ಹೊನ್ನಾವರದ ಪದ್ಮಾಂಜಲಿ ಚಿತ್ರಂಮದಿರದಲ್ಲಿ ರಾರ್ಬಟ್ ಸಿನಿಮಾ ಪ್ರದರ್ಶನ ಆರಂಭ ಹೌಸ್ ಪುಲ್ ಪ್ರದರ್ಶನಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ಬಹು ನಿರೀಕ್ಷಿತ ಚಿತ್ರ ‘ರಾಬರ್ಟ್’ ಯಶಸ್ವಿ ಪ್ರದರ್ಶನ ಹೊನ್ನಾವರದಲ್ಲು ಕಾಣುತ್ತಿದೆ. ಬೆಳಗಿನ ಜಾವವೇ ದಿನದ ಎಲ್ಲಾ ಶೋ ಟಿಕೇಟ್ ಕಾಯ್ದಿರಸಲು ಪೆಕ್ಷಕರು ಮುಗಿಬಿದ್ದಿದ್ದರು. ಶಿವರಾತ್ರಿ ರಜೆಯ ಮಧ್ಯೆ ಅಭಿಮಾನಿಗಳು ಮುಗಿಬಿದ್ದು ಸಿನಿಮಾ ವೀಕ್ಷಿಸಿದ್ದಾರೆ.

ಥಿಯೇಟರ್ಗಳ ಬಳಿ ಕಟೌಟ್ ಗೆ ಹಾಲಿನ ಅಭಿಷೇಕ ಮಾಡಿ, ಹೂವಿನ ಹಾರ ಹಾಕಿ, ಪಟಾಕಿ ಸಿಡಿಸಿ ಸಿಹಿ ಹಂಚಿ ಸಂಭ್ರಮಿಸಿದ ಅಭಿಮಾನಿಗಳು ಮೊದಲ ಶೋ ನೋಡಿ ಖುಷಿಯಾಗಿದ್ದಾರೆ. ಬಿಡುಗಡೆಯಾದ ದಿನವೇ ಮೊದಲ ಶೋ ನೋಡಿದ ಅಭಿಮಾನಿಗಳ ಸಂಭ್ರಮವಂತೂ ಮುಗಿಲುಮುಟ್ಟಿದೆ.
ಸುಮಾರು ಒಂದು ವರ್ಷದಿಂದ ರಾಬರ್ಟ್ ದರ್ಶನಕ್ಕಾಗಿ ಕಾದುಕುಳಿತ್ತಿದ್ದ ಅಭಿಮಾನಿಗಳಿಗೆ ಇಂದು ಬೆಳಗ್ಗೆ ತೆರೆಮೇಲೆ ದರ್ಶನ್ ಅಬ್ಬರ ನೋಡಿ ಧನ್ಯರಾಗಿದ್ದಾರೆ. ಕರ್ನಾಟಕದಲ್ಲಿ ರಾಬರ್ಟ್ ಸುಮಾರು 656ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ರಿಲೀಸ್ ಆಗಿದೆ. ಕನ್ನಡ ಸಿನಿಮಾವೊಂದು ಇಷ್ಟು ದೊಡ್ಡ ಮಟ್ಟದಲ್ಲಿ ತೆರೆಗೆ ಬರುತ್ತಿರುವುದು ಇದೇ ಮೊದಲಾಗಿದೆ. ಮಧ್ಯಾಹ್ನ ಹಾಗೂ ರಾತ್ರಿ ಶೋ ಹೌಸ್ ಪುಲ್ ಪ್ರದರ್ಶನ ಕಾಣುತ್ತಿದ್ದು ನಾಳೆನ ಶೋಗಾಗಿ ಇಂದು ಟಿಕೇಟ್ ಕಾಯ್ದಿಡಲು ಬಂದಿರುವುದು ಈ ಸಿನಿಮಾದ ವಿಶೇಷವಾಗಿದೆ.




Leave a Comment