• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ನಾನು ಶಾಸಕನಾಗಿರುವ ವರೆಗೆ ಮೀನುಮಾರುಕಟ್ಟೆ ಸ್ಥಳಾಂತರಕ್ಕೆ ಅವಕಾಶ ಮಾಡಿಕೊಡಲ್ಲ-ಸುನಿಲ್ ನಾಯ್ಕ

April 2, 2021 by bkl news Leave a Comment

ಭಟ್ಕಳ: ಭಟ್ಕಳ ಪುರಸಭೆಯು ಈಗಿದ್ದ ಮೀನುಮಾರುಕಟ್ಟೆಯನ್ನು ಹೊಸದಾಗಿ ನಿರ್ಮಿಸಿದ ಮೀನುಮಾರುಕಟ್ಟೆಗೆ ಸ್ಥಳಾಂತರಿಸುವÀ ಆದೇಶಕ್ಕೆ ಭಟ್ಕಳ-ಹೊನ್ನಾವರ ವಿಧಾನಸಭಾ ಕ್ಷೇತ್ರ ಶಾಸಕ ಸುನಿಲ್ ತೀವ್ರ ವಿರೋಧ ವ್ಯಕ್ತಪಡಿಸಿದ್ದು ಇದೊಂದು ಅವೈಜ್ಞಾನಿಕ ನಿರ್ಧಾರವಾಗಿದ್ದು ನಾನು ಶಾಸಕನಾಗಿರುವವ ತನಕ ಈ ಹಳೆಯ ಮಾರುಕಟ್ಟೆ ಸ್ಥಳಾಂತರಕ್ಕೆ ಅವಕಾಶ ಮಾಡಿಕೊಡುವುದಿಲ್ಲ ಎಂದು ಖಡಕ್ ಸಂದೇಶ ನೀಡಿದ್ದಾರೆ.


ಅವರುಇಲ್ಲಿನ ಹಳೆಯ ಮೀನುಮಾರುಕಟ್ಟೆಯಲ್ಲಿ ಸೇರಿದ ಮೀನುಮಾರಾಟಗಾರ ಮಹಿಳೆಯರನ್ನುದ್ದೇಶಿಸಿ ಮಾತನಾಡಿದರು.ಭಟ್ಕಳದಲ್ಲಿ ಇಂತಹ ಐದಾರು ಮೀನು ಮಾರುಕಟ್ಟೆ ಇದ್ದರೂ ಸ್ಥಳಾಭಾವ ಉಂಟಾಗುತ್ತದೆ. ಇಂತಹದ್ದರಲ್ಲಿ ಇದ್ದ ಮಾರುಕಟ್ಟೆಯನ್ನು ಸ್ಥಳಾಂತರಿಸುವ ನಿರ್ಧಾರಕ್ಕೆ ಬಂದಿರುವುದು ಸರಿಯಲ್ಲ. ಇದಿರಂದಾಗಿ ಸಾರ್ವಜನಿಕರಿಗೆ ತೋಂದರೆಯಾಗುವದಲ್ಲದೆ ಮೀನುಮಾರಾಟಗಾರರಿಗೂ ತೊಂದರೆಯಾಗುತ್ತದೆ. ಈಗಿರುವ ಕಟ್ಟಡವನ್ನು ದುರಸ್ತಿ ಮಾಡಿಕೊಡಿ ನಿಮ್ಮಿಂದ ಆಗದಿದ್ದರೆ ನಾನೆ ಅದನ್ನು ದುರಸ್ತಿ ಮಾಡಿಕೊಡುತ್ತೇನೆ ಎಂದು ಭಟ್ಕಳ ಪುರಸಭೆಗೆ ಅವರು ಖಡಕ್ ಸಂದೇಶ ರವಾನಿಸಿದ್ದಾರೆ.


ಮತ್ಸ÷್ಯಕ್ಷಾಮದಿಂದಾಗಿ ಇಂದು ಮೀನುಗಾರರು ಅತ್ಯಂತ ಕಷ್ಟದಲ್ಲಿದ್ದಾರೆ. ಪುರಸಭೆಯವರು ತಕ್ಷಣ ತಮ್ಮ ಆದೇಶ ಹಿಂಪಡೆಯಬೇಕು. ಯಾವುದೇ ಕಾರಣಕ್ಕೂ ಮೀನುಗಾರರು ಈ ಹಳೆಯ ಮಾರುಕಟ್ಟೆಯನ್ನು ತೆರವುಗೊಳಿಸುವ ಅವಶ್ಯಕತೆಯಿಲ್ಲ. ನಾನಿರುವ ತನಕ ನಿಮ್ಮನ್ನು ಇಲ್ಲಿಂದ ಯಾರೂ ಕೂಡ ಅಲುಗಾಡಿಸಲು ಸಾಧ್ಯವಿಲ್ಲ ಎಂದರು. ಶಾಸಕರ ಭರವಸೆಗೆ ಮಿನುಗಾರರು ಖುಷ್ ಆಗಿದ್ದು ಸುನಿಲ್ ನಾಯ್ಕರಿಗೆ ಜೈಜೈಕಾರ ಹಾಕಿದರು.ಕಳೆದ ಹಲವು ವರ್ಷಗಳಿಂದಲೂ ಸಂತೆ ಮಾರುಕಟ್ಟೆಯಲ್ಲಿ ನಿರ್ಮಿಸಿರುವ ಸುಸಜ್ಜಿತ ಮೀನುಮಾರುಕಟ್ಟೆಗೆ ಪುರಸಭೆಯ ಹಳೆ ಮೀನುಮಾರುಕಟ್ಟೆ ಸ್ಥಳಾಂತರಿಸುವ ಪ್ರಸ್ತಾಪವಿದ್ದು ಈಗ ಎಪ್ರಿಲ್ ಒಂದರಿAದ ಅದನ್ನು ಕಟ್ಟುನಿಟ್ಟಾಗಿ ಜಾರಿಗೊಳಿಸುವುದಾಗಿ ಪುರಸಭೆ ನಿರ್ಣಯಕೈಗೊಂಡಿತ್ತು. ಇದಕ್ಕೆ ಮೀನುಮಾರಾಟಗಾರರ ಹಾಗೂ ಮಾರುಕಟ್ಟೆ ಬಳಿ ಇರುವ ಅಂಗಡಿಕಾರರು ತೀವ್ರ ವಿರೋಧ ವ್ಯಕ್ತಪಡಿಸಿರುವ ಹಿನ್ನೆಲೆಯಲ್ಲಿ ಮಂಗಳವಾರ ಸಭೆ ನಡೆಸಿದ ಸಹಾಯಕ ಆಯುಕ್ತೆ ಮಮತಾದೇವಿ ಸಧ್ಯಕ್ಕೆ ಹಳೆಯ ಮೀನುಮಾರುಕಟ್ಟೆಯಲ್ಲಿ ಮಾರಾಟ ಮುಂದುವರೆಸಲಿ ಎಂಬ ನಿರ್ಣಯವನ್ನು ಕೈಗೊಂಡಿದ್ದರು.

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Bhatkal News, Canara News Tagged With: ಅವೈಜ್ಞಾನಿಕ ನಿರ್ಧಾರ, ಕಟ್ಟಡವನ್ನು ದುರಸ್ತಿ, ತೀವ್ರ ವಿರೋಧ, ಮೀನುಮಾರಾಟಗಾರ, ಹಳೆಯ ಮಾರುಕಟ್ಟೆ ಸ್ಥಳಾಂತ, ಹಳೆಯ ಮೀನುಮಾರುಕಟ್ಟೆ

Explore More:

About bkl news

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,120 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar