ಹೊನ್ನಾವರ; ತಾಲೂಕಿನಲ್ಲಿ ಕೊರೋನಾ ಸೊಂಕಿತರ ಸಂಖ್ಯೆ ದಿನದಿಂದ ದಿನಕ್ಕೆ ಏರುತ್ತಲಿದ್ದು, ಸಾರ್ವಜನಿಕರು ಮಾಸ್ಕ ಹಾಗೂ ಸಾಮಾಜಿಕ ಅಂತರ ಕಾಯ್ದುಕೊಳ್ಳುವಂತೆ ತಾಲೂಕ ಆಸ್ಪತ್ರೆಯ ಆರೊಗ್ಯ ವೈದ್ಯಾಧಿಕಾರಿ ಉಷಾ ಹಾಸ್ಯಗಾರ ಮನವಿ ಮಾಡಿದ್ದಾರೆ.

ಅವರು ಮಾಧ್ಯಮದವರೊಂದಿಗೆ ಮಾತನಾಡಿ ಮಾರ್ಚ್ ಕೊನೆ ವಾರದಿಂದ ನಿರಂತರವಾಗಿ ತಾಲೂಕಿನಲ್ಲಿ ಕೊರೋನಾ ಸೊಂಕು ಏರುತ್ತಲ್ಲೆ ಇದೆ. ಸೋಮವಾರದವರೆಗೆ ತಾಲೂಕಿನಲ್ಲಿ 416 ಸಕ್ರೀಯ ಪ್ರಕರಣವಿದ್ದು, ಇದರಲ್ಲಿ 370 ಜನರು ಹೋಮ್ ಐಸೋಲೇಶನ್ ಮೂಲಕ ಚಿಕಿತ್ಸೆ ಪಡೆಯುತ್ತಿದ್ದಾರೆ. ಈ ವರ್ಷ ೧೦ ಜನರು ಈ ಸೊಂಕಿನಿಂದ ಮರಣಹೊಂದಿದ್ದಾರೆ. ಆದರೆ ವಾಕ್ಸಿನ್ ಪಡೆದವರು ಮರಣಹೊಂದಿಲ್ಲ. ಕೋವಿಡ್ ಗುಣ ಲಕ್ಷಣಗಳಿದ್ದವರು, ಆಸ್ಪತ್ರೆಗೆ ಬಂದು ಪರೀಕ್ಷೆ ಮಾಡಿಸಿಕೊಳ್ಳಬೇಕು. ಆದರೆ ಈಗಾಗಲೇ ಮೃತಪಟ್ಟ ಹಲವು ಕೊನೆಯ ಹಂತದಲ್ಲಿ ಆಸ್ಪತ್ರೆಗೆ ಆಗಮಿಸುತ್ತಾರೆ. ಸೊಂಕಿನ ಲಕ್ಷಣ ಬಂದವರು ವೈದ್ಯರ ಸಲಹೆ ಪಾಲಿಸುವ ಜೊತೆ ಸಾಮಾಜಿಕ ಅಂತರ ಪಾಲಿಸುವಂತೆ ಸಾರ್ವಜನಿಕರಲ್ಲಿ ಮನವಿ ಮಾಡಿದ್ದಾರೆ.
Leave a Comment