ಭಟ್ಕಳ: ಇಲ್ಲಿನ ನ್ಯಾಶನಲ್ ಹೈಸ್ಕೂಲ್ ಬಳಿ 1995 ರಲ್ಲಿ ನಡೆದ ಕೊಲೆಯತ್ನ ಪ್ರಕರಣದಲ್ಲಿ ನ್ಯಾಯಾಲಯಕ್ಕೆ ಹಾಜರಾಗದೇ ಪರಾರಿಯಾಗಿದ್ದ ಆರೋಪಿಯನ್ನ 26 ವರ್ಷಗಳ ಬಳಿಕ ಬಂಧಿಸುವಲ್ಲಿ ಮುರ್ಡೇಶ್ವರ ಪೊಲೀಸರು ಯಶಸ್ವಿಯಾಗಿದ್ದಾರೆ.
ಭಟ್ಕಳದ ಮದಿನಾ ಕಾಲೋನಿ ನಿವಾಸಿ ನಜೀರ್ ಅಹ್ಮದ್(48) ಬಂಧಿತ ಆರೋಪಿಯಾಗಿದ್ದು ಈತ ಪ್ರಕರಣದ ನಂತರ ಮುಂಬೈ ಮತ್ತು ದುಬೈಯಲ್ಲಿ ತಲೆಮರೆಸಿಕೊಂಡಿದ್ದ.

ಈತನನ್ನು ಭಟ್ಕಳ ಪೊಲೀಸ್ ವೃತ್ತ ನಿರೀಕ್ಷರಾದ ದಿವಾಕರ ಪಿ.ಎಮ್‌ರವರ ನೇತೃತ್ವದಲ್ಲಿ ಮುರ್ಡೇಶ್ವರ ಪಿ.ಎಸ್.ಐ ರವೀಂದ್ರ ಬಿರಾದಾರ, ಸಿಬ್ಬಂದಿಗಳಾದ ಮಂಜುನಾಥ ಗೌಡರ ಎ.ಎಸ್.ಐ, ಭಟ್ಕಳ ಗ್ರಾಮೀಣ ಮೊಲೀಸ್ ಠಾಣೆ, ನಾಗರಾಜ ಮೊಗೇರ ಸಿ.ಹೆಚ್.ಸಿ, ಭಟ್ಕಳ ಶಹರ ಪೊಲೀಸ್ ಠಾಣೆ, ಶ್ರೀ ಲಕ್ಷಣ ಪೂಜಾರಿ, ಸಿ.ಪಿ.ಸಿ, ಮುರ್ಡೇಶ್ವರ ಪೊಲೀಸ್ ಠಾಣೆ ಇವರನ್ನೊಳಗೊಂಡ ತಂಡವು ಈತನನ್ನು ದಸ್ತಗಿರಿ ಮಾಡಿರುತ್ತದೆ. ಈತನನ್ನು ಮಾನ್ಯ ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ನ್ಯಾಯಾಲಯವು ನ್ಯಾಯಾಂಗ ಬಂಧನ ವಿಧಿಸಿದೆ.
ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ, ಕಾರವಾರ, ಹೆಚ್ಚುವರಿ ಪೊಲೀಸ್ ಅಧೀಕ್ಷಕರು, ಉತ್ತರ ಕನ್ನಡ ಜಿಲ್ಲೆ ಕಾರವಾರ ಮತ್ತು ಡಿ.ಎಸ್.ಪಿ ಭಟ್ಕಳ ಇವರುಗಳ ಮಾರ್ಗದರ್ಶನದಲ್ಲಿ ಈತನ ಪತ್ತೆಯ ಕಾರ್ಯವನ್ನು ಕೈಗೊಳ್ಳಲಾಗಿದೆ.
Leave a Comment