ಹೊನ್ನಾವರ:ಗೆಳೆಯರೊಂದಿಗೆ ಈಜಲು ಹೋಗಿ ಬಾಲಕನೊರ್ವ ಅರಬ್ಬಿ ಸಮುದ್ರ ಪಾಲಾದ ಘಟನೆ ತಾಲೂಕಿನ ಕಾಸರಕೋಡ್ ಟೊಂಕಾ ಕಡಲ ತೀರದಲ್ಲಿ ನಡೆದಿದೆ.
ಕಾಸರಕೋಡ್ ಟೊಂಕಾ ಕಡಲ ತೀರದಲ್ಲಿ ರವಿವಾರ ಸಂಜೆ ಈಜಲು ಹೋದ ಆರು ಜನ ಬಾಲಕರಲ್ಲಿ ಕಾಸರಕೊಡ್ ಟೊಂಕಾದ 17 ವರ್ಷದ ವಿಧ್ಯಾರ್ಥಿ ರೋಹಿತ್ ಬಾಬುರಾಯ ತಾಂಡೇಲ್ ಅಲೆಗಳ ಅಬ್ಬರಕ್ಕೆ ಸಿಲುಕಿ ಸಮುದ್ರ ಪಾಲಾಗಿದ್ದ. ಸ್ಥಳಿಯರು, ಪೊಲೀಸರು, ಕರಾವಳಿ ಕಾವಲುಪಡೆ ಹಾಗೂ ಅಗ್ನಿಶಾಮಕ ದಳದವರಿಂದ ಶೋಧಕಾರ್ಯ ನಡೆಸಿದರೂ ಬಾಲಕ ಪತ್ತೆಯಾಗಿರಲಿಲ್ಲ. ಸೋಮವಾರ ಮುಂಜಾನೆ 9.30 ಗಂಟೆಗೆ ಕಾಸರಕೋಡ್‌ನ ಜೈನ ಜಟಗೇಶ್ವರ ದೇವಸ್ಥಾನದ ಎದುರಿಗಿನ ಶರಾವತಿ ದಡದಲ್ಲಿ ಶವ ಪತ್ತೆಯಾಗಿದೆ. ಈ ಕುರಿತು ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Leave a Comment