ಹೊನ್ನಾವರ: ತಾಲೂಕಿನಲ್ಲಿ ದಂಡಿ ಚಲಚಿತ್ರದ ಶೂಟಿಂಗ್ ನಡೆಯುತ್ತಿದ್ದು, ಚಿತ್ರಿಕರಣ ಕಡ್ಲೆ ಗ್ರಾಮ ಪಂಚಾಯತ ವ್ಯಾಪ್ತಿಯ ಉಂಚಗೇರಿ ಗೊವಿಂದ ಭಾಗ್ವತರ ಮನೆಯಲ್ಲಿ ರಂಗಕರ್ಮಿ ದಾಮು ನಾಯ್ಕ ಅವರ ಮುಂದಾಳತ್ವದಲ್ಲಿ ಕಳೆದ ನಾಲ್ಕು ದಿನಗಳಿಂದ ನಡೆಯುತ್ತಿದ್ದು, ಮಂಗಳವಾರ ಕಡ್ಲೆ ಭಾಗದಲ್ಲಿ ಚಿತ್ರಿಕರಣಕ್ಕೆ ಕೊನೆಯ ದಿನವಾಗಿತ್ತು.

ಕಳೆದ ನಾಲ್ಕು ದಿನಗಳಿಂದ ಚಿತ್ರೀಕರಣದಲ್ಲಿ ಪಾಲ್ಗೊಂಡಿದ್ದ ಬಿಜೆಪಿ ರಾಜ್ಯ ಜವಾಬ್ದಾರಿ ಹೊಂದಿರುವ ಹಿರಿಯ ನಟಿ ತಾರಾ ಅವರನ್ನ ಕಡ್ಲೆ ಗ್ರಾಮ ಪಂಚಾಯತ ಮತ್ತು ಸಮಸ್ತ ಊರ ನಾಗರಿಕರ ಪರವಾಗಿ ಪಂಚಾಯತ ಅಧ್ಯಕ್ಷ ಗೋವಿಂದ ಗೌಡ ಅವರು ಸನ್ಮಾನಿಸಿ ಗೌರವಿಸಿದರು. ಸನ್ಮಾನ ಸ್ವೀಕರಿಸಿದ ಬಳಿಕ ನಟಿ ತಾರಾ ಮಾತನಾಡಿ ಈ ಹಿಂದೆ ಬಿಜೆಪಿ ಪರವಾಗಿ ಚುನಾವಣಾ ಪ್ರಚಾರಕ್ಕಾ ತಾಲೂಕಿಗೆ ಬಂದಿದ್ದರು, ಇಷ್ಟು ದಿನಗಳ ಇಲ್ಲಿ ವಾಸ್ತವ್ಯಕ್ಕೆ ಅವಕಾಶ ಸಿಕ್ಕಿರಲಿಲ್ಲ. ಆದರೆ ಈಗ ಆ ಸುಯೋಗ ಬಂದಿದೆ.

ತಾಲೂಕು ತುಂಬಾ ಸ್ವಚ್ಚವಾಗಿದ್ದು ಮೋದಿಯವರ ಸ್ವಚ್ಚ ಭಾರತ ಕನಸನ್ನ ನನಸಾಗಿಸುವತ್ತ ಹೆಜ್ಜೆ ಇಟ್ಟಿದೆ. ಈ ಭಾಗದ ಸಾರ್ವಜನಿಕರ ಸ್ವಚ್ಚತೆ ಬಗ್ಗೆ ಕಾಳಜಿ ಇತರರಿಗೂ ಮಾದರಿಯಾಗಲಿ. ಅಲ್ಲದೆ ನಮಗೆ ಸಿಕ್ಕ ಗೌರವ ಪ್ರೀತಿ ವಿಶ್ವಾಸ ಸದಾ ಕಾಲ ನೆನಪಿನಲ್ಲಿ ಇರಲಿದೆ ಇನ್ನು ಅವಕಾಶ ಒದಗಿ ಬಂದರೆ ಈ ಭಾಗಕ್ಕೆ ಬರಲಿದ್ದೇನೆ ಎಂದರು
ಈ ಸಂದರ್ಭದಲ್ಲಿ ರವಿ ಹೆಗಡೆ, ಮಹಾಭಲೇಶ್ವರ ಮಡಿವಾಳ, ವಿನೋದ ಶೆಟ್ಟಿ, ಕಾರ್ಯದರ್ಶಿ ವಿನಾಯಕ ನಾಯ್ಕ, ವಿನಾಯಕ ಮಡಿವಾಳ ನಾಯಕ ನಟ ಯುವಾನ್ ದೇವ್ ಉಪಸ್ಥಿತರಿದ್ದರು.




Leave a Comment