ಹೊನ್ನಾವರ: ಕರ್ನಾಟಕ ರಾಜ್ಯ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ಜಿಲ್ಲಾ ಸಮಿತಿಯ ವಾರ್ಷಿಕ ಸಮಾರಂಭದ ಪಟ್ಟಣದ ಲಯನ್ಸ್ ಕ್ಲಬ್ ಹಾಲ್ ನಲ್ಲಿ ನಡೆಯಿತು ಸಭಾ ಕಾರ್ಯಕ್ರಮದ ಉದ್ಘಾಟನೆಯನ್ನು ಹೆಸ್ಕಾಂ ಕಾರ್ಯನಿರ್ವಾಹಕ ಇಂಜಿನಿಯರ್ ವಿನೋದ ಭಾಗ್ವತ ದೀಪ ಬೇಳಗಿಸುವುದರ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು ನಂತರ ಮಾತನಾಡಿ, ಹೆಸ್ಕಾಂನ ಕುರಿತ ಜನಾಭಿಪ್ರಾಯ ಮೂಡಿಸುವಲ್ಲಿ ಗುತ್ತಿಗೆದಾರರ ಪಾತ್ರ ಮಹತ್ವವಾದುದು. ಗುತ್ತಿಗೆದಾರರು ಗುಣಮಟ್ಟದ ಕೆಲಸ ಮಾಡಿ ಕೀರ್ತಿ ತರುವಂತಾಗಬೇಕು ಎಂದರು.
ಈ ಸಂದರ್ಭದಲ್ಲಿ ಹಿರಿಯ ಗುತ್ತಿಗೆದಾರರಾದ ಎಸ್.ಕೆ.ಶೆಟ್ಟಿ, ಉಲ್ಲಾಸ ಪ್ರಭು, ಬಾಲಕ್ರಷ್ಣ ಭಟ್ಟ, ಪ್ರತಿಭಾವಂತ ವಿದ್ಯಾರ್ಥಿಗಳಾದ ಪೂರ್ವಿ ಎಸ್.ಕೆ. ಯಲ್ಲಾಪುರ, ರಾಜಗುರು ನಾಯ್ಕ ಶಿರಸಿ, ಅವರನ್ನು ಸನ್ಮಾನಿಸಲಾಯಿತು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಅನುಮತಿ ಪಡೆದ ವಿದ್ಯುತ್ ಗುತ್ತಿಗೆದಾರರ ಸಂಘದ ರಾಜ್ಯ ಸಮಿತಿಯ ಗೌರವ ಪ್ರಧಾನ ಕಾರ್ಯದರ್ಶಿ ಜಿ. ರುದ್ರೇಶ್ ಮಾತನಾಡಿ ರಾಜ್ಯದಲ್ಲಿ ವಿದ್ಯುತ್ ಕಂಪನಿ ಖಾಸಗೀಕರಣಗೊಂಡರೆ ಅದಕ್ಕೆ ಕಂಪನಿಯ ಕೆಲವು ಸ್ವಾರ್ಥ ಅಧಿಕಾರಿಗಳೇ ಕಾರಣ. ನಾವೆಲ್ಲರೂ ಒಗ್ಗಟ್ಟಿನಿಂದ ಕೆಲಸ ಮಾಡಬೇಕು. ನಮ್ಮ ಕೆಲಸದಿಂದ ಗ್ರಾಹಕರಿಗೆ ಅನುಕೂಲವಾಗಬೇಕು ವಿದ್ಯುತ್ ಸರಬರಾಜು ಕಂಪನಿ ಖಾಸಗೀಕರಣವಾದರೆ ನಮ್ಮೆಲ್ಲರಿಗೂ ತೊಂದರೆಯಾಗುವುದು ಎಂದು ಹೇಳಿದರು.
ವೇದಿಕೆಯಲ್ಲಿ ಜಿಲ್ಲಾ ಸಮಿತಿ ಅಧ್ಯಕ್ಷ ಮೋಹನ ಮಡಿವಾಳ, ಕೇಂದ್ರ ಸಮಿತಿ ಸದಸ್ಯ ಪಿ.ಆರ್.ನಾಯ್ಕ, ಮಂಜುನಾಥ ಹರಿಜನ, ಕಾರ್ಯದರ್ಶಿ ಪ್ರದೀಪ ಗುನಗಿ, ಖಜಾಂಚಿ ಅಣ್ಣಪ್ಪ ಮಡಿವಾಳ, ಸಂಘಟನಾ ಕಾರ್ಯದರ್ಶಿ ಚಂದ್ರಹಾಸ ನಾಯ್ಕ, ಮೋಸಿನ್ ಖಾನ್ ಗೋರಿಖಾನ್, ಸಂಘದ ತಾಲೂಕು ಅಧ್ಯಕ್ಷ ಎಸ್.ವಿ.ನಾಯ್ಕ, ಹೆನ್ರಿ ಲೀಮಾ, ಹೆಸ್ಕಾಂ ಎಇಇ ರಾಮಕೃಷ್ಣ ಭಟ್ಟ, ಶಾಖಾಧಿಕಾರಿಗಳಾದ ಶಂಕರ ಗೌಡ, ಸತೀಶ ನಾಯ್ಕ, ಗಜಾನನ ನಾಯ್ಕ, ಪ್ರಸಾದ ನಾಯ್ಕ, ಆನಂದರಾವ್ ಇತರರಿದ್ದರು.
Leave a Comment