ಹೊನ್ನಾವರ: ಸಂಘಟನೆಯ ಬಲದಿಂದ ಸಮಾಜದಲ್ಲಿ ಅಭಿವೃದ್ಧಿ ಸಾಧಿಸಬಹುದಾಗಿದೆ’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಶಿವಾನಂದ ಹೆಗಡೆ ಕಡತೋಕಾ ಅಭಿಪ್ರಾಯಪಟ್ಟರು. ಅವರು ತಾಲ್ಲೂಕಿನ ಚಿಕ್ಕನಕೋಡಿನ ಓಂಕಾರ ಕ್ರೀಡಾ ಮತ್ತು ಸಾಂಸ್ಕøತಿಕ ಅಭಿವೃದ್ಧಿ ಸಂಘದ ಉದ್ಘಾಟನೆ ನೆರವೇರಿಸಿ ಅವರು ಮಾತನಾಡಿದರು.
ಜಿ.ಎಸ್.ಬಿ. ಸಮುದಾಯ ಶಿಸ್ತು ಹಾಗೂ ಪ್ರಾಮಾಣಿಕತೆಗೆ ಹೆಸರಾಗಿದ್ದು ಸಮಾಜಕ್ಕೆ ತನ್ನ ಕೊಡುಗೆ ನೀಡಿದೆ. ದೇಶದಲ್ಲಿ ಶಾಂತಿ ನೆಲಸಬೇಕಿದ್ದು ಅನ್ಯಾಯದ ವಿರುದ್ಧ ಪ್ರತಿಭಟನೆಯನ್ನು ಹಮ್ಮಿಕೊಳ್ಳುವ ಅನಿವಾರ್ಯ ಪರಿಸ್ಥಿತಿ ಇದೆ. ಓಂಕಾರ ಕ್ರೀಡಾ ಮತ್ತು ಸಾಂಸ್ಕೃತಿಕ ಅಭಿವೃದ್ಧಿ ಸಂಘ ಈ ನಿಟ್ಟಿನಲ್ಲಿ ಸಮಾಜದ ಪ್ರಗತಿಗೆ ಅಗತ್ಯವಾದ ವಿಧಾಯಕ ಕಾರ್ಯಗಳನ್ನು ಕೈಗೊಳ್ಳಲಿ’ ಎಂದು ಅವರು ಆಶಿಸಿದರು.

ಕೃಷಿಕ ಲಕ್ಷ್ಮೀಕಾಂತ ಭಟ್ಟ, ಮುಖಂಡ ದಾಮೋದರ ನಾಯಕ, ನಿವೃತ್ತ ಶಿಕ್ಷಕಿ ಶಾರದಾ ಶ್ಯಾನಭಾಗ, ದಾನಿ ವತ್ಸಲಾ ಮೋಹನ ಶ್ಯಾನಭಾಗ ಹಾಗೂ ಚಿಕ್ಕನಕೋಡ ಕಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕ ರಾಮಾ ಗೌಡ ಅವರನ್ನು ಸನ್ಮಾನಿಸಲಾಯಿತು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ಗೋವಿಂದಮೂರ್ತಿ ದೇವಸ್ಥಾನದ ಮೆನೆಜಿಂಗ್ ಟ್ರಸ್ಟಿ ದಾಮೋದರ ನಾಯಕ ವಹಿಸಿದ್ದರು.
ವೇದಿಕೆಯಲ್ಲಿ ಕಿರಾಣ ವ್ಯಾಪಾರಿ ರಮೇಶ ಪ್ರಭು ಹಡಿನಬಾಳ, ಸಮಾಜದ ಹಿರಿಯ ವಾಮನ ಭಟ್, ತಾಲ್ಲೂಕು ಪಂಚಾಯಿತಿ ಸದಸ್ಯ ಆರ್.ಪಿ.ನಾಯ್ಕ, ಮುಖಂಡ ವೆಂಕಟೇಶ ಪ್ರಭು, ಗ್ರಾಮ ಪಂಚಾಯಿತಿ ಸದಸ್ಯರು ಉಪಸ್ಥಿತರಿದ್ದರು.
Leave a Comment