ಆಫೀಶಿಯಲಿ ವಾಟ್ಸ್ಯ್ ಲಾಂಚ್ಡ ಪಿಂಕ್ ವಾಟ್ಸ್ಯಪ್ ವಿತ್ ಎಕ್ಸಸ್ಟ್ರಾನ್ಯೂ ಪ್ಯೂಚರ್ಸ್, ಮಸ್ಟ್ ಟೈ ದಿಸ್…
ಇಂಥದ್ದೊಂದು ಸಂದೇಶ ವಾಟ್ಸ್ಯಾಪ್ ಗ್ರೂಪ್ಗಳಲ್ಲಿ ಸಂಚಲನ ಸೃಷ್ಟಿಸಿತ್ತು.
ಬಹುತೇಕ ವಾಟ್ಸ್ಯಾಪ್ ಗ್ರೂಪ್ಗಳಲ್ಲಿ ಇಂತಹ ಸಂದೇಶಗಳು ಹರಿದಾಡುತ್ತಿತ್ತು. ಹೆಚ್ಚಿನವರು ಇದೇನಿದು ಹೊಸ ಫೀಚರ್ಸ ಇದೆಯಲ್ಲಾ ಎಂದು ಕ್ಲಿಕ್ ಮಾಡಿ ನೋಡಿದರೆ ಅದು ವೈರಸ್ ಕಾಟ.
ಹಾಗಂತ ಬಳಕೆದಾರರು ಈ ಲಿಂಕ್ ಒತ್ತಿ ಬಳಿಕ ಮೊಬೈಲ್ ಮುಚ್ಚಿಟ್ಟು ಕೂತರೂ ಕ್ಷಣಾರ್ಧದಲ್ಲಿ ಈ ಸಂದೇಶ ಕ್ಲಿಕ್ ಮಾಡಿದವರು ಹೆಸರನಲ್ಲಿ ಅವರು ಸದಸ್ಯರಾಗಿರುವ ಎಲ್ಲ ಗ್ರೂಪ್ಗಳಿಗೆ ಫಾರ್ವರ್ಡ್ ಆಗಿ ಹೋಗಿತ್ತು.
ಹಲವು ನಿರ್ದಿಷ್ಟ ಉದ್ದೇಶಗಳಿಗೆ ರಚನೆಗೊಂಡ ಗ್ರೂಪ್ಗಳಲ್ಲಿ ಈ ಬಗ್ಗೆ ಆಕ್ಷೇಪಗಳೂ ಕೇಳಿ ಬಂದಿದ್ದವು. ಸಂದೇಶ ಕಳುಹಿಸಿದವರಲ್ಲಿ ಈ ಸಂದೇಶವನ್ನು ಡಿಲೀಟ್ ಮಾಡುವಂತೆಯೂ ಹಲವರು ವಿನಂತಿಸಿದ್ದರು.
ಆದರೆ ಹಲವರಿಗೆ ಈ ಸಂದೇಶವನ್ನು ಅಳಿಸಲು ಸಾಧ್ಯವಾಗಿರಲಿಲ್ಲ. ಕೆಲವರನ್ನು ಈ ಕಾರಣಕ್ಕೆ ಗ್ರೂಪ್ಗಳಿಂದ ಹೊರ ದಬ್ಬಿದರೆ. ಇನ್ನೂ ಕೆಲವರು ಎಲ್ಲ ಗ್ರೂಪ್ಗಳಿಂದ ಹೊರ ಬಂದರು. ಸದ್ಯಕ್ಕೆ ಈ ವೈರಸ್ ಗ್ರೂಪ್ಗಳಿಂದ ತಾವಾಗಿಯೇ ಹೊರ ಬಂದರು ಸದ್ಯಕ್ಕೆ ಈ ವ್ಯರಸ್ ಗ್ರೂಪ್ಗಳಿಗಷ್ಟೇ ಫಾರ್ವರ್ಡ್ ಆಗುತ್ತಿದೆ. ಆದರೆ ಇದರ ಹಾನಿ. ಪರಿಣಾಮಗಳ ಬಗ್ಗೆ. ಇನ್ನೂ ಯಾವುದೇ ಮಾಹಿತಿ ಇಲ್ಲ.
Leave a Comment