರ್ ದರ್ಶನ್ ತೂಗುದೀಪ್ಗೆ ಕೋಟ್ಯಂತರ ಅಭಿಮಾನಿಗಳಿದ್ದಾರೆ. ದರ್ಶನ್ ಎಂದರೆ ಪ್ರಾಣ ಕೊಡುವಷ್ಟು ಹುಚ್ಚು ಅಭಿಮಾನವನ್ನು ತೋರುವವರೂ ಇದ್ದಾರೆ. ಅಂಗವಿಕಲನೊಬ್ಬ ದರ್ಶನ್ ಬಗ್ಗೆ ಅಪಾರ ಪ್ರೀತಿಯನ್ನಿಟ್ಟುಕೊಂಡಿದ್ದು, ಜೀವನದಲ್ಲಿ ಒಮ್ಮೆ ಅವರನ್ನು ಭೇಟಿ ಮಾಡಬೇಕೆನ್ನುವ ಹಂಬಲ ಇಟ್ಟುಕೊಂಡಿದ್ದ. ಇತ್ತೀಚೆಗೆ ಕಾರಿನಲ್ಲಿ ಹೋಗುವಾಗ ದರ್ಶನ್ಗೆ ಆ ಅಭಿಮಾನಿ ಕಂಡಿದ್ದು, ಕಾರು ನಿಲ್ಲಿಸಿ ಆತನನ್ನು ಮಾತನಾಡಿಸಿದ್ದಾರೆ. ಒಂದೇ ಕಾಲಿನ ಸ್ವಾಧೀನದಲ್ಲಿ ಆತ ಆಟೋ ಓಡಿಸುವ ವಿಚಾರ ತಿಳಿದು ಸಂತೋಷದಿಂದ ಫೋಟೋ ತೆಗೆಸಿಕೊಂಡಿದ್ದಾರೆ. ಮತ್ತೆ ಸಿಗುವ ಭರವಸೆ ಕೊಟ್ಟು ಅಭಿಮಾನಿಯ ಮುಖದಲ್ಲಿ ನಗು ತರಿಸಿ ಹೋಗಿದ್ದಾರೆ.
Leave a Comment