ಹೊನ್ನಾವರ ; ತಾಲೂಕಿನ ಕಾಸರಕೋಡ್ ಟೊಂಕಾ ಭಾಗದಲ್ಲಿ ತೌಕ್ತೆ ಚಂಡಮಾರುತದಿಂದ ಹಾನಿ ಸಂಭವಿಸಿದ ಪ್ರದೇಶಗಳಿಗೆ ಶಾಸಕ ಸುನೀಲ ನಾಯ್ಕ ಭೇಟಿ ನೀಡಿದರು. ಸೋಮವಾರ ಟೊಂಕಾ ಭಾಗದಲ್ಲಿ ಹಾನಿಗೊಳಗಾದ ಮನೆ ಹಾಗೂ, ಮೀನುಗಾರಿಕಾ ಬಂದರು ಪ್ರದೇಶದ ಪರಿಕರಗಳನ್ನು ವೀಕ್ಷಿಸಿದ ಶಾಸಕರು ಹಾನಿ ಅಂದಾಜು ಪರೀಶೀಲಿಸಿ ಸರ್ಕಾರಕ್ಕೆ ವರದಿ ಸಲ್ಲಿಸಲು ಕಂದಾಯ ಇಲಾಖೆಗೆ ಸೂಚಿಸಿದರು.

ತಾಲೂಕಿನ ಮಂಕಿ, ಕಾಸರಕೋಡ್, ಟೊಂಕಾ ಭಾಗದಲ್ಲಿ ಚಂಡಮಾರುತದ ಗಾಳಿ, ಮಳೆಯಿಂದ ಮನೆಗಳಿಗೆ ಹಾನಿ ಸಂಭವಿಸಿದ್ದು, ಹಾನಿ ಪ್ರದೇಶಕ್ಕೆ ಸರ್ಕಾರದಿಂದ ಪರಿಹಾರ ಒದಗಿಸುವ ಭರವಸೆ ನೀಡಿರುದಲ್ಲದೇ, ತೀರಾ ಹಾನಿಯಾದ ಕುಟುಂಬಗಳಿಗೆ ವೈಯಕ್ತಿಕವಾಗಿಯೂ ಸಹಾಯ ಮಾಡಿದರು.ಈ ಸಂದರ್ಭದಲ್ಲಿ ಸ್ಥಳಿಯ ಜನಪ್ರತಿನಿಧಿಗಳು ಅಧಿಕಾರಿಗಳು ಬಿಜೆಪಿ ಕಾರ್ಯಕರ್ತರು ಹಾಜರಿದ್ದರು.

Leave a Comment