ಭಟ್ಕಳ: ಪಟ್ಟಣದ ಮೂಡಭಟ್ಕಳ ಭೈಪಾಸ್ ರಸ್ತೆಗೆ ಅಂಡರಪಾಸ್ ಒದಗಿಸಬೇಕು ಎಂದು ಮೂಡಭಟ್ಕಳ ಭೈಪಾಸ್ ರಸ್ತೆ ಅಂಡರಪಾಸ್ ಹೋರಾಟ ಸಮಿತಿ,ಹಾಗೂ ಮುಟ್ಟಳ್ಳಿ ಮತ್ತು ಮೂಡಭಟ್ಕಳ ಸಾರ್ವಜನಿಕರು ಸದಸ್ಯರು ಶುಕ್ರವಾರ ಪ್ರತಿಭಟನೆ ನಡೆಸಿ ಭಟ್ಕಳ ಉಪವಿಭಾಗಾಧಿಕಾರಿಗಳಿಗೆ ಮನವಿ ನೀಡಿ ಆಗ್ರಹಿಸಿದರು.

ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಮುಟ್ಟಳ್ಳಿ,ಕೋಣಾರ, ಹದ್ಲೂರು, ಬೇಹಳ್ಳಿ ಸಬ್ಬತ್ತಿ ಸೇರಿ ವಿವಿಧ ಗ್ರಾಮಗಳಿಂದ ಮೂಡಭಟ್ಕಳ ಬೈಪಾಸ್ ಮೂಲಕ ಭಟ್ಕಳ ಶಹರಕ್ಕೆ ಪ್ರತಿ ನಿತ್ಯ ವಿದ್ಯಾರ್ಥಿಗಳು, ಕೂಲಿ ಕಾರ್ಮಿಕರು, ಉದ್ಯೋಗಸ್ಥರು ತಿರುಗಾಡುತ್ತಾರೆ. ಕೊಂಕಣ ರೈಲ್ವೆ ಸ್ಟೇಷನ್ಗೆ ಹೋಗಿ ಬರಲು ಕೂಡ ಇರುವದು ಇದು ಒಂದೆ ಮಾರ್ಗ. ಈ ಬೈಪಾಸ್ ರಸ್ತೆಯ ನೆಹರುರೋಡ ಮಾರ್ಗವಾಗಿ ಶಹರವನ್ನು ಅತಿ ಕಡಿಮೆ ಅವಧಿಯಲ್ಲಿ ತಲುಪುವ ಮಾರ್ಗವಾಗಿರುತ್ತದೆ. ಇಂತಹ ಜನ ನಿಬಿಡ ರಸ್ತೆಯಲ್ಲಿ ರಾಷ್ಟ್ರೀಯ ಹೆದ್ದಾರಿ ಅಗಲೀಕರಣ ಕಾಮಗಾರಿ ಮಾಡುವಾಗ ಅಂಡರ್ಪಾಸ್ ಸೌಲಭ್ಯ ಕೊಡದೇ ಇರುವುದರಿಂದ ಪ್ರತಿ ನಿತ್ಯ ರಸ್ತೆ ಅಪಘಾತಗಳು ನಡೆಯುತ್ತಿವೆ. ಈ ಕುರಿತು ಸಿಸಿಟಿವಿ ಪೂಟೇಜ್ ಕೂಡ ನಮ್ಮ ಬಳಿ ಲಭ್ಯ ಇದೆ. ಕೂಡಲೆ ಸ್ಥಳವನ್ನು ಪರೀಶೀಲನೆ ನಡೆಸಿ ವಾಹನ ದಟ್ಟಣೆ ಮತ್ತು ಪಾದಾಚಾರಿಗಳ ಓಡಾಟವನ್ನು ಗಣನೆಗೆ ತೆಗೆದುಕೊಂಡು ಈ ಸ್ಥಳದಲ್ಲಿ ಅಂಡರ್ ಪಾಸ್ ಸೌಲಭ್ಯವನ್ನು ಒದಗಿಸಬೇಕು ಎಂದು ಆಗ್ರಹಿಸಿದ್ದಾರೆ. ೨೦೧೭ರಲ್ಲಿ ಶಾಸಕರು ಸ್ಥಳ ಪರಿಶೀಲನೆ ನಡೆಸಿ ಅಂದಿನ ಉಪವಿಭಾಗಾಧಿಕಾರಿಗಳಿಗೆ ಅಂಡರಪಾಸ್ ಮಹತ್ವ ವಿವರಿಸಿದ್ದರು. ಅವರು ಈ ಕುರಿತು ಮೇಲಾಧಿಕಾರಿಗಳಿಗೆ ಶಿಫಾರಸ್ಸು ಮಾಡಿದ್ದರು. ಆದರೆ ರಾಷ್ಟ್ರೀಯ ಹೆದ್ದಾರಿ ಪ್ರಾಧಿಕಾರದವರು ಈ ರಸ್ತೆಯ ಕಾಮಗಾರಿಯನ್ನು ಇತ್ತೀಚೆಗೆ ಪ್ರಾರಂಭ ಮಾಡಲು ತಯಾರಿ ನಡೆಸಿದ್ದು,
ಅಂಡರಪಾಸ್ ಸೌಲಭ್ಯದ ಕಾಮಗಾರಿ ನಡೆಸುವ ಕುರಿತು ಸಾರ್ವಜನಿಕರಿಗೆ ಯಾವುದೆ ಮಾಹಿತಿ ನೀಡುತ್ತಿಲ್ಲ. ಸಂಭದಪಟ್ಟ ಅಧಿಕಾರಿಗಳು ಈ ಕುರಿತು ನಮಗೆ ಸೂಕ್ತ ಮಾಹಿತಿ ಒದಗಿಸಬೇಕು. ಒಂದು ವೇಳೆ ಅಂಡರಪಾಸ್ ಮಂಜೂರಿ ಆಗಿದ್ದರೆ ಸಾರ್ವಜನಿಕರಿಗೆ ಮಾಹಿತಿ ನೀಡಬೇಕು. ಇಲ್ಲವಾದರೆ ಅಂಡರಪಾಸ್ ಸೌಲಭ್ಯ ಒದಗಿಸಬೇಕು ಎಂದು ಸ್ಥಳೀಯರು ಆಗ್ರಹಿಸಿದರು. ಈ ಸಂದರ್ಬದಲ್ಲಿ ಮುಟ್ಟಳ್ಳಿ ಗ್ರಾ.ಪಂ ಅಧ್ಯಕ್ಷ ಶೇಷಗಿರಿ ನಾಯ್ಕ ಸೇರಿ,ವೆಂಕಟೇಶ ನಾಯ್ಕ,ಜಟ್ಟಪ್ಪ ನಾಯ್ಕ, ಚಂದ್ರಹಾಸ ನಾಯ್ಕ, ನರೇಂದ್ರ ನಾಯಕ, ಸುರೇಂದ್ರ ಭಟ್ಕಳಕರ, ಶಂಕರ ಶೆಟ್ಟಿ ಮಂಜುನಾಥ ನಾಯ್ಕ,ಮಾಸ್ತಪ್ಪ ನಾಯ್ಕ,ಮಂಜಪ್ಪ ನಾಯ್ಕ,ವೆಂಕಟೇಶ ಟಿ.ನಾಯ್ಕ,ರಾಘವೇಂದ್ರ ನಾಯ್ಕ,ಲೋಕೇಶ್ ನಾಯ್ಕ,ಶಿವರಾಮ ನಾಯ್ಕ,ಹನುಮಂತ ನಾಯ್ಕ,ರವಿಚಂದ್ರನ್ ನಾಯ್ಕ,ರಾಘವೇಂದ್ರ ನಾಯ್ಕ,ಸೇರಿ ಇತರರು ಇದ್ದರು.
Leave a Comment