ಹಳಿಯಾಳ:- ಹಳಿಯಾಳ ತಾಲೂಕಿನಲ್ಲಿ ಶುಕ್ರವಾರ ಒಂದೇ ದಿನ 69 ಜನರಲ್ಲಿ ಸೊಂಕು ಪತ್ತೆಯಾಗಿದ್ದು ಅಲ್ಲದೇ ದಾಖಲೆಯ ನಾಲ್ವರೂ ಕೊರೊನಾ ಮಹಾಮಾರಿಗೆ ಬಲಿಯಾಗುವ ಮೂಲಕ ತಾಲೂಕಿನಲ್ಲಿ ಕೊರೊನಾ ಮೃತ್ಯುಕೆಕೆ ಮುಂದುವರೆದಿದೆ.
ಶುಕ್ರವಾರ 69 ಜನರಲ್ಲಿ ಕೊರೊನಾ ಸೊಂಕು ದೃಢ ಪಡುವ ಮೂಲಕ ಸಕ್ರಿಯ ಸೊಂಕಿತರ ಸಂಖ್ಯೆ 468 ಕ್ಕೆ ಏರಿಕೆಯಾಗಿದ್ದು ನಾಲ್ವರೂ ಸಾವಿಗಿಡಾಗುವ ಮೂಲಕ ಕೊರೊನಾಕ್ಕೆ ಉಸಿರು ಚೆಲ್ಲಿದವರ ಸಂಖ್ಯೆ 35ಕ್ಕೆ ತಲುಪಿದೆ.
ಸಾವಿಗಿಡಾದವರು :- ತಾಲೂಕಿನ ಜಾವಳ್ಳಿ ಗ್ರಾಮದ ರಹವಾಸಿ ಹಾಗೂ ಯಡೋಗಾ ಗ್ರಾಮ ಪಂಚಾಯತನ ಹಾಲಿ ಬಿಜೆಪಿ ಸದಸ್ಯ ಮಾರುತಿ ಮೋಗ್ರಿ(42), ಪಟ್ಟಣದ ರಹವಾಸಿ ತೇರಗಾಂವ ಗ್ರಾಮದ ಪ್ರಾಥಮಿಕ ಶಾಲೆ ಮುಖ್ಯೋಪಾಧ್ಯಾಯ ನಾಗರಾಜ ಮಾದಿಗಾರ(56), ಜತಗಾ ಗೌಳಿವಾಡದ 72 ವರ್ಷದ ವೃದ್ದ ಹಾಗೂ ಜನಗಾ ಗ್ರಾಮದ 62 ವರ್ಷದ ವೃದ್ದೆ ಕೊರೊನಾಕ್ಕೆ ಬಲಿಯಾಗಿದ್ದಾರೆ.
ತಾಲೂಕಿನಲ್ಲಿ 12 ಕಂಟೆನಮೆಂಟ್ ಝೋನಗಳಿದ್ದು ಪಟ್ಟಣದಲ್ಲಿ 4- ಗೌಳಿಗಲ್ಲಿ, ಝೇವಿಯರ್ ರಸ್ತೆ, ಧಾರವಾಡ ರಸ್ತೆ, ಆನೆಗುಂದಿ ಕಾಲೋನಿ ಮತ್ತು ಗ್ರಾಮಾಂತರ ಭಾಗದಲ್ಲಿ-8 ಇದ್ದು ಅವುಗಳೆಂದರೇ ತಟ್ಟಿಹಳ್ಳ, ಮುರ್ಕವಾಡ, ಕೆರವಾಡ, ಭಾಗವತಿ, ನಂದಿಗದ್ದಾ, ಜಾವಳ್ಳಿ, ಬಿಕೆ ಹಳ್ಳಿ ಮತ್ತು ಹವಗಿ ಗ್ರಾಮಗಳಲ್ಲಿ ತಾಲೂಕಾಡಳಿತದಿಂದ ಕಂಟೆನಮೆಂಟ್ ಝೋನಗಳನ್ನು ಗುರುತಿಸಲಾಗಿದೆ.
Leave a Comment