ಭಟ್ಕಳ: ತಾಲ್ಲೂಕಿನಲ್ಲಿ ಇಂದಿನಿಂದ ಕೋವಿಡ್ ಮಾರ್ಗಸೂಚಿಯನ್ನು ಕಟ್ಟುನಿಟ್ಟಾಗಿ ಜಾರಿಗೆ ತರಲು ತಾಲ್ಲೂಕಾಡಳಿತ ನಿರ್ಧರಿಸಿದ್ದು. ಮೇ..24 ತನಕ. ತಾಲ್ಲೂಕಿನಲ್ಲಿ ವಾಹನ ಸಂಚಾರವನ್ನು ಸಂಪೂರ್ಣ ನಿಷೇಧಿಸಲಾಗಿದೆ ಎಂದು ಭಟ್ಕಳ ಉಪವಿಭಾಗಾಧಿಕಾರಿ ಮಮತಾ ದೇವಿ ತಿಳಿಸಿದರು.

ಅವರು ರವಿವಾರ ಉಪವಿಭಾಗಾಧಿಕಾರಿ ಕಛೇರಿಯಲ್ಲಿ ಕರೇದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದರು. ತಾಲ್ಲೂಕಿನಲ್ಲಿ ಕೋವಿಡ್ ಪ್ರಕರಣ ದಿನದಿಂದದಿನಕ್ಕೆ ಜಾಸ್ತಿಯಾಗುತ್ತಿದೆ. ಇತ್ತ ಸಾರ್ವಜನಿಕರು ತಾಲೂಕಾಡಳಿತಕ್ಕೆ ಸಹಕಾರ ನೀಡುತ್ತಿಲ್ಲ. ಗುಂಪುಗುಂಪಾಗಿ ವಾಹನದಲ್ಲಿ ಬಂದು ಖರೀದಿ ಮಾಡುತ್ತಾರೆ. ಇದರಿಂದ ತಾಲ್ಲೂಕಿನಲ್ಲಿ ಕರೋನಾ ಪ್ರಕರಣ ಹೆಚ್ಷುತ್ತಿದೆ. ಕರೋನಾ ನಿಯಂತ್ರಣಕ್ಕೆ ಕೆಲವು ಕಟ್ಟುನಿಟ್ಟಾದ ನಿಯಮ ಜಾರಿಗೆ ತಂದಿದ್ದು,ಇಂದಿನಿಂದ ಅಗತ್ಯ ವಸ್ತಗಳ ಖರೀದಿಗೆ ಯಾವುದೇ ವಾಹನದಲ್ಲಿ ಬಂದರೂ ವಾಹನ ಸೀಜ್ ಮಾಡಲಾಗುವುದು ಎಂದರು. ವೈದ್ಯಕೀಯ ಅಗತ್ಯವುಳ್ಳವರು ಹೋರ ಜಿಲ್ಲೆ ಪ್ರಯಾಣ ಮಾಡಬೇಕಾದರೆ ಅಂಬುಲೆನ್ಸ್ ನ್ನೆ ಬಳಸಬೇಕು..ಒಂದೊಮ್ಮೆ ಖಾಸಗಿ ವಾಹನದಲ್ಲಿ ಪ್ರಯಾಣಿಸಬೇಕಾದರೆ ತಹಶೀಲ್ದಾರ ಕಛೇರಿಯ ಅನುಮತಿ ಕಡ್ಡಾಯ ಎಂದು ತಿಳಿಸಿದರು. ಬೆಳಿಗ್ಗೆ 6 ರಿಂದ10 ಘಂಟೆ ನಂತರ ಔಷಧಿ. ತರಕಾರಿ. ಹೊಟೇಲ ಪಾರ್ಸೆಲಗಳ ಅಗತ್ಯ ಇದ್ದವರಿಗೆ ಅಯಾ ಅಂಗಡಿಯವರೇ ಮನೆಗೆ ತಲುಪಿಸಲು ವ್ಯವಸ್ಥೆ ಮಾಡಲಾಗಿದೆ. 10 ಘಂಟೆಯ ನಂತರ ಅನಾವಶ್ಯಕವಾಗಿ ಯಾರೇ ರಸ್ತೆಗೆ ಇಳಿದರೂ ಕ್ರಮ ಕೈಗೊಳ್ಳಲಾಗುವುದು ಎಂದರು. ಗ್ರಾಮೀಣ ಭಾಗದ ಜನರು ವಾಹನವಿಲ್ಲದೇ ಮಾರುಕಟ್ಟೆ ಬರುವುದು ಅಸಾಧ್ಯವಾದ ಕಾರಣ ಅಯಾ ಗ್ರಾಮ ಪಂಚಾಯ್ತಿ ಪಿಡಿಓ ಮೂಲಕ ಅಗತ್ಯವುಳ್ಳ ವಸ್ತುಗಳ ಖರೀದಿಗೆ ಗ್ರಾಮ ಪಂಚಾಯ್ತಿ ವ್ಯಾಪ್ತಿಯಲ್ಲಿ ಅವಕಾಶ ಮಾಡಿಕೊಡಲಾಗುವುದು. ತಾಲ್ಲೂಕಿನ 4 ಗಡಿಗಳು ಇಂದಿನಿಂದ ಬಂದ ಮಾಡಲಾಗುತ್ತದೆ. ಹೋರಗಿನಿಂದ ಯಾರೇ ಗಡಿ ಪ್ರವೇಶಿಸಿದರೂ ಕ್ರಾರಂಟೈನ್ ಸೀಲ್ ಹಾಕಲಾಗುತ್ತದೆ ಎಂದರು. ಹಿಂದಿನ ಜನತಾ ಕರ್ಪ್ಯ್ ನಲ್ಲಿ ಕಟ್ಟಡ ಕಾರ್ಮಿಕರಿಗೆ ಒಂದು ಪ್ರದೇಶದಿಂದ ಇನ್ನೊಂದು ಪ್ರದೇಶಕ್ಕೆ ಹೋಗಿ ಕೆಲಸಮಾಡಿ ಬರಲು ಅವಕಾಶ ನೀಡಲಾಗಿತ್ತು. ಅದರೆ ಈ ಬಾರಿ ಕಟ್ಟಡ ಕಾರ್ಮಿಕರು ಒಂದೇ ಪ್ರದೇಶದಲ್ಲಿ ಉಳಿದುಕೊಂಡು ಕೆಲಸ ಮಾಡಲು ಮಾತ್ರ ಅವಕಾಶ ನೀಡಲಾಗುತ್ತದೆ ಎಂದರು. ಕಲ್ಯಾಣಮಂಟಪದಲ್ಲಿ ನಡೆಯುವ ಮದುವೆಗಳಿಗೆ ನಿರ್ಬಂಧ ವಿಧಿಸಿದ್ದು ಮನೆಯಲ್ಲಿ ಮಾಡುವ ಮದುವೆಗಳಿಗೆ 40 ಜನರು ಮಾತ್ರ ಪಾಲ್ಗೊಳ್ಳಲು ಅವಕಾಶ ನೀಡಲಾಗುತ್ತದೆ ಎಂದು ತಿಳಿಸಿದರು.ಸಾರ್ವಜನಿಕರು ಮುಂಬರುವ 14 ದಿನಗಳ ಕಾಲ ಕೋವಿಡ್ ಮಾರ್ಗಸೂಚಿ ಪಾಲಿಸಿ ಕರೋನಾ ನಿಯಂತ್ರಣಕ್ಕೆ ಸಹಕರಿಸಬೇಕು. ತಪ್ಪಿದಲ್ಲಿ ತಾಲ್ಲೂಕಾಡಳಿತ ಕಠೀಣ ಕ್ರಮ ಕೈಗೊಳ್ಳುತ್ತದೆ ಎಂದು ಎಚ್ಚರಿಸಿದರು. ತಹಶೀಲ್ದಾರ ರವಿಚಂದ್ರ,
Leave a Comment