ಹಳಿಯಾಳ:- ಇತ್ತೀಚೆಗೆ ಗದಗ ಜಿಲ್ಲೆಯಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿಪಂದ್ಯಾವಳಿಯಲ್ಲಿ ಭಾಗವಹಿಸಿದ ಹಳಿಯಾಳದ ಅರ್ಲವಾಡ ಗ್ರಾಮದ ಕುಸ್ತಿ ಪಟು ಸುರಜ ಸಂಜು ಅಣ್ಣಿಕೇರಿ ಬಂಗಾರದ ಪದಕ ಗಳಿಸುವ ಮೂಲಕ ರಾಷ್ಟçಮಟ್ಟದ ಕುಸ್ತಿ ಪಂದ್ಯಾವಳಿಗೆ ಆಯ್ಕೆಯಾಗಿದ್ದಾನೆ.

ಬಳ್ಳಾರಿಯ ಜೆಎಸ್‌ಡಬ್ಲೂ ತೊರಂಗಲ್ ಅಕಾಡೆಮಿಯಲ್ಲಿ ತರಬೇತಿ ಪಡೆಯುತ್ತಿರುವ ಉದಯೋನ್ಮೂಖ ಕುಸ್ತಿ ಪಟು ಸೂಜರ್ ಅನ್ನಿಕೇರಿ ಉತ್ತರ ಕನ್ನಡ ಜಿಲ್ಲೆ ಹಳಿಯಾಳ ತಾಲೂಕಿನ ಅರ್ಲವಾಡ ಗ್ರಾಮದ ರಹವಾಸಿಯಾಗಿದ್ದು ಹಳಿಯಾಳ ಪೋಲಿಸ್ ಇಲಾಖೆಯ ಎಎಸ್‌ಐ ಸಂಜು ಅನ್ನಿಕೇರಿ ಮಗನಾಗಿದ್ದಾನೆ.
ಗದಗನಲ್ಲಿ ನಡೆದ ರಾಜ್ಯಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ಸಾಧನೆ ಮಾಡುವ ಮೂಲಕ ಉತ್ತರ ಪ್ರದೇಶದ ನೋಯಿಡಾದಲ್ಲಿ ಎಪ್ರಿಲ್ ತಿಂಗಳಿನಲ್ಲಿ ನಡೆಯುವ ರಾಷ್ಟçಮಟ್ಟದ ಕುಸ್ತಿ ಪಂದ್ಯಾವಳಿಯಲ್ಲಿ ೫೭ ಕೆಜಿ ಜ್ಯೂನಿಯರ್ ವಿಭಾಗದಲ್ಲಿ ಸ್ಪರ್ದಿಸುವ ಅರ್ಹತೆ ಪಡೆದಿದ್ದಾನೆ.
Leave a Comment