ಹೊನ್ನಾವರ; ಕೋವಿಡ್ ಲಕ್ಷಣ ಕಂಡಕೂಡಲೇಆಸ್ಪತ್ರೆಗಳಿಗೆ ಬನ್ನಿ,ಚಿಕಿತ್ಸೆಗೆ ಬೇಕಾದ ಎಲ್ಲ ವ್ಯವಸ್ಥೆ ಕಲ್ಪಿಸಲಾಗಿದೆ ಎಂದು ಸಚೀವ ಶಿವರಾಮ ಹೆಬ್ಬಾರ ಹೇಳಿದರು. ತಾಲೂಕ ಆಸ್ಪತ್ರೆಯಲ್ಲಿ ಕೋವಿಡ್ ಸಿದ್ದತಾ ಕ್ರಮಗಳನ್ನು ಪರಿಶೀಲನೆ ನಡೆಸಿ, ಲಭ್ಯವಿರುವ ಬೆಡ್ ಹಾಗೂ ಪ್ರಾಥಮಿಕ ಆರೊಗ್ಯ ಕೇಂದ್ರದಲ್ಲಿರುವ ವ್ಯವಸ್ಥೆ ಹಾಗೂ ಆಕ್ಸಿಜನ್ ವೆಂಟಲೇಟರ, ಖಾಸಗಿ ಆಸ್ಪತ್ರೆಯಲ್ಲಿ ಸೌಲಭ್ಯದ ಬಗ್ಗೆ ಚರ್ಚಿಸಿದರು.

ನಂತರ ಮಾಧ್ಯಮದವರೊಂದಿಗೆ ಮಾತನಾಡಿ ಸರ್ಕಾರ ಲಾಕ್‌ಡೌನ್ ವಿಧಿಸಿದ ಕಾರಣ ಎಲ್ಲರಿಗೂತೊಂದರೆಯಾಗಿದೆ ಇದು ಸರ್ಕಾರಕ್ಕೂಗೊತ್ತಿದೆ. ಜೀವವಿದ್ದರೆ ಜೀವನವಲ್ಲವೇ, ಆದ್ದರಿಂದಅನಿವಾರ್ಯವಾಗಿ ಜೀವ ಉಳಿಸಲು ಅಂತಿಮ ಅಸ್ತ್ರವಾದ ಲಾಕ್‌ಡೌನ್ ವಿಧಿಸಿದ್ದುಜನರ ಹಿತಕ್ಕಾಗಿಯೇ ಎನ್ನುವುದು ಅರ್ಥ ಮಾಡಿಕೊಳ್ಳಬೇಕಿದೆ. ಸೋಂಕು ತೀವ್ರವಾಗುವ ಮನೆಯಲ್ಲಿ ಉಳಿದು ಕೊನೆಯಕ್ಷಣಕ್ಕೆ ಆಸ್ಪತ್ರೆಗೆ ಬಂದರೆ ಎಲ್ಲರಿಗೂ ಸಮಸ್ಯೆ ಆಗಲಿದೆ., ವೈದ್ಯರು ಹಾಗೂ ಆಸ್ಪತ್ರೆಯ ಸಿಬ್ಬಂದಿಗಳು ಜೀವಪಣಕ್ಕಿಟ್ಟು ದುಡಿಯುತ್ತಿದ್ದಾರೆ. ಆಸ್ಪತ್ರೆಯಲ್ಲಿ ಅಗತ್ಯವಿರುವ ಎಲ್ಲಾ ವ್ಯವಸ್ಥೆಮಾಡಲಾಗಿದೆ. ಸೋಂಕಿನ ಲಕ್ಷಣ ಕಂಡು ಬಂದಲ್ಲಿ ಕೂಡಲೆಡ ವೈದ್ಯರ ಸಲಹೆ ಪಡೆಯಿರಿ ಎಂದುಕೈಮುಗಿದು ಜಿಲ್ಲೆಯ ಜನರನ್ನು ಕೇಳುತ್ತಿದ್ದೇನೆ ಎಂದರು.

ರಾಜ್ಯದ ಕಾರ್ಮಿಕ ಸಚಿವ, ಜಿಲ್ಲಾ ಉಸ್ತುವಾರಿ ಸಚಿವ ಶಿವರಾಮ ಹೆಬ್ಬಾರಹೇಳಿದ್ದಾರೆ. ಈ ಬಾರಿ ಕೋವಿಡ್ ಕೇರ್ಸೆಂಟರ್ ಮಾಡಿಲ್ಲ. ಆದರೆ ಸೋಂಕಿನ ಲಕ್ಷಣ ಕಂಡುಬಂದಲ್ಲಿ ಆಸ್ಪತ್ರೆಗೆಬರಬೇಕು. ಹೆಚ್ಚಿನವರು ಹೋಮ್ ಐಸೊಲೇಶನ್ ಆಗುತ್ತಿದ್ದು ಅವರು ಔಷಧ ಪಡೆದು ಮನೆಯಲ್ಲಿಯೇಪ್ರತ್ಯೇಕವಾಗಿರಬೇಕು. ಮನೆಯಲ್ಲಿ ಒಬ್ಬರಿಗೆ ಸೋಂಕುಬಂದರೆ ಔಷಧ ಪಡೆದು ಹೋಗಿ,ಮನೆಯವರಿಗೆ,ಕೇರಿಯವರಿಗೆ ಹಬ್ಬಿಸುವ ಪ್ರವೃತ್ತಿ ಸರಿಯಾದುದ್ದಲ್ಲ.ಜವಾಬ್ಧಾರಿಯಿಂದ ವರ್ತಿಸಬೇಕು. ಸೋಂಕಿತರು ಬಂದು-ಹೋಗಲು ಪ್ರತಿ ತಾಲೂಕಿನಲ್ಲಿ ಉಚಿತ ಅಂಬುಲೆನ್ಸ್ ವಾಹನದ ವ್ಯವಸ್ಥೆಯಿದೆ. ಜಿಲ್ಲೆಯ ಎಲ್ಲ ೧೧ತಾಲೂಕುಗಳಲ್ಲಿ ಬೆಡ್‌ಗಳ ಸಂಖ್ಯೆಯನ್ನು ಹೆಚ್ಚಿಸಲಾಗಿದೆ.ಆಕ್ಸಿಜನ್ ವ್ಯವಸ್ಥೆ ಕಲ್ಪಿಸಲಾಗುತ್ತಿದೆ. ಎಲ್ಲ ಇಲಾಖೆಗಳು ಆರೋಗ್ಯಇಲಾಖೆಗಳೊಂದಿಗೆ ಕೈ ಜೋಡಿಸಿ ದುಡಿಯುತ್ತಿವೆ. ಕುಟುಂಬದ ಒಬ್ಬವ್ಯಕ್ತಿ ನಿರ್ಲಕ್ಯ ಮಾಡಿದರೆ ಇಡೀ ಕುಟುಂಬಕ್ಕೆ ತುಂಬಿಬಾರದಹಾನಿಯಾಗುತ್ತದೆ, ಇದನ್ನು ಅರ್ಥಮಾಡಿಕೊಳ್ಳಿ ಎಂದರು.ಬೆಂಗಳೂರು ಸಹಿತ ಕೆಲವು ರಾಜಧಾನಿಗಳಲ್ಲಿಭಯಾನಕ ಪರಿಸ್ಥಿತಿ ಇದೆ. ನೆರೆ ಜಿಲ್ಲೆಗಳಲ್ಲೂ ಕಷ್ಟವಿದೆ. ಆದಷ್ಟು ಹೆಚ್ಚು ಜನರನ್ನುಉಳಿಸಲು ಸರ್ಕಾರ ಕಷ್ಟಪಡುತ್ತಿದೆ ಮತ್ತು ಉಳಿಸುತ್ತಲೂಇದೆ. ಚೇತರಿಸಿಕೊಳ್ಳುತ್ತಿರುವವರ ಸಂಖ್ಯೆ ಹೆಚ್ಚಿದೆ. ಆದರೂ ಇದುತೃಪ್ತಿಕರವಲ್ಲ. ಎಲ್ಲ ಸೇರಿ ಕೋವಿಡ್ ಹಿಮ್ಮೆಟ್ಟಿಸಲೇ ಬೇಕು.ಲಸಿಕೆ ಎಲ್ಲರಿಗೂ ದೊರೆಯಲಿದೆ, ವಿತರಣಾ ಜಾಲದಲ್ಲಿ ಕೆಲವುಸಮಸ್ಯೆಗಳಿವೆ ಅದು ನಿವಾರಣೆಯಾಗಲಿದೆ ಎಂದರು.ಕೋವಿಡ್ ಕುರಿತು ಭಯ ಬೇಡ, ಆದರೆ ಎಚ್ಚರಿಕೆ ಇರಲಿ. ಸೋಂಕಿನ ಲಕ್ಷಣ ಕಂಡರೂ ಆಸ್ಪತ್ರೆಗೆ ಬಂದರೆಕೋವಿಡ್ ಎನ್ನುತ್ತಾರೆ ಎಂದು ಮನೆಯಲ್ಲಿಯೇ ಉಳಿಯಬೇಡಿ.ಜಿಲ್ಲೆಯಲ್ಲಿ ಸೋಂಕು ತಗಲಿ ನಾಲ್ಕಾರು ದಿನ ಕಳೆದ ಮೇಲೆಉಸಿರಾಡಲು ಕಷ್ಟವಾದಾಗ, ನಿಮ್ಮಲ್ಲಿ ಆಕ್ಸಿಜನ್ ಇದೆಯೇ?ವೆಂಟಿಲೇಟರ್ ಇದೆಯೇ ಎಂದು ಕೇಳುತ್ತ ಬರುವವರೇಹೆಚ್ಚಾಗಿದ್ದಾರೆ. ಇದು ಬುದ್ಧಿವಂತಿಕೆಯಲ್ಲ, ಬೇಗ ಬರುವುದುಬುದ್ಧಿವಂತಿಕೆ. ಜಿಲ್ಲಾಡಳಿತ, ಸರ್ಕಾರ ಶ್ರಮಪಟ್ಟು ಇಷ್ಟೆಲ್ಲಾವ್ಯವಸ್ಥೆ ಮಾಡಿದೆ ಎಂದರು.ಟಿಎಚ್‌ಓ ಡಾ. ಉಷಾ ಹಾಸ್ಯಗಾರ, ಆಸ್ಪತ್ರೆಯಮುಖ್ಯವೈದ್ಯಾಧಿಕಾರಿ ಡಾ. ರಾಜೇಶ ಕಿಣಿ ಮತ್ತು ಇತರವೈದ್ಯರು ತಾಲೂಕಾಸ್ಪತ್ರೆಗೆ ಆಗಬೇಕಾದ ಕೆಲಸಗಳಕುರಿತು ಸಚಿವರಿಗೆ ಮಾಹಿತಿ ನೀಡಿದರು. ಈ ಸಂದರ್ಭದಲ್ಲಿ ಶಾಸಕ ದಿನಕರ ಶೆಟ್ಟಿ, ಸುನೀಲ ನಾಯ್ಕ ಭಟ್ಕಳಉಪವಿಭಾಗಾಧಿಕಾರಿ,ಹೊನ್ನಾವರ ತಹಶೀಲ್ಧಾರ,ಶ್ರೀದೇವಿಆಸ್ಪತ್ರೆಯ ಡಾ. ಭಾರ್ಗವ ಶೆಟ್ಟಿ, ಇಗ್ನೇಷಿಯಸ್ ಆಸ್ಪತ್ರೆಯಆ್ಯಂಟನಿ ಲೋಪಿಸ್ ಮತ್ತಿತರರು ಹಾಜರಿದ್ದರು.
Leave a Comment