ಹೊನ್ನಾವರ; ರಾಜ್ಯದಲ್ಲೆ ಕೆಲವೇ ಕೆಲವು ಭಾಗದಲ್ಲಿ ಬೆಳ್ಳಿರಥದ ಜಾತ್ರಮಹೋತ್ಸವ ನಡೆಯುವ ದೇವಾಲಯದಲ್ಲಿ ಅತಿ ಪುರಾತನವಾದ ತಾಲೂಕಿನ ಮಂಕಿಯ ಶ್ರೀ ಸರ್ವೇಶ್ವರಿ ಆತ್ಮಾನಂದ ಸದ್ಗುರು ಸಮರ್ಥ ಸನ್ನಿಧಿ ಮಂಕಿಪುರ ಮಠದ ಶ್ರೀ ಸರ್ವೇಶ್ವರಿ ಜಗನ್ಮಾತೆಯ ಬೆಳ್ಳಿ ರಥೋತ್ಸವದ ವಿಜೃಂಭಣೆಯಿAದ ನಡೆಯಿತು. ರಾಜ್ಯದ ವಿವಿಧ ಭಾಗಗಳಿಂದ ಆಗಮಿಸಿದ ಸಾವಿರಾರು ಭಕ್ತರು ಹರಕೆ ಸಲ್ಲಿಸಿ ದೇವರ ಕೃಪೆಗೆ ಪಾತ್ರರಾದರು.

ಮಂಕಿಪುರ ಮಠದ ಬೆಳ್ಳಿಯ ರಥೋತ್ಸವ ರಾಜ್ಯದಲ್ಲಿಯೆ ಪ್ರಸಿದ್ದಿ ಪಡೆದಿದ್ದು, ದೇಶದಲ್ಲಿಯೆ ಮೊದಲ ಬೆಳ್ಳಿ ರಥೋತ್ಸವ ಎನ್ನುವ ಹಿರಿಮೆ ಹೊಂದಿದೆ. ಇಲ್ಲಿನ ರಥೋತ್ಸವಕ್ಕೆ ಪ್ರತಿವರ್ಷ ಸುತ್ತಮುತ್ತಲಿನ ಗ್ರಾಮಸ್ಥರು ಹರಕೆ ಸಲ್ಲಿಸುವ ಪ್ರತಿತಿಯೂ ಇದೆ.
Leave a Comment