ಹಳಿಯಾಳ:- ತಾಲೂಕಿನಲ್ಲಿ ಕೊರೊನಾ ಮರಣ ಮೃದಂಗ ಮುಂದುವರೆದಿದ್ದು ಶುಕ್ರವಾರ ಕೊರೊನಾಕ್ಕೆ ಯಡೋಗಾ ಗ್ರಾಮ ಪಂಚಾಯತನ ಹಾಲಿ ಬಿಜೆಪಿ ಸದಸ್ಯ ಹಾಗೂ ತೇರಗಾಂವ ಗ್ರಾಮದ ಸಪ್ರಾ ಶಾಲೆಯ ಮುಖ್ಯೋಪಾಧ್ಯಾಯ ಬಲಿಯಾಗಿದ್ದಾರೆ.
ತಾಲೂಕಿನ ಜಾವಳ್ಳಿ ಗ್ರಾಮದ ರಹವಾಸಿಯಾಗಿರುವ 42 ವರ್ಷದ ಮಾರುತಿ ಮೊಗ್ರಿ ಅವರು ಹಳಿಯಾಳ ಪಟ್ಟಣದ ಮುಖ್ಯ ಮಾರುಕಟ್ಟೆಯಲ್ಲಿ ಕಿರಾಣಿ ವ್ಯಾಪಾರ ನಡೆಸುತ್ತಿದ್ದರು. ಯಡೋಗಾ ಗ್ರಾಮ ಪಂಚಾಯತಿ ಬಿಜೆಪಿ ಸದಸ್ಯ ಮಾರುತಿ ಮೋಗ್ರಿ ಅವರು ಕಳೆದ 10 ದಿನಗಳಿಂದ ನ್ಯುಮೊನಿಯಾದಿಂದ ಬಳಲುತ್ತಿದ್ದ ಅವರು ಕಳೆದ 6 ದಿನಗಳ ಹಿಂದೆ ತೀವೃ ಉಸಿರಾಟದ ತೊಂದರೆಯಿಂದ ಕಾರವಾರದ ಕಿಮ್ಸ್ ಆಸ್ಪತ್ರೆಗೆ ದಾಖಲಾದ ಸಂದರ್ಭದಲ್ಲಿ ಇವರಲ್ಲಿ ಕೊರೊನಾ ಸೊಂಕು ದೃಢಪಟ್ಟಿತ್ತು ಆದರೇ ಚಿಕಿತ್ಸೆ ಫಲಕಾರಿಯಾಗದೆ ಇಂದು ಮೃತಪಟ್ಟಿದ್ದಾರೆ.
ಇವರ ಹೆಂಡತಿ ಸುರೇಖಾ ಅವರು ಕೂಡ ಕಳೆದ ಅವಧಿಯಲ್ಲಿ ಗ್ರಾಪಂ ಅಧ್ಯಕ್ಷರಾಗಿ ಕಾರ್ಯನಿರ್ವಹಿಸಿದ್ದು , ಪ್ರಸಕ್ತ ಬಾರಿ ಮಾರುತಿ ಮೊಗ್ರಿ ಅವರು ಗ್ರಾಪಂಗೆ ಆಯ್ಕೆಯಾಗಿದ್ದರು. ಎರಡು ಗಂಡು ಮಕ್ಕಳು, ಹೆಂಡತಿ ಹಾಗೂ ಅಪಾರ ಬಂಧು ಬಳಗವನ್ನು ಮಾರುತಿ ಅಗಲಿದ್ದಾರೆ. ಇವರ ನಿಧನಕ್ಕೆ ಹಳಿಯಾಳ ಮಾಜಿ ಶಾಸಕ ಸುನೀಲ್ ಹೆಗಡೆ, ಬಿಜೆಪಿ ಹಳಿಯಾಳ ಘಕಟದವರು ಸಂತಾಪ ಸೂಚಿಸಿದ್ದಾರೆ.
ಹಳಿಯಾಳ ಪಟ್ಟಣ ನಿವಾಸಿಯಾಗಿದ್ದ ತೇರಗಾಂವ ಗ್ರಾಮದ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ನಿಂಗಪ್ಪಾ ಮಾದಿಗಾರ(56) ಅವರು ಹುಬ್ಬಳ್ಳಿಯ ಕಿಮ್ಸ್ ಆಸ್ಪತ್ರೆಯಲ್ಲಿ ಕೊರೊನಾಕ್ಕೆ ಚಿಕಿತ್ಸೆ ಫಲಕಾರಿಯಾಗದೆ ನಿಧನ ಹೊಂದಿದರು. ಇವರು ಮೂಲತಃ ಖಾನಾಪುರ ತಾಲೂಕಿನ ನಂದಗಡ ಮೂಲದವರಾಗಿದ್ದು ತಾಲೂಕಿನ ಅರ್ಲವಾಡ, ಯಡೋಗಾ ಗ್ರಾಮಗಳಲ್ಲಿ ಸೇವೆ ಸಲ್ಲಿಸಿ ಪ್ರಸಕ್ತ ತೇರಗಾಂವ ಗ್ರಾಮದ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕರಾಗಿ ಅನುಪಮ ಸೇವೆ ಸಲ್ಲಿಸುತ್ತಿದ್ದರು. ಇವರು ಕೂಡ ಇಬ್ಬರು ಮಕ್ಕಳು ಹಾಗೂ ಮಡದಿಯನ್ನು ಅಗಲಿದ್ದಾರೆ.
Leave a Comment