• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಹೊನ್ನಾವರಕ್ಕೆ ಮೊಬೈಲ್ ಡಯಾಬಿಟಿಕ್ ಸೆಂಟರ್ ;ಲಯನ್ಸ್ ಜಿಲ್ಲಾ ಗವರ್ನರ್ ಬರವಸೆ

April 23, 2021 by Vishwanath Shetty Leave a Comment

ಹೊನ್ನಾವರ; ತಾಲೂಕಿನ ಲಯನ್ಸ ಸಭಾಭವನದಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದವರಿಗೆ ಸನ್ಮಾನ ಹಾಗೂ ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ವಿಶೇಷ ಆಹ್ವಾನಿತರಾಗಿ ಆಗಮಿಸಿದ ಜಿಲ್ಲಾ ಗವರ್ನರ್ ಲಯನ್ ಡಾ|| ಗಿರೀಶ ಕುಚಿನಾಡ ಮಾತಾನಾಡಿ ಈ ವರ್ಷದ ಲಯನ್ ವರ್ಷ ಕರೋನಾ ವರ್ಷ ಎಂದು ಹೇಳಬಹುದು. ಇಡೀ ವರ್ಷ ಕರೋನಾ ಭಯದಿಂದ ನಮ್ಮ ಅನೇಕ ಸೇವಾ ಚಟಿವಟಿಕೆಗಳನ್ನು ಸವಾಲಿನ ಮಧ್ಯೆ ನಡೆಸಿದ್ದೇವೆ.

919480211578 status 67604d30fb9b452bbcaff79024879e2a

ಆದರು ಜಗತ್ತಿನಾದ್ಯಂತ ಲಯನ್ ಸಂಸ್ಥೆ ಕರೋನಾ ವಿರುದ್ಧ ಜಾಗೃತಿ ಕಾರ್ಯಕ್ರಮ, ಪರಿಹಾರ ಕಾರ್ಯಕ್ರಮ ಹಮ್ಮಿಕೊಂಡು ಜನರ ಮೆಚ್ಚುಗೆಗೆ ಪಾತ್ರವಾಯಿತು. ತಾಲೂಕಿನ ಕ್ಲಬ್ ಸಹಾಯ ಹಸ್ತ ಅಷ್ಟೇ ಅಲ್ಲದೆ ಸುಮಾರು 3 ಲಕ್ಷ ರೂ ಗಿಂತಲೂ ಅಧಿಕ ಮೊತ್ತದ ಸಾಮಗ್ರಿಗಳನ್ನು ಸರ್ಕಾರಿ ಆಸ್ಪತ್ರೆ ಮತ್ತು ವಿವಿಧ ಕ್ಷೇತ್ರಗಳಿಗೆ ಹಂಚಿಕೆ ಮಾಡಿದೆ. ಹಾಗು ನೆರ ಸಂತ್ರಸ್ತರಿಗೆ ಪರಿಹಾರ ಒದಗಿಸುವಲ್ಲಿ ಹಾಗೂ ಕರೋನಾ ವಾರಿಯರ್ಸಗೆ ನೆರವು ಒದಗಿಸಲು ವಿಶೇಷ ಕೆಲಸ ಮಾಡಿದೆ. ಈ ಕೆಲಸ ಕಾರ್ಯಗಳಲ್ಲಿ ವಿಶೇಷ ಸಾಧನೆ ಮಾಡಿದ ಹೊನ್ನಾವರ ಲಯನ್ಸ್ ಕ್ಲಬ್‍ನ್ನು ಅಭಿನಂದಿಸುತ್ತೇನೆ. ಅಷ್ಟೆ ಅಲ್ಲದೇ ಅನಾಥಾಶ್ರಮಗಳಿಗೆ, ಬಡವರಿಗೆ ಹಾಗೂ ಕಿಡ್ನಿ ರೋಗದಿಂದ ಬಳಲುವವರಿಗೆ ಡಯಾಲಿಸಸ್ ಮಾಡುವಲ್ಲಿ, ಬಡ ರೋಗಿಗಳಿಗೆ ವಿಶೇಷವಾಗಿ ಆರ್ಥಿಕವಾಗಿ ಹಿಂದಿದುಳಿದವರಿಗೆ, ಮುತುವರ್ಜಿವಹಿಸಿ ಸಹಾಯಹಸ್ತ ನೀಡಿದೆ. ಪರಿಸರ ಕಾಳಜಿ, ಕನ್ನಡ ನಾಡನುಡಿಗೆ ಬಗ್ಗೆ ಶೈಕ್ಷಣಿಕ ಕಾರ್ಯಕ್ರಮಗಳನ್ನ ಹಮ್ಮಿಕೊಳ್ಳುವುದರ ಮೂಲಕ ಜನ ಮೆಚ್ಚುಗೆÀಗೆ ಪಾತ್ರವಾಗಿದೆ. ಇನ್ನು ಮುಂದಿನ ದಿನಗಳಲ್ಲಿ ಮೊಬೈಲ್ ಡಯಾಬಿಟಿಕ್ ಸೆಂಟರನ್ನು ಪ್ರಾರಂಬಿಸುವುದು ಮತ್ತು ಆರೋಗ್ಯ ಕೇಂದ್ರಗಳನ್ನು ಹೊನ್ನಾವರದಲ್ಲಿ ತೆರೆಯುವ ಬಗ್ಗೆ ಅಂತರಾಷ್ಟ್ರೀಯ ಸಂಸ್ಥೆಯಿಂದ ಸಹಾಯಧನ ಒದಗಿಸುವ ಭರವಸೆ ನೀಡಿದರು.

919480211578 status ee728c51c61a44e993e7ac35c18e7658


ಸ್ವಯಂ ಉದ್ಯೋಗಕ್ಕೆ ಪ್ರೇರಣೆಗಾಗಿ ಉಷಾ ನಾಯ್ಕ ಇವರಿಗೆ ಹೋಲಿಗೆ ಯಂತ್ರವನ್ನು ನೀಡಲಾಯಿತು. ಜಿಲ್ಲಾ ಪ್ರಶಸ್ತಿ ವಿಜೇತ ಶಿಕ್ಷಕರಾದ ಎಂ.ಟಿ.ಗೌಡ, ಜಿ.ಟಿ.ನಾಯ್ಕ, ಭಾಗಿರಥಿ ಹೆಗಡೆ ಹಾಗೂ ಮುಖ್ಯಮಂತ್ರಿ ಚಿನ್ನದ ಪದಕ ವಿಜೇತ ಪೋಲಿಸ್ ಸಿಬ್ಬಂದಿ ಲೊಕೇಶ.ಎ., ಹೆಸ್ಕಾಂನ ಪವರ್ ಮ್ಯಾನ ರವಿಚಂದ್ರ ಗುಂಜಲೂಡ್ ಮತ್ತು ಅಂಬ್ಬುಲೆನ್ಸ್ ಚಾಲಕ ಗಣೇಶ ಶೇಜವಾಡಕರ ಇವರನ್ನು ಸನ್ಮಾನಿಸಲಾಯಿತು. 2019-2021ನೇ ಸಾಲಿನ ಎಸ್.ಎಸ್.ಎಲ್.ಸಿ ಯಲ್ಲಿ 99.2% ಅಂಕ ಪಡೆದು
ತಾಲೂಕಿಗೆ ಪ್ರಥಮ ಸ್ಥಾನ ಪಡೆದ ಜಯಂತ ರಾಜೇಂದ್ರ ಹಬ್ಬು ಮತ್ತು ಕರ್ನಾಟಕ ವಿಶ್ವವಿದ್ಯಾಲಯಕ್ಕೆ 97.08% ಅಂಕ ಪಡೆದು ತೃತೀಯ ರ್ಯಾಂಕ ಪಡೆದ ವಿದ್ಯಾರ್ಥಿನಿ ರಾಜೇಶ್ವರಿ ಮಂಜುನಾಥ ನಾಯ್ಕ ಇವರನ್ನು ಸನ್ಮಾನಿಸಿ ಗೌರವಿಸಿದರು. ಹೊನ್ನಾವರ ಲಯನ್ ಸಂಸ್ಥೆಯಲ್ಲಿ ವಿಶೇಷ ಸೇವೆಗೈದ ಲಯನ್ ಸದಸ್ಯರಾದ ವಸಂತ ಪ್ರಭು, ಎಸ್.ಜೆ.ಕೈರನ್, ಎಸ್.ಟಿ.ನಾಯ್ಕ ಕ್ಲಬ್ ಪರವಾಗಿ ಸನ್ಮಾನಿಸಲಾಯಿತು.

ಈ ಸಂದರ್ಭದಲ್ಲಿ ಲಯನ್ಸ್ ಕ್ಲಬ್ ಅಧ್ಯಕ್ಷ ಪ್ರದೀಪ ಶೆಟ್ಟಿ ಕಾರ್ಯದರ್ಶಿಎಂ.ಜಿ.ನಾಯ್ಕ ಲಿಯೋ ಕ್ಲಬ್‍ನ ಅಧ್ಯಕ್ಷ ಧನ್ಯ ಭಟ್ಟ ಕಾರ್ಯದರ್ಶಿ ಸ್ವಾತಿ ಶೆಟ್ಟಿ ಲಯನ್ಸ್ ಹಾಗೂ ಲಿಯೋ ಸದಸ್ಯರು ಹಾಜರಿದ್ದರು.

Share this:

  • WhatsApp
  • Twitter
  • Facebook
  • Telegram
  • Email
  • Print

Related News:

Filed Under: Canara News, Honavar News Tagged With: ಕರೋನಾ ವಾರಿಯರ್ಸಗೆ ನೆರವು, ನೆರ ಸಂತ್ರಸ್ತರಿಗೆ ಪರಿಹಾರ, ಲಯನ್ ಸಂಸ್ಥೆ ಕರೋನಾ

Explore More:

About Vishwanath Shetty

Reader Interactions

Leave a Comment Cancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,076,810 visitors

Footer

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

ಸುಪ್ರೀಂ ಕೋರ್ಟ್‌ಲ್ಲಿ ಕ್ಲರ್ಕ್ ಹುದ್ದೆಗಳ ಭರ್ತಿಗಾಗಿ ಅರ್ಜಿ ಆಹ್ವಾನ 2025

February 8, 2025 By Sachin Hegde

© 2025 Canara Buzz · Contributors · Privacy Policy · Terms & Conditions · Member of Digital Avatar

 

Loading Comments...