ಮಂಗಳೂರಿನ ಸುರತ್ಕಲ್ ಸಮೀಪದ ಅರಬ್ಬಿ ಸಮುದ್ರದಲ್ಲಿ ಕೇರಳದ ಮೀನುಗಾರಿಕಾ ದೋಣಿ ಮುಳುಗಡೆಯಾಗಿದೆ.
ಕೇರಳದ ಬೇಪೂರ್ನಿಂದ ಬೆಳಗ್ಗೆ 10 ಗಂಘೆಗೆ ರಾಭಾ ಎಂಬ ಮೀನುಗಾರಿಕಾ ದೋಣಿ ಹೊರಟ್ಟಿದ್ದು.ಅದರಲ್ಲಿ ಒಟ್ಟು 14 ಜನ ಮೀನುಗಾರರಿದ್ದರು. ಮಂಗಳವಾರ ಮುಂಜಾನೆ 2.05 ಗಂಘೆ ಸುಮಾರಿಗೆ ಸುರತ್ಕಲ್ ದೀಪಸ್ತಂಭದಿಂದ 42 ನಾಟಿಕಲ್ ಮೈಲ್ ದೂರ ಪಶ್ಚಿಮದಲ್ಲಿ ಆ ಮೀನುಗಾರಿಕಾ ದೋಣಿ ಮುಳುಗಡೆಯಾಗಿದೆ. ದೋಣಿಯಲ್ಲಿದ್ದ ಇಬ್ಬರ ರಕ್ಞಣೆ ಮಾಡಲಾಗಿದ್ದು. ಮೂವರು ಮೃತ ದೇಹ ಪತ್ತೆಯಾಗಿದೆ. ಉಳಿದ 9 ಮಂದಿ ನಾಪತ್ತೆಯಾಗಿದ್ದಾರೆ.
ತಕ್ಷಣ ಹತ್ತಿರದಲ್ಲಿದ್ದ ಆ್ಯಪ್ ಲೆ ಹಾವ್ರೆ ಮರ್ಚಂಟ್ ಶಿಪ್ ಮತ್ತು ಕೋಸ್ಟ್ ಗಾರ್ಡ ಸಿಬ್ಬಂದಿ ಸುನೀಲ್ ದಾಸ್ ಮತ್ತು ವೇಲು ಮುರುಗನ್ ರಾಮಲಿಂಗನ್ ಎಂಬುವರನ್ನು ರಕ್ಷಣೆ ಮಾಡಿದ್ದಾರೆ. ಉಳಿದವರೆಲ್ಲ. ಕಾಣಿಯಾಗಿದ್ದು. ಕೋಸ್ಟ್ ಗಾರ್ಡನವರು ಹುಡುಕಾಟ ನಡೆಸಿ ಮೂವರು ಮೃತದೇಹ ಪತ್ತೆಹಚ್ಚಿದ್ದಾರೆ. ಅವರಲ್ಲಿ ಮಾಣಿಕ್ಯದಾಸ್, ಅಲೆಗ್ಸೆಂಡರ್ ಹಾಗೂ ಇನ್ನೊಬ್ಬನ ಗುರುತು ಪತ್ತೆಯಾಗಿಲ್ಲ. ಉಳಿದ 9 ಜನ ಮೀನುಗಾರರಿಗಾಗಿ ಕೋಸ್ಟ ಗಾರ್ಡ ನವರ ಹುಡುಕಾಟ ಮುಂದುವರೆಸಿದ್ದಾರೆ.
ರಕ್ಷಿಸಲ್ಪಟ್ಟವರು ಹಾಗೂ ಮೃತದೇಹಗಳನ್ನು ಕರಾವಳಿ ಕಾವಲು ಪೊಲೀಸ್ ಮಂಗಳೂರು ಠಾಣೆಗೆ ಹಸ್ತಾಂತರಿಸಿದ್ದಾರೆ.ತನಿಖೆ ಮುಂದುವರೆದಿದೆ ಎಂದು ಸಿಎಸ್ಪಿ ಪೊಲೀಸರು ತಿಳಿಸಿದ್ದಾರೆ.
Leave a Comment