• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸುಬೇದಾರ ಮುಕುಂದ ನಾವಲಗಿ ಅವರಿಗೆ ತೇರಗಾಂವ ಗ್ರಾಮಸ್ಥರಿಂದ‌ ಅದ್ದೂರಿ ಗೌರವದ ಸ್ವಾಗತ

March 8, 2021 by Yogaraj SK Leave a Comment

ಹಳಿಯಾಳ:- ದೇಶದಲ್ಲಿ ನರೇಂದ್ರ ಮೋದಿಯವರ ಸರ್ಕಾರ ಬಂದ ಮೇಲೆಯೇ ಸೈನಿಕರಿಗೆ ಅತ್ಯಾಧುನಿಕ ಶಸ್ತ್ರಾಸ್ತ್ರ ಮತ್ತು ವೇತನದಲ್ಲಿ ಹೆಚ್ಚಳವಾಗಿದೆ ಎಂದು ಕರ್ನಾಟಕ ರಾಜ್ಯ ಮಾಜಿ ಸೈನಿಕರ ಸಂಘದ ರಾಜ್ಯ ಕಾರ್ಯದರ್ಶಿ ಅಶೋಕ ಮಿರಾಶಿ ಹೇಳಿದರು.
ಸುಧೀರ್ಘ 30 ವರ್ಷಗಳ ಕಾಲ ಸೈನ್ಯದಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಪಡೆದು ತನ್ನ ಸ್ವಗ್ರಾಮಕ್ಕೆ ಮರಳಿದ ಹಳಿಯಾಳ ತಾಲೂಕಿನ ತೇರಗಾಂವ ಗ್ರಾಮದ ಕಾರ್ಗಿಲ್ ಯುದ್ದದಲ್ಲಿ ಭಾಗಿಯಾಗಿದ್ದ ಭೂಸೇನೆಯ ಸುಬೇದಾರ ಮುಕುಂದ ಲಕ್ಷ್ಮಣ ನಾವಲಗಿ ಅವರಿಗೆ ಗ್ರಾಮಸ್ಥರಿಂದ ಅದ್ದೂರಿ ಸ್ವಾಗತ ಸಮಾರಂಭ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಿರಾಶಿ ಅವರು ಮಾತನಾಡಿದರು.

7 hly 5


ತೇರಗಾಂವ ಗ್ರಾಮದಲ್ಲಿ ವೇದಿಕೆ ಕಾರ್ಯಕ್ರಮಕ್ಕೂ ಮೋದಲು ರೈಲಿನ ಮೂಲಕ ಅಳ್ನಾವರಕ್ಕೆ ಆಗಮಿಸಿದ ನಿವೃತ್ತ ಸೈನಿಕ ಮುಕುಂದ ಅವರಿಗೆ ರೈಲು ನಿಲ್ದಾಣದಲ್ಲಿಯೇ ಹಳಿಯಾಳ ಮತ್ತು ಅಳ್ನಾವರ ತಾಲೂಕಿನ ಮಾಜಿ ಸೈನಿಕರಿಂದ ಹೂಹಾರ ಹಾಕುವ ಮೂಲಕ ಸ್ವಾಗತಿಸಲಾಯಿತು. ಬಳಿಕ ತೇರಗಾಂವ ಗ್ರಾಮದಲ್ಲಿ ತೇರೆದ ವಾಹನದಲ್ಲಿ ವಿಜೃಂಭಣೆಯಿಂದ ಮೇರವಣಿಗೆ ನಡೆಸುವ ಮೂಲಕ ಮಾಜಿ ಯೋಧನಿಗೆ ಅದ್ದೂರಿ ಗೌರವಪೂರ್ವಕ ಸ್ವಾಗತ ಕೊರಲಾಯಿತು. ಹಳಿಯಾಳ ತಾಲೂಕಿನ ಇತಿಹಾಸದಲ್ಲಿಯೇ ಇದು ಪ್ರಥಮ ಬಾರಿಗೆ ಮಾಜಿ ಯೋಧರಿಗೆ ಈ ಪರಿಯ ಸ್ವಾಗತ ಕೊರಲಾಗಿರುವುದು ತೇರಗಾಂವ ಗ್ರಾಮಸ್ಥರ ಕಾರ್ಯವನ್ನು ತಾಲೂಕಿನಾದ್ಯಂತ ಶ್ಲಾಘಿಸಲಾಗುತ್ತಿದೆ.
ಬಳಿಕ ತೇರಗಾಂವ ಗ್ರಾಮದಲ್ಲಿ ನಡೆದ ಸಮಾರಂಭದಲ್ಲಿ ಮಾತನಾಡಿದ ಅಶೋಕ ಮಿರಾಶಿ ಅವರು ಸೈನಿಕರು ನಿಯತ್ತಿನಿಂದ ಸಂಬಳಕ್ಕಾಗಿ ಮಾತ್ರ ದುಡಿಯುತ್ತಾರೆ. ಆದರೇ ದೇಶದಲ್ಲಿ ನಾಗರೀಕ ಸೇವೆಯಲ್ಲಿ ಸಾಕಷ್ಟು ಭ್ರಷ್ಟಾಚಾರ ತಾಂಡವವಾಡುತ್ತಿದೆ. ಇಲ್ಲಿ ತಮ್ಮ ಹಲವು ಕೆಲಸಗಳಿಗಾಗಿ ಕಚೇರಿಗಳಿಗೆ ಅಲೆದಾಡುವ ಮಾಜಿ ಸೈನಿಕರ ಬಳಿಯೇ ಮನಸೋ ಇಚ್ಚೆ ಲಂಚವನ್ನು ಪಿಕಲಾಗುತ್ತದೆ ಈ ಮೂಲಕ ಸೈನಿಕರಿಗೆ ಅಗೌರವ ನೀಡುವವರು ಇದ್ದಾರೆ ಎನ್ನುವುದು ದೌರ್ಭಾಗ್ಯದ ಸಂಗತಿಯಾಗಿದೆ ಎಂದು ಬೇಸರದಿಂದ ನುಡಿದರು.

7 hly 6


1997 ರಲ್ಲಿ ಪಾಕಿಸ್ತಾನಿ ಉಗ್ರರೊಂದಿಗಿನ ಕಾಳಗದಲ್ಲಿ ಎಡಗಾಲಿಗೆ ಮೂರು ಹಾಗೂ ಕೈಗೆ ಒಂದು ಗುಂಡು ತಾಗಿ ಸುಮಾರು 1 ವರ್ಷ ಸೇನಾ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆದು ಬಳಿಕ ಮತ್ತೇ 27 ವರ್ಷಗಳ ಕಾಲ ಸೈನ್ಯದಲ್ಲಿ ಸುಧೀರ್ಘ ಸೇವೆ ಸಲ್ಲಿಸಿದ ಬೆಳಗಾವಿ 12 ಮರಾಠಾ ರೆಜಿಮೆಂಟ್‍ನ ಯೋಧ ಸುಬೇದಾರ ಮುಕುಂದ ನಾವಲಗಿ ಅವರು ಸನ್ಮಾನ, ಗೌರವ ಸ್ವೀಕರಿಸಿ ಮಾತನಾಡಿ ತಂದೆ-ತಾಯಿಯ ಆಶೀರ್ವಾದದ ಫಲವಾಗಿ ಸೈನ್ಯದಲ್ಲಿ ಯಶಸ್ವಿಯಾಗಿ ಕಾರ್ಯನಿರ್ವಹಿಸಿದ್ದೇನೆ. ನರೇಂದ್ರ ಮೋದಿಯವರ ಸರ್ಕಾರ ಅಧಿಕಾರಕ್ಕೆ ಬಂದ ಬಳಿಕ ಸೈನ್ಯದಲ್ಲಿ ಸಾಕಷ್ಟು ಮಹತ್ತರ ಬದಲಾವಣೆಗಳಾಗಿದ್ದು ಇಂದು ಪ್ರತ್ಯುತ್ತರಕ್ಕಾಗಿ ಸೈನಿಕರು ಯಾವುದೇ ಪರವಾನಿಗೆ ಕೆಳುವ ಅವಶ್ಯಕತೆಯೇ ಇಲ್ಲ ಎಂದ ಅವರು ಮರಾಠಾ ರೆಜಿಮೆಂಟ್‍ನ ಕಾರ್ಯವನ್ನು ಶ್ಲಾಘಿಸಿದರು.
ಮುರ್ಕವಾಡ ಗ್ರಾಮದ ವಿಶ್ವನಾಥ ಶಂಭಾಜಿ ಗೌಡಾ ಮತ್ತು ಸಾತ್ನಳ್ಳಿ ಗ್ರಾಮದ ಮಾಜಿ ಯೋಧ ಮಹಾದೇವ ಯಳಗುಕರ ಅವರ ವಿಶೇಷ ಕಾಳಜಿಯಿಂದ ಆಯೋಜಿಸಿದ ಈ ಕಾರ್ಯಕ್ರಮದಲ್ಲಿ ಹಳಿಯಾಳ ಮಾಜಿ ಸೈನಿಕರ ಸಂಘದ ಅಧ್ಯಕ್ಷ ಬಾಬು ಪಾಟೀಲ್, ಪ್ರಮುಖರಾದ ಸುರೇಶ ಶಿವಣ್ಣವರ, ತಾನಾಜಿ ಕೊಲೆಕರ, ವಿಶ್ವನಾಥ ಬೆಣಚೆಕರ,ತುಕಾರಾಮ ಮಿರಾಶಿ, ಸದಾನಂದ ಕಾಜಗಾರ, ದೇವಪ್ಪ, ಲಕ್ಷ್ಮಣ ನಾವಲಗಿ, ಶಾಂತಾ ನಾವಲಗಿ ಇತರರು ಇದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Haliyal News Tagged With: for years, Kargil war in the village of Teragangwa, Long service in the army, misfortune, service in the army, Subedar of the regiment, ತೇರಗಾಂವ ಗ್ರಾಮದ ಕಾರ್ಗಿಲ್ ಯುದ್ದ, ದೌರ್ಭಾಗ್ಯದ ಸಂಗತಿ, ಭೂಸೇನೆಯ ಸುಬೇದಾರ ಮುಕುಂದ ಲಕ್ಷ್ಮಣ, ರೆಜಿಮೆಂಟ್‍ನ ಯೋಧ ಸುಬೇದಾರ, ವರ್ಷಗಳ ಕಾಲ, ಸೈನ್ಯದಲ್ಲಿ ಸುಧೀರ್ಘ ಸೇವೆ, ಸೈನ್ಯದಲ್ಲಿ ಸೇವೆ

Explore More:

About Yogaraj SK

Yograj typically covers local news from Haliyal

Subscribe to News from Yogaraj

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...