ಹೊನ್ನಾವರ: ತಾಲೂಕಿನ ಸಾಲ್ಕೋಡ್ ಗ್ರಾಮದ ಸರ್ಕಾರಿ ಹಿರಿಯ ಪ್ರಾಥಮಿಕ ಸಾಲ್ಕೋಡ್ ಶಾಲೆಯಲ್ಲಿ ಪ್ರತಿ ಚುನಾವಣೆ ಸಮಯದಲ್ಲಿ ಎರಡು ಮತಗಟ್ಟೆ ಇದ್ದು. ಒಂದು ಮತಗಟ್ಟೆಗೆ ಬರುವ ಎಲ್ಲಾ ಮತದಾರರು, ಮತ ಚಲಾವಣೆಗೆ ಹೊಳೆ ದಾಟಿ ಬರಬೇಕಾಗಿದೆ.

ಸೇತುವೆ ನಿರ್ಮಾಣ ಕಾಮಗಾರಿ ಅರ್ಧಕ್ಕೆ ನಿಂತಿದ್ದು, ಪ್ರತಿ ಚುನಾವಣೆಯಲ್ಲಿ ನೀರಿನಲ್ಲಿ ಹಾಯ್ದು ಹರಸಾಹಸ ಪಟ್ಟು ಮತಚಲಾವಣೆ ಮಾಡುತ್ತಿದ್ದಾರೆ. ಇದರಿಂದ ಈ ಭಾಗದ ಸಾರ್ವಜನಿಕರು ಸ್ಥಳಿಯ ಅಧಿಕಾರಿಗಳಿಗೆ ಜನಪ್ರತಿನಿಧಿಗಳಿಗೆ ಮನವಿ ನೀಡಿದರೂ ಯಾವುದೇ ಪ್ರಯೋಜನವಾಗಿಲ್ಲ, ಮುಂದಿನ ಜಿಲ್ಲಾ ಪಂಚಾಯತ್ ಚುನಾವಣೆಯೊಳಗೆ ಮತಗಟ್ಟೆಯನ್ನು ಸ್ಥಿತಿಗಾರ ಶಾಲೆಗೆ ವರ್ಗಾಯಿಸಬೇಕು. ಇಲ್ಲದೇ ಹೊದಲ್ಲಿ ೫೦೦ಕ್ಕೂ ಹೆಚ್ಚು ಮತದಾರರಿರುವ ಈ ಭಾಗದವರು ಈ ಹಿಂದೆಯೆ ಹೇಳಿದಂತೆ ಮತದಾನ ಬಹಿಷ್ಕಾರದಂತಹ ತಿರ್ಮಾನಕ್ಕೆ ಬರಬೇಕಾಗುತ್ತದೆ. ಎಂದು ಎಚ್ಚರಿಕೆಯನ್ನು ಗ್ರಾಮ ಪಂಚಾಯತ್ ಪ್ರತಿನಿಧಿಗಳ ಮೂಲಕ ಸಾರ್ವಜನಿಕರು ತಹಶೀಲ್ದಾರರಿಗೆ ಮನವಿ ಸಲ್ಲಿಸಿದ್ದಾರೆ. ತಹಶೀಲ್ದಾರ ಪರವಾಗಿ ಶಿರಸ್ತೆದಾರರು ಜಿ.ವಿ. ದೇಶಭಂಡಾರಿ ಮನವಿ ಸ್ವೀಕರಿಸಿ ಸ್ಥಳ ಪರಿಶೀಲನೆ ನಡೆಸಿ ಹಿರಿಯ ಅಧಿಕಾರಿಗಳ ಗಮನಕ್ಕೆ ತಂದು ಸ್ಥಳಾಂತರದ ಕುರಿತು ತಿರ್ಮಾನ ಕೈಗೊಳ್ಳುವ ಭರವಸೆ ನೀಡಿದರು. ಈ ಸಂದರ್ಭದಲ್ಲಿ ಗ್ರಾಮ ಪಂಚಾಯತ ಅಧ್ಯಕ್ಷೆ ರಜನಿ ನಾಯ್ಕ ಮಾತನಾಡಿ, ಕಳೆದ ಹಲವು ವರ್ಷಗಳಿಂದ ಈ ಭಾಗದವರು ಸಮಸ್ಯೆ ಎದುರಿಸುತ್ತಿದ್ದು, ಗ್ರಾಮ ಪಂಚಾಯತ ಚುನಾವಣೆಯ ಸಮಯದಲ್ಲಿ ಕಣ್ಣಾರೆ ನೋಡಿದ್ದೇನೆ. ಆ ಮತಗಟ್ಟೆಯ ಎಲ್ಲಾ ಮತದಾರರು ಹೊಳೆ ಆಚೆ ಬರುವುದರಿಂದ ಆ ಮತ ಕೇಂದ್ರವನ್ನು ಹೆಚ್ಚಿನ ಸಾರ್ವಜನಿಕರಿರುವ ಸ್ಥಿತಿಗಾರ ಶಾಲೆಗೆ ವರ್ಗಾಯಿಸಬಹುದು. ಅದೇ ಮಾರ್ಗದಲ್ಲಿ ಮತ್ತೊಂದು ಕೇಂದ್ರವಾದ ಕೆರಮನೆ ಕಚ್ಚರಕೆ ತೆರಳಬಹುದಾಗಿರುದರಿಂದ ಅಧಿಕಾರಿಗಳು ಮತಯಂತ್ರ ಸಾಗಾಟಕ್ಕೂ ಹೆಚ್ಚುವರಿ ವಾಹನದ ವ್ಯವಸ್ಥೆ ಮಾಡಬೇಕಿಲ್ಲ. ಮುಂಬರುವ ಚುನಾವಣೆ ಒಳಗಡೆ ಈ ಸಮಸ್ಯೆ ಬಗೆಹರಿಸುವ ವಿಶ್ವಾಸವಿದೆ ಎಂದರು. ಗ್ರಾಮ ಪಂಚಾಯತ ಸದಸ್ಯ ನಾಗೇಶ ಗೌಡ ಮಾತನಾಡಿ ನಾನು ಆ ಭಾಗದ ನಿವಾಸಿಯಾಗಿದ್ದು, ನೂರಾರು ಜನರು ಅನುಭವಿಸಿರುವ ಸಂಕಷ್ಟದಲ್ಲಿ ನಾನೊಬ್ಬನಾಗಿದ್ದೇನೆ. ಈ ಬಾರಿ ಮತದಾನ ಮಾಡುವಾಗ ನನಗೆ ಆ ಕಹಿ ಅನುಭವ ಮತ್ತೆ ಆಗಿದ್ದು, ಮುಂಬರುವ ಚುನಾವಣೆ ಒಳಗೆ ಸಮಸ್ಯೆ ಬಗೆಹರಿಸಬೇಕು. ಇಲ್ಲದೇ ಹೊದಲ್ಲಿ ಚುನಾವಣೆ ಬಹಿಷ್ಕಾರದಂತಹ ತಿರ್ಮಾನಕ್ಕೆ ಬರಬೇಕಾಗುತ್ತದೆ ಎಂದರು,
Leave a Comment