ಹಳಿಯಾಳ :- ನನ್ನ ಆತ್ಮೀಯರು, ದಾಂಡೇಲಿ ಬ್ಲಾಕ್ ಕಾಂಗ್ರೆಸ್ ನ ಅಧ್ಯಕ್ಷರು,ಹಾಗೂ ಜಾತ್ಯಾತೀತ ಮನೋಭಾವ ಹೊಂದಿದ್ದ ಪಕ್ಷದ ಹಿರಿಯ ಧುರೀಣರು ಆಗಿರುವ ಶ್ರೀ ಸಯ್ಯದ ತಂಗಳರವರು ಮಹಾಮಾರಿ ಕರೋನಾಗೆ ತುತ್ತಾಗಿ ಚಿಕಿತ್ಸೆ ಪಡೆಯುತ್ತಿದ್ದು ಇಂದು ಚಿಕಿತ್ಸೆ ಫಲಿಸದೆ ವಿಧಿವಶರಾಗಿರುವ ಸುದ್ದಿ ತಿಳಿದು ಬಂದಿದೆ. ಇದು ಅತ್ಯಂತ ನೋವಿನ ಸಂಗತಿಯಾಗಿದ್ದು ಅರಗಿಸಿಕೊಳ್ಳಲು ಸಾಧ್ಯವಾಗುತ್ತಿಲ್ಲ.
ಅತ್ಯಂತ ಸರಳ ,ಸಜ್ಜನ ವ್ಯಕ್ತಿತ್ವದ ಶ್ರೀ ಸಯ್ಯದ ತಂಗಳರವರು ದಾಂಡೇಲಿ ನಗರ ಹಾಗೂ ಗ್ರಾಮೀಣ ಪ್ರದೇಶದಲ್ಲಿ ಪಕ್ಷವನ್ನು ತಳಮಟ್ಟದಿಂದ ಸಂಘಟಿಸಿದ ನಿಷ್ಟಾವಂತ ಹಾಗೂ ಮುತ್ಸದ್ಧಿ ನಾಯಕರಾಗಿದ್ದರು. ಸಹಾಯ ಬೇಡಿದವರಿಗೆ ಯಾವಾಗಲೂ ಸಹಾಯಹಸ್ತ ಚಾಚುತ್ತಿದ್ದ ತಂಗಳವರ ನಿಧನದಿಂದ ಪಕ್ಷವು ಅಮೂಲ್ಯ ಆಸ್ತಿಯನ್ನು ಕಳೆದುಕೊಂಡಿದ್ದು ನಂಬಲು ಸಾಧ್ಯವಾಗುತ್ತಿಲ್ಲ. ಅನೇಕ ಪ್ರಯತ್ನಗಳ ನಡುವೆಯು ದೇವರು ಕರುಣೆಯನ್ನು ತೋರಿಸದಿರುವುದು ದುಃಖ ಇಮ್ಮಡಿಗೊಳಿಸಿದೆ.
ಮೃತರ ಆತ್ಮಕ್ಕೆ ಸದ್ಗತಿ ದೊರೆಯಲಿ ಹಾಗೂ ಕುಟುಂಬ ವರ್ಗದವರಿಗೆ ದುಃಖವನ್ನು ಸಹಿಸುವ ಶಕ್ತಿ ನೀಡಲಿ ಎಂದು ಭಗವಂತನಲ್ಲಿ ಪ್ರಾರ್ಥಿಸುತ್ತೇನೆ.
Leave a Comment