ಹೊನ್ನಾವರ: ತಾಲೂಕಿನ ವಿವಿಧ ಗ್ರಾಮೀಣ ಭಾಗದಲ್ಲಿ ಸಂಚರಿಸುವ ಬಸ್ ಸಮರ್ಪಕವಾಗಿಲ್ಲದೇ ಸಮಸ್ಯೆ ಆಗುತ್ತಿದೆ ಎಂದು ಕಾಲೇಜು ವಿದ್ಯಾರ್ಥಿಗಳು ಹಾಗೂ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರು ತಹಶೀಲ್ದಾರ ಕಛೇರಿಗೆ ಆಗಮಿಸಿ ತಹಶೀಲ್ದಾರ ವಿವೇಕ ಶೇಣ್ವಿ ಬಳಿ ಸಮಸ್ಯೆ ಸರಿಪಡಿಸುವಂತೆ ಮನವಿ ಸಲ್ಲಿಸಿದರು.

ತಾಲೂಕಿನ ಕಡೆಹಳ್ಳ, ಹಿರೆಬೈಲ್, ತೋಳಸಾಣಿ, ಕೋಟೆಬೈಲ್,ತಲಗೋಡ ಮುಂತಾದ ಗ್ರಾಮೀಣ ಭಾಗಗಳಿಗೆ ಪ್ರತಿನಿತ್ಯ ಬಸ್ ವ್ಯವಸ್ಥೆ ಇಲ್ಲ. ಈಗಾಗಲೇ ಕಾಲೆಜುಗಳು ಆರಂಭಗೊAಡಿದ್ದು, ಬಸ್ ಅವ್ಯವಸ್ಥೆಯಿಂದ ತರಗತಿಗಳಿಗೆ ಸಮಯಕ್ಕೆ ಸರಿಯಾಗಿ ಹಾಜರಾಗಲು ಸಾಧ್ಯವಾಗುತ್ತಿಲ್ಲ. ಶಿಘ್ರವಾಗಿ ಸಮಸ್ಯೆ ಬಗೆಹರಿಸಬೇಕು. ಇನ್ನು ಕೆಲವೇ ದಿನದಲ್ಲಿ ಪರೀಕ್ಷೆ ಸಮೀಪಿಸುತ್ತಿದ್ದು, ಇದರಿಂದ ಸಮಸ್ಯೆ ಉಂಟಾಗಲಿದೆ. ಆರ್ಥಿಕ ಸಂಕಷ್ಟದ ನಡುವೆ ಹೆಚ್ಚುವರಿಯಾಗಿ ಖಾಸಗಿ ವಾಹನಗಳಿಗೆ ದುಬಾರಿ ಶುಲ್ಕ ನೀಡಿ ಹೋಗಲು ಸಮಸ್ಯೆ ಆಗುತ್ತಿದೆ. ಸಮಸ್ಯೆ ಬಗೆಹರಿಸುವಂತೆ ಮನವಿ ಮಾಡಿದರು.
ಮನವಿ ಸ್ವೀಕರಿಸಿದ ತಹಶಿಲ್ದಾರ ವಿವೇಕ್ ಶೇಣ್ವಿ ಎರಡು ಡಿಪೋ ಅಧಿಕಾರಿಗಳನ್ನು ಕರೆದು ಸಭೆ ನಡೆಸಿ ಸಮಸ್ಯೆ ಶಿಘ್ರವಾಗಿ ಇತ್ಯರ್ಥ ಮಾಡುವ ಭರವಸೆ ನೀಡಿದರು.
ಕರವೆ ಹೊನ್ನಾವರ ತಾಲೂಕಾ ಅಧ್ಯಕ್ಷ ಮಂಜುನಾಥ ಗೌಡ ಮಾತನಾಡಿ ಗ್ರಾಮೀಣ ಭಾಗದ ಜನರಿಗೆ ಮತ್ತು ವಿಧ್ಯರ್ಥಿಗಳಿಗೆ ತುಂಬಾ ತೋಂದರೆಯಾಗುತ್ತಿದೆ. ನಾವು ಈ ಹಿಂದೆ ಮನವಿಯನ್ನು ನೀಡಿದಾಗ ಸಾರಿಗೆ ಅಧಿಕಾರಿಗಳು ಆ ಗ್ರಾಮದ ಬಸ್ ವ್ಯವಸ್ಥೆ ಸರಿಪಡಿಸಿ ಉಳಿದ ಗ್ರಾಮಕ್ಕೆ ಸಮಸ್ಯೆ ಬಗೆಹರಿಸಿಲ್ಲ. ಈಗಾಗಲೇ ಪರೀಕ್ಷೆ ಸಮಯ ಸಮೀಪಿಸುತ್ತಿದ್ದು, ಅಧಿಕಾರಿಗಳು ಜನಪ್ರತಿನಿಧಿಗಳು ಇದನ್ನು ಗಂಭೀರವಾಗಿ ಪರಿಗಣಿಸುವಂತೆ ಮನವಿ ಮಾಡಿದರು.
ಈ ಸಂದರ್ಭದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯ ಸದಸ್ಯರಾದ ರಾಜೇಶ ನಾಯ್ಕ ನಾಜಗಾರ, ಯೋಗೇಶ ನಾಯ್ಕ ಕಾಸರಕೋಡ, ವಿದ್ಯಾರ್ಥಿಗಳಾದ ಪ್ರದೀಪ ನಾಯ್ಕ, ನಿಖಿಲ್ ನಾಯ್ಕ ಉದಿತ್ ನಾಯ್ಕ, ವರುಣ ನಾಯ್ಕ, ಕೃಷ್ಣ ಗೌಡ, ಲೋಹಿತ ನಾಯ್ಕ, ಶ್ರೀಧರ ನಾಯ್ಕ, ನಂದನ್ ನಾಯ್ಕ, ರವಿಚಂದ್ರ ನಾಯ್ಕ ಗಂಗಾಧರ ಗೌಡ, ಮುಂತಾದ ವಿದ್ಯಾರ್ಥಿಗಳು ಇದ್ದರು,
Leave a Comment