“ಕ್ಷಯ ರೋಗ ನಿರ್ಮೂಲನೆಗೆ ಆರೋಗ್ಯ ಇಲಾಖೆ ಸಾಕಷ್ಟು ಕಾರ್ಯಕ್ರಮಗಳನ್ನು, ಯೋಜನೆಗಳನ್ನು ಹಾಕಿಕೊಂಡಿದ್ದು, ಆಶಾ ಕಾರ್ಯಕರ್ತೆಯರು ಸೇರಿದಂತೆ ಆರೋಗ್ಯ ಇಲಾಖೆ ಸಿಬ್ಬಂಧಿಗಳು ಕ್ಷಯ ರೋಗ ನಿರ್ಮೂಲನೆ ಮಾಡಲು ಪಣ ಪಣ ತೊಟ್ಟಿದ್ದಾರೆ. ಅವರ ಪ್ರಯತ್ನಕ್ಕೆ ಸಾರ್ವಜನಿಕರಾಗಿ ನಾವು ಸಹ ಕೈ ಜೋಡಿಸಬೇಕಿದೆ. ಆಗ ಮಾತ್ರ ಕ್ಷಯ ರೋಗ ನಿರ್ಮೂಲನೆ ಮಾಡಲು ಸಾದ್ಯ” ಎಂದು ಪಟ್ಟಣ ಪಂಚಾಯತ ಅಧ್ಯಕ್ಷರಾದ ಶಿವರಾಜ್ ಮೇಸ್ತ ಹೇಳಿದ್ದರು.

ಅವರು ಆರೋಗ್ಯ ಇಲಾಖೆ ವತಿಯಿಂದ ವಿಶ್ವ ಕ್ಷಯ ರೋಗ ದಿನಾಚರಣೆ ನಿಮಿತ್ತ ಹಮ್ಮಿಕೊಳ್ಳಲಾದ ಜಾಗೃತಿ ಜಾಥಾ ಕಾರ್ಯಕ್ರಮಕ್ಕೆ ಹಸಿರು ನಿಶಾನೆ ತೋರಿಸಿ ಚಾಲನೆ ಗೊಳಿಸಿ ಮಾತನಾಡಿದ್ದರು. ಪ್ರಾಸ್ತವಿಕ ಮಾತುಗಳನಾಡಿದ ತಾಲೂಕಾ ಆರೋಗ್ಯಾಧಿಕಾರಿಗಳಾದ ಡಾ|| ಉಷಾ ಹಾಸ್ಯಗಾರವರು “ಪ್ರತಿ ವರ್ಷ ಮಾರ್ಚ ೨೪ ರಂದು ವಿಶ್ವ ಕ್ಷಯ ರೋಗ ದಿನಾಚರಣೆ ಆಚರಿಸಲಾಗುತ್ತಿದ್ದು ಆರೋಗ್ಯ ಇಲಾಖೆ “ರಾಷ್ಟಿçÃಯ ಕ್ಷಯ ರೋಗ ನಿರ್ಮೂಲನಾ ಕಾರ್ಯಕ್ರಮ(ಓಖಿಇP)”ದಡಿಯಲ್ಲಿ ಹಲವಾರು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದು ಕ್ಷಯ ರೋಗ ನಿರ್ಮೂಲನೆಗೆ ಪಣ ತೊಟ್ಟಿದೆ.

೨೦೨೫ ರೊಳಗೆ ಭಾರತ ಕ್ಷಯ ರೋಗ ಮುಕ್ತವಾಗಬೇಕು ಅನ್ನುವ ಗುರಿಯೊಂದಿಗೆ ಕ್ಷಯ ರೋಗ ನಿರ್ಮೂಲನಗೆ ನಾವೆಲ್ಲ ಪರಿಣಾಮಕಾರಿಯಾಗಿ ಕೆಲಸ ನಿರ್ವಹಿಸಬೇಕಿದೆ.ವಿಶ್ವದಲ್ಲಿ ಪ್ರತಿ ದಿನ ೪೦೦೦ ಜನರು ಕ್ಷಯ ರೋಗಕ್ಕೆ ತುತ್ತಾಗುತ್ತಿದ್ದಾರೆ.ಭಾರತದಲ್ಲಿ ಪ್ರತಿ ಐದು ನಿಮಿಷಕ್ಕೆ ಇಬ್ಬರು ಕ್ಷಯ ರೋಗದ ಕಾರಣದಿಂದ ಸಾವಿಗೀಡಾಗುತ್ತಿದ್ದಾರೆ. ಕ್ಷಯ ರೋಗ ಕಂಡು ಹಿಡಿಯುವಿಕೆ, ಮತ್ತು ಚಿಕಿತ್ಸೆ ವಿಧಾನಗಳಲ್ಲಿ ಹೊಸ ಹೊಸ ನಾವಿನ್ಯತೆ, ತಾಂತ್ರಿಕತೆ ಜಾರಿಗೆ ತರಲಾಗುತ್ತಿದೆ.

ಪ್ರತಿ ತಾಲೂಕಾ ಆಸ್ಪತ್ರೆಗಳಲ್ಲಿ ಟ್ರೂ ನ್ಯಾಟ್ ಯಂತ್ರಗಳು ಬಂದಿದ್ದು ಕ್ಷಯ ರೋಗ ಪತ್ತೆ ಹಚ್ಚುವಿಕೆಯಲ್ಲಿ ಮೊದಲಿಗಿಂತ ವೇಗವಾಗಿದೆ ಮತ್ತು ನಿಖರವಾದ ಗುಣಾತ್ಮಕ ವರದಿಗಳನ್ನು ನಿರೀಕ್ಷಿಸಿಬಹುದಾಗಿದೆ. ಇದರಿಂದ ಕ್ಷಯ ರೋಗ ಹರಡುವಿಕೆಯನ್ನು ತಡೆಗಟ್ಟಬಹುದಾಗಿದೆ ಮತ್ತು ಬೇಗನೆ ಚಿಕಿತ್ಸೆಗೆ ಒಳಪಡಿಸಬಹುದಾಗಿದೆ.ಸಾವುಗಳನ್ನು ಕಡಿಮೆ ಮಾಡಬಹುದಾಗಿದೆ. ಮೈಕೋ ಬ್ಯಾಕ್ಟಿರಿಯಂ ಟ್ಯೂಬರ್ ಕ್ಯೂಲೋಸಿಸ್ ಎನ್ನುವ ಸೂಕ್ಷö್ಮ ರೋಗಾಣುವಿನಿಂದ ಗಾಳಿಯ ಮೂಲಕ ಕ್ಷಯರೋಗವು ಹರಡುತ್ತದೆ. ಶ್ವಾಸಕೋಶದ ಕ್ಷಯ ಒಬ್ಬರಿಂದ ಒಬ್ಬರಿಗೆ ಹರಡುವ ಸಾಂಕ್ರಮಿಕ ರೋಗವಾಗಿದೆ. ಎರಡು ವಾರ ಅಥವಾ ಹೆಚ್ಚಿನ ಅವಧಿ ಕೆಮ್ಮು, ಕೆಲವು ವೇಳೆ ಕಫದ ಜೊತೆಗೆ ರಕ್ತ ಕಾಣಿಸುವುದು, ರಾತ್ರಿ ವೇಳೆ ಜ್ವರ ಕಾಣಿಸಿಕೊಳ್ಳುವುದು,ಬೇವರುವುದು ಇವೆಲ್ಲ ಲಕ್ಷಣಗಳಿರುವವರು ಕ್ಷಯ ರೋಗ ಪತ್ತೆಗೆ ಒಳಗಾಗಬೇಕಾಗುತ್ತದೆ.ಕ್ಷಯ ರೋಗಿಗಳಿಗೆ ಸರಕಾರಿ ಆಸ್ಪತ್ರೆಗಳಲ್ಲಿ ಉಚಿತ ಚಿಕಿತ್ಸೆ ಇದ್ದು, ಸರಿಯಾಗಿ ಚಿಕಿತ್ಸೆ ಪಡೆದರೆ ಸಂಪೂರ್ಣ ಗುಣಮುಖನಾಗುತ್ತಾನೆ.

ಕ್ಷಯ ರೋಗ ನಿರ್ಮೂಲನೆಗೆ ಸಂಬದಿಸಿದAತೆ ದೇಶದಲ್ಲಿ ಖುದ್ದು ಪ್ರಧಾನ ಮಂತ್ರಿಗಳಾದ ಮೋದಿಯವರೇ ಮೇಲ್ವಿಚಾರಣೆ ನಡೆಸುತ್ತಿದ್ದಾರೆ.ಕ್ಷಯ ರೋಗ ನಿರ್ಮೂಲನೆಯಲ್ಲಿ ನಾವೆಲ್ಲ ಸೇರಿ ಪರಿಣಾಮಕಾರಿಯಾಗಿ ಕಾರ್ಯ ನಿರ್ವಹಿಸಿದ್ದಲ್ಲಿ ಪ್ರಧಾನಿಗಳ ಕನಸಾದ “೨೦೨೫ ಕ್ಷಯ ಮುಕ್ತ ಭಾರತದ” ನನಸು ಮಾಡಬಹುದು.” ಎಂದು ಹೇಳಿದ್ದರು.ಈ ವರ್ಷ ಕ್ಷಯ ರೋಗ ದಿನಾಚರಣೆ ನಿಮಿತ್ತ ಆಯ್ದ ಸರಕಾರಿ ಕಚೇರಿಗಳ ಮೇಲೆ ಕೆಂಪು ಲೈಟಿಂಗ್ ವ್ಯವಸ್ಥೆ, ಶಾಲಾ ವಿದ್ಯಾರ್ಥಿಗಳ ಭಾಷಣ ಸ್ಪರ್ಧೆ, ಸೇರಿದಂತೆ ಹಲವಾರು ರೀತಿಯ ಜಾಗೃತಿ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದೆ. ಜಾಥದಲ್ಲಿ ಕ್ಷಯ ವಿಭಾಗದ ಪ್ರವೀಣ,ಶರತ್, ನಿತೀನ್, ಪುರುಷ ಮೇಲ್ವಿಚರಕರಾದ ಆನಂದ ಶೇಟ್,ವಿನಾಯಕ,೫೦ ಕ್ಕು ಹೆಚ್ಚಿನ ಮಂದಿ ಆಶಾ ಕಾರ್ಯಕರ್ತೆಯರು, ಆರೋಗ್ಯ ಇಲಾಖೆ ಸಿಬ್ಬಂಧಿಗಳು ಹಾಜರಿದ್ದರು.
Leave a Comment