ಹಳಿಯಾಳ :- ಎರಡನೇ ಅಲೆಯ ಮೂಲಕ ಆರ್ಭಟಿಸುತ್ತಿರುವ ಕೋರೋನಾ ಮಹಾಮಾರಿಗೆ ಇಡೀ ದೇಶವೇ ತತ್ತರಿಸಿ ಹೋಗಿದೆ. ಕಳೆದ ವರ್ಷ ಮಧ್ಯ ವಯಸ್ಸಿನ ಮೇಲ್ಪಟ್ಟವರನ್ನು ಹೆಚ್ಚಾಗಿ ಕಾಡಿದ್ದ ಕೋರೋನಾ ಈ ವರ್ಷ ಯುವ ಜನತೆಯನ್ನೂ ಬಲಿ ಪಡೆಯುತ್ತಿದೆ.

ಈ ಪೀಡೆಗೆ ವೈದ್ಯಕೀಯ ಉಪಚಾರದ ಜೊತೆಗೆ ದೈವಾನುಗ್ರಹದ ಅವಶ್ಯಕತೆಯೂ ಇದೆ. ಹಾಗಾಗಿ ಲೋಕಕಲ್ಯಾಣಾರ್ಥವಾಗಿ ಹಳಿಯಾಳ ಶಾಸಕ ಆರ್.ವಿ.ದೇಶಪಾಂಡೆಯವರು ಶ್ರೀ ಕ್ಷೇತ್ರ ಗೋಕರ್ಣದಲ್ಲಿ ಧನ್ವಂತರಿ ಮೃತ್ಯುಂಜಯ ಜಪ ಹಾಗೂ ಹವನವನ್ನು ದಿನಾಂಕ 06ನೇ ಮೇ 2021 ರಂದು ಹಮ್ಮಿಕೊಂಡಿದ್ದಾರೆಂದು ಅವರ ಆಪ್ತ ಕಾರ್ಯದರ್ಶಿ ಅವರು ತಿಳಿಸಿದ್ದಾರೆ.
ಈ ಧಾರ್ಮಿಕ ಕಾರ್ಯದ ಪರಿಣಾಮವಾಗಿ ರಾಜ್ಯ, ದೇಶಕ್ಕೆ ಆವರಿಸಿರುವ ಕಂಟಕ ದೂರವಾಗಿ, ಜನರ ಆರೋಗ್ಯ ಸುಧಾರಿಸುವಂತಾಗಲಿ ಹಾಗೂ ಜನಸಾಮಾನ್ಯರು ಎಂದಿನoತೆ ತಮ್ಮ ದೈನಂದಿನ ಕಾರ್ಯಚಟುವಟಿಕೆಗಳಲ್ಲಿ ತೊಡಗುವಂತಾಗಿ ತನ್ಮೂಲಕ ರಾಜ್ಯ ಹಾಗೂ ದೇಶವು ಸುಭಿಕ್ಷತೆಯತ್ತ ಸಾಗಲಿ ಎಂದು ಶಾಸಕರು ಆಶಯ ವ್ಯಕ್ತಪಡಿಸಿದ್ದಾದೆಂದು ತಿಳಿಸಿದ್ದಾರೆ.
Leave a Comment