ಹಳಿಯಾಳ:- ತಾಲೂಕಿನಲ್ಲಿ ಕೊರೊನಾ ಮೃತ್ಯುತಾಂಡವ ಮುಂದುವರೆದಿದ್ದು ಭಾನುವಾರ ಮತ್ತೇ ನಾಲ್ವರೂ ಕೊರೊನಾ ಮಹಾಮಾರಿಗೆ ಉಸಿರು ಚೆಲ್ಲಿದ್ದು 59 ಜನರಲ್ಲಿ ಸೊಂಕು ದೃಢಪಟ್ಟಿದೆ.
ಭಾನುವಾರ 59 ಜನರಲ್ಲಿ ಸೊಂಕು ಪತ್ತೆಯಾಗುವ ಮೂಲಕ ತಾಲೂಕಿನ ಕೊರೊನಾ ಸಕ್ರಿಯ ಸೊಂಕಿತರ ಸಂಖ್ಯೆ 621 ಕ್ಕೆ ತಲುಪಿದೆ. ಇನ್ನೂ ಭಾನುವಾರ ನಾಲ್ವರೂ ಕೊರೊನಾಕ್ಕೆ ಉಸಿರು ಚೆಲ್ಲುವ ಮೂಲಕ ಸಾವಿನ ಸಂಖ್ಯೆ 51ಕ್ಕೆ ಏರಿಕೆಯಾಗಿದೆ.
ಪಟ್ಟಣದ ಸದಾಶೀವನಗರ ನಿವಾಸಿ ಪುರಸಭೆ ಮಾಜಿ ಸದಸ್ಯೆ ಗಾಯತ್ರಿ ನೀಲಕಜರ(52), ದೇಶಪಾಂಡೆ ನಗರ ನಿವಾಸಿ 70ವರ್ಷದ ವೃದ್ದ, ಹಂದಲಿ ಗ್ರಾಮದ 47 ವರ್ಷದ ವ್ಯಕ್ತಿ ಹಾಗೂ ತಟ್ಟಿಗೇರಿ ಗ್ರಾಮದ 62 ವರ್ಷದ ವೃದ್ದೆ ಕೊರೊನಾಕ್ಕೆ ಬಲಿಯಾಗಿದ್ದಾರೆ.
ತಾಲೂಕಿನ ಒಟ್ಟೂ ಕೊರೊನಾ ಪ್ರಕರಣಗಳ ಸಂಖ್ಯೆ 2155 ಆಗಿದ್ದರೇ ಗುಣಮುಖರಾದವರ ಸಂಖ್ಯೆ 1484 ಕ್ಕೆ ತಲುಪಿದೆ. 16 ಜನ ಆಸ್ಪತ್ರೆಯಲ್ಲಿ ಹಾಗೂ 605 ಜನ ಹೋಂ ಐಸೋಲೆಷನಲ್ಲಿ ಚಿಕಿತ್ಸೆ ಪಡೆಯುತ್ತಿದ್ದು ತಾಲೂಕಿನಲ್ಲಿ ಪಟ್ಟಣದಲ್ಲಿ 5 ಹಾಗೂ ಗ್ರಾಮಾಂತರ ಭಾಗದಲ್ಲಿ 17 ಒಟ್ಟೂ 22 ಕಂಟೆನಮೆಂಟ್ ಝೋನ್ಗಳನ್ನು ಮಾಡಲಾಗಿದೆ.
Leave a Comment