• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ದುಬೈನಿಂದ ಚಿನ್ನ ಕಳ್ಳ ಸಾಗಾಣಿಕೆ ಅನುಮಾನ; ರು.48 ಲಕ್ಷ ಮೌಲ್ಯದ ಕೈಗಡಿಯಾರ ಒಡೆದ ಕಸ್ಟಮ್ಸ್, ಭಟ್ಕಳದ ವ್ಯಕ್ತಿಯಿಂದ ಕ್ಯಾಲಿಕಟ್‍ನಲ್ಲಿ ದೂರು ದಾಖಲು

March 7, 2021 by bkl news Leave a Comment

ಭಟ್ಕಳ: ಕೈಗಡಿಯಾರದಲ್ಲಿ ಚಿನ್ನ ಅಡಗಿಸಿಟ್ಟು ಸಾಗಿಸಿರುವ ಶಂಕೆಯ ಮೇಲೆ ವಿಮಾನದಿಂದ ಇಳಿದ ಭಟ್ಕಳ ಮೂಲದ ವ್ಯಕ್ತಿಯನ್ನು ತಪಾಸಣೆಗೆಂದು ವಶಕ್ಕೆ ಪಡೆದ ಕಸ್ಟಮ್ಸ್ ಅಧಿಕಾರಿಗಳು, ಆತನ ಕೈಯಲ್ಲಿದ್ದ ರು.48 ಲಕ್ಷಕ್ಕೂ ಅಧಿಕ ಮೌಲ್ಯದ ಆಡಿಮೂವರ್ಸ ಪಿಗುಯೆಟ್ ಕಂಪೆನಿಯ ಕೈಗಡಿಯಾರವನ್ನು ಜಫ್ತುಪಡಿಸಿಕೊಂಡು ಗಡಿಯಾರದ ಮೌಲ್ಯವನ್ನು ಅರಿಯದೇ ಅದನ್ನು ಪುಡಿಗಟ್ಟಿ ಚಿನ್ನಕ್ಕಾಗಿ ಹುಡುಕಾಟ ನಡೆಸಿದ ಘಟನೆ ಕೇರಳ ಕ್ಯಾಲಿಕಟ್‍ನಲ್ಲಿ ನಡೆದಿದೆ. 

IMG 20210307 WA0051


ಹಾನಿಗೊಳಗಾದ ವ್ಯಕ್ತಿಯನ್ನು ಭಟ್ಕಳ ಕಾರಗದ್ದೆಯ ಮಹ್ಮದ್ ಇಸ್ಮೈಲ್ ಎಂದು ಗುರುತಿಸಲಾಗಿದೆ. ಇವರ ಸಹೋದರ ದುಬೈನಲ್ಲಿ ವ್ಯಾಪಾರ ವಹಿವಾಟು ಮಾಡಿಕೊಂಡಿದ್ದು, ಇಸ್ಮೈಲ್ ವಿಸಿಟಿಂಗ್ ವೀಸಾ ಪಡೆದುಕೊಂಡು ಸಹೋದರನಿದ್ದಲ್ಲಿಗೆ ತೆರಳಿದ್ದರು. ಇವರು ಊರಿಗೆ ವಾಪಸ್ಸಾಗುವ ನಿಟ್ಟಿನಲ್ಲಿ ಮಾ.3ರಂದು ಕೇರಳ ಕ್ಯಾಲಿಕಟ್ ವಿಮಾನ ನಿಲ್ದಾಣಕ್ಕೆ ಬಂದಿಳಿದಿದ್ದು, ಅಲ್ಲಿ ಹಾಜರಿದ್ದ ಕಸ್ಟಮ್ಸ್ ಅಧಿಕಾರಿಗಳು ಇಸ್ಮೈಲ್‍ರನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಅವರ ಕೈಯಲ್ಲಿದ್ದ ಗಡಿಯಾರವನ್ನು ಪಡೆದುಕೊಂಡ ಅಧಿಕಾರಿಗಳು ಕೋಣೆಯೊಳಗೆ ತೆಗೆದುಕೊಂಡು ಹೋಗಿ ಅದನ್ನು ಒಡೆದು ಪುಡಿಗೈದಿದ್ದಾರೆ. ಗಡಿಯಾರದಲ್ಲಿ ಚಿನ್ನ ಇಲ್ಲದಿರುವುದನ್ನು ದೃಢಪಡಿಸಿಕೊಂಡು ಪುಡಿಯಾದ ಗಡಿಯಾರವನ್ನು ಟ್ರೇನಲ್ಲಿ ಇಟ್ಟು ಇಸ್ಮೈಲ್‍ರಿಗೆ ಹಿಂದಿರುಗಿಸಿದ್ದಾರೆ. ಒಡೆದ ಗಡಿಯಾರವನ್ನು ಕಂಡು ಕಂಗಾಲಾದ ಇಸ್ಮೈಲ್, ತನ್ನ ಗಡಿಯಾರವನ್ನು ತನಗೆ ವಾಪಸ್ಸು ನೀಡುವಂತೆ ಪಟ್ಟು ಹಿಡಿದಿದ್ದಾರೆ. ಗಡಿಯಾರದ ಮೌಲ್ಯವನ್ನು ಕೇಳಿಸಿಕೊಂಡ ಕಸ್ಟಮ್ಸ್ ಅಧಿಕಾರಿಗಳೂ ತಬ್ಬಿಬ್ಬಾಗಿದ್ದಾರೆ. ಈ ಕುರಿತು ಇಸ್ಮೈಲ್ ಕ್ಯಾಲಿಕಟ್ ಪೊಲೀಸ್ ಠಾಣೆಯಲ್ಲಿ ಕಸ್ಟಮ್ಸ್ ಅಧಿಕಾರಿಗಳ ವಿರುದ್ಧ ದೂರು ದಾಖಲಿಸಿದ್ದಾರೆ. 
ಏನಿದು ದುಬಾರಿ ಬೆಲೆಯ ಗಡಿಯಾರ? ಅರಬ್ ರಾಷ್ಟ್ರ ದುಬೈನಲ್ಲಿ ದುಬಾರಿ ಬೆಲೆಯ ಬಳಸಲಾದ ಕೈ ಗಡಿಯಾರ ಮಾರಾಟ ಮಳಿಗೆಯೊಂದಿದೆ. ಆ ಮಳಿಗೆಯಲ್ಲಿ ಪ್ರಖ್ಯಾತ ಆಡಿಮೂವರ್ಸ್ ಪಿಗುಯೆಟ್ ಕಂಪೆನಿಯ ಸರಿಸುಮಾರು ರು.60 ಲಕ್ಷ ಮೌಲ್ಯದ (ಮೂಲ ಬೆಲೆ) ಬಳಸಲಾದ ಕೈಗಡಿಯಾರವನ್ನು, ಇಸ್ಮೈಲ್ ಸಹೋದರ ರು.48 ಲಕ್ಷವನ್ನು ನೀಡಿ 2017ರಲ್ಲಿ ಖರೀದಿಸಿದ್ದಾರೆ. 3-4 ವರ್ಷ ತಾನೇ ಕೈಯಲ್ಲಿ ಕಟ್ಟಿಕೊಂಡು ಓಡಾಡಿಕೊಂಡಿದ್ದ ಆತ, ಕಳೆದ ತಿಂಗಳಷ್ಟೇ ದುಬೈಗೆ ಬಂದ ತನ್ನ ಸಹೋದರನಿಗೆ ನೀಡಿದ್ದಾರೆ. ದುಬಾರಿ ಬೆಲೆಯ ಕೈಗಡಿಯಾರದೊಂದಿಗೆ ಇಸ್ಮೈಲ್ ಭಾರತಕ್ಕೆ ವಾಪಸ್ಸಾಗಿದ್ದು, ಗಡಿಯಾರದ ಮೌಲ್ಯವರಿಯದ ಕಸ್ಟಮ್ಸ್ ಅಧಿಕಾರಿಗಳು ಅದನ್ನು ಒಡೆದು ಚಿನ್ನಕ್ಕಾಗಿ ತಲಾಶೆ ನಡೆಸಿದ್ದಾರೆ ಎಂದು ಆರೋಪಿಸಲಾಗಿದೆ. ಈ ಪುಟ್ಟ ಕೈಗಡಿಯಾರದಲ್ಲಿ ಎಷ್ಟು ಕೆಜಿ ಚಿನ್ನವನ್ನು ಸಾಗಿಸಲು ಸಾಧ್ಯ, ಗಡಿಯಾರದ ಬಗ್ಗೆ ಅಧಿಕಾರಿಗಳು ತಿಳಿದುಕೊಳ್ಳುವುದು ಬೇಡವೇ, ಅಧಿಕಾರಿಗಳು ನನಗೆ ಆಗಿರುವ ಹಾನಿಯನ್ನು ಸರಿಪಡಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Bhatkal News, Canara News, Trending Tagged With: 48 lakhs worth of gold on the clock, 48 ಲಕ್ಷಕ್ಕೂ ಅಧಿಕ ಮೌಲ್ಯ, customs officers, his hand, ಆಡಿಮೂವರ್ಸ ಪಿಗುಯೆಟ್ ಕಂಪೆನಿ, ಆತನ ಕೈಯ, ಕಸ್ಟಮ್ಸ್ ಅಧಿಕಾರಿಗಳು, ಗಡಿಯಾರದಲ್ಲಿ ಚಿನ್ನ, ಭಟ್ಕಳ ಕಾರಗದ್ದೆಯ ಮಹ್ಮದ್ ಇಸ್ಮೈಲ್

Explore More:

About bkl news

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,062 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...