ಭಟ್ಕಳ: ಇಲ್ಲಿನ ರಂಜನ್ ಇಂಡಿಯನ್ ಏಜೆನ್ಸಿ ವತಿಯಿಂದ ಮಹಾಶಿವರಾತ್ರಿ ಹಬ್ಬದ ಪ್ರಯುಕ್ತ ಪ್ರತಿ ವರ್ಷದಂತೆಯೇ ಈ ವರ್ಷವೂ ಕೂಡ ಸತತ 11ನೇ ವರ್ಷದ ಪಾದಯಾತ್ರೆಯೂ ಗುರುವಾರದಂದು ಸಹಸ್ರಾರು ಭಕ್ತರನ್ನೊಳಗೊಂಡಂತೆ ನಡೆಯಿತು.

ಈ
ನಸುಕಿನ ಜಾವ 3.45 ಗಂಟೆಗೆ ಇಲ್ಲಿನ ಪಟ್ಟಣದ ಚೋಳೇಶ್ವರ ದೇವಸ್ಥಾನದಿಂದ ದೇವರ ದರ್ಶನ ಪಡೆದ ಪಾದಯಾತ್ರೆ ಕೈಗೊಳ್ಳುವ ಭಕ್ತರು ಅಲ್ಲಿಂದ ಮಾರಿಗುಡಿ ದೇವಸ್ಥಾನ, ಪೇಟೆ ಮುಖ್ಯ ರಸ್ತೆ, ಹಳೆ ಬಸ್ ನಿಲ್ದಾಣ ಹೆದ್ದಾರಿ ಮಾರ್ಗವಾಗಿ ಬಸ್ತಿಯ ಮೂಲಕ ಮುರ್ಡೇಶ್ವರದ ದೇವಸ್ಥಾನಕ್ಕೆ ತಲುಪಲಿದರು. ದೇವರ ದರ್ಶನಕ್ಕೂ ಪೂರ್ವದಲ್ಲಿ ಸಮುದ್ರ ಸ್ನಾನ ಕೈಗೊಂಡ ಭಕ್ತರು ಮುಂಜಾನೆ ನಸುಕಿನಲ್ಲಿ ಅತ್ಯಂತ ಶ್ರದ್ಧಾ ಭಕ್ತಿಯಿಂದ ದೇವರ ದರ್ಶನ ಪಡೆದುಕೊಂಡರು.ಪಾದಯಾತ್ರೆಯಲ್ಲಿ ಪಾಲ್ಗೊಂಡ ಸಾವಿರಾರು ಭಕ್ತಾದಿಗಳು ಬರಿ ಕಾಲಿನಲ್ಲಿ ಯಾತ್ರೆಯಲ್ಲಿ ಪಾಲ್ಗೊಂಡಿದ್ದು, ಶಿವ ನಾಮಸ್ಮರಣೆಗಳು, ಶಿವ ಸ್ತುತಿಯೊಂದಿಗೆ ಜಯಘೋಷ ಕೂಗುತ್ತಾ ಪುರುಷರು ಪಂಚೆ ಶಾಲು ಹಾಗೂ ಮಹಿಳೆಯರು ವಿಶೇಷ ಸೀರೆಯನ್ನು ಧರಿಸಿ ಯಾತ್ರೆಯಲ್ಲಿ ಸಾಗಿ ಬಂದಿದ್ದು ವಿಶೇಷವಾಗಿತ್ತು. ಹಾಗೂ ಪುಟಾಣಿ ಮಕ್ಕಳು ಕಂಡು ಬಂದಿರುದು ವಿಶೇಷವೆನಿಸಿತು.ರಂಜನ್ ಇಂಡೇನ್ ಎಜೆನ್ಸಿ ಮಾಲಕರಾದ ಶಿವಾನಿ ಶಾಂತಾರಾಮ ಭಟ್ಕಳ, ಶಾಂತಾರಾಮ ಭಟ್ಕಳ ಇವರ ನೇತೃತ್ವದಲ್ಲಿ ಪಾದಯಾತ್ರೆ ಆರಂಭಗೊಂಡಿದ್ದು, ಯಾತ್ರೆಯಲ್ಲಿ ಪಾಲ್ಗೊಂಡ ಯಾತ್ರಿಗಳಿಗೆ ಪಾದಯಾತ್ರೆಯ ಬಳಿಕ ಲಘು ಉಪಹಾರ ಮತ್ತು ವಾಹನ ವ್ಯವಸ್ಥೆ ಮಾಡಲಾಗಿತ್ತು. ಸರಿ ಸುಮಾರು 15-18 ಕಿ.ಮೀ. ತನಕ ಭಟ್ಕಳದಿಂದ ಮುರ್ಡೇಶ್ವರದ ತನಕ ಪಾದಯಾತ್ರೆಯೂ ಪ್ರತಿ ವರ್ಷ ನಡೆಯುತ್ತಿರುವುದು ವಿಶೇಷವೇ ಸರಿ. ತಾಲೂಕಿನ ವಿವಿಧ ಗ್ರಾಮೀಣ ಹಾಗೂ ನಗರ ಭಾಗದ ಸಾರ್ವಜನಿಕರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದರು. ಪ್ರತಿ ನಾಲ್ಕು ಕಿ.ಮೀ.ಗೆ ಕುಡಿಯುವ ನೀರು, ಹಣ್ಣು, ಹಂಪಲು, ಡ್ರೈ ಪ್ರೂಟ್ಸಗಳನ್ನು ಯಾತ್ರಿಗಳಿಗೆ ವಿತರಿಸಲಾಯಿತು. ದಾರಿಯೂದಕ್ಕೂ ಎರಡು ಪೊಲೀಸ ವಾಹನ ಹಾಗೂ ಒಂದು ಅಂಬುಲೆನ್ಸ ಸೇವೆಯನ್ನು ಯಾತ್ರಿಗಳಿಗಾಗಿ ತುರ್ತು ವ್ಯವಸ್ಥೆಗೆ ನಿಯೋಜಿಸಲಾಗಿತ್ತು.
ವಿಶೇಷವೆನೆಂದರೆ ಪ್ರತಿ ವರ್ಷಕ್ಕಿಂತ ಈ ವರ್ಷದ ಪಾದಯಾತ್ರೆಗೆ ಬರುವ ಭಕ್ತರ ಸಂಖ್ಯೆ ಏರಿಕೆಯಾಗುತ್ತಿದ್ದು ಈ ಬಾರಿ ಸರಿ ಸುಮಾರು 2500ಕ್ಕೂ ಅಧಿಕ ಭಕ್ತರು ಪಾದಯಾತ್ರೆಯಲ್ಲಿ ಪಾಲ್ಗೊಂಡಿದ್ದು ಯಶಸ್ವಿಯಾಗಿ ಮುಕ್ತಾಯಗೊಂಡಿತು.
Leave a Comment