ಭಟ್ಕಳ : ಕೆಪಿಟಿಸಿಎಲ್ ಮತ್ತು ಹೆಸ್ಕಾಂನ ಅಧಿಕಾರಿಗಳು, ನೌಕರರನ್ನು ಕರೊನಾ ವಾರಿಯರ್ಸ್ ಎಂದು ಸರ್ಕಾರ ಪರಿಗಣಿಸಬೇಕು. ಅಲ್ಲದೆ, ಕರೊನಾ ವ್ಯಾಕ್ಸೀನ್ ನೀಡಬೇಕು ಎಂದು ಭಟ್ಕಳ ಹೆಸ್ಕಾಂನ ಪ್ರಾಥಮಿಕ ಸಮಿತಿ ಸದಸ್ಯ ರಮೇಶ ಮಂಜಪ್ಪ ನಾಯ್ಕ ಆಗ್ರಹಿಸಿದ್ದಾರೆ. ಕೋವಿಡ್ ದೇಶದಲ್ಲಿ ಹರಡಿ ಸಾವಿರಾರು ಜನರು ಪ್ರಾಣ ಕಳೆದುಕೊಂಡಿದ್ದಾರೆ.
ಅನೇಕ ಸರ್ಕಾರಿ ಕಛೇರಿ ಹಾಗೂ ಖಾಸಗೀ ಉದ್ಯೋಗಿಗಳು ಮನೆಯಲ್ಲಿಯೇ ಕೆಲಸ ನಿರ್ವಹಿಸುತ್ತಿದ್ದಾರೆ, ಇಂತಹ ಸಂದರ್ಭ ರಾಜ್ಯದ ಇಂಧನ ಇಲಾಖೆಯಲ್ಲಿ ಕೆಲಸ ನಿರ್ವಹಿಸುವ ನೌಕರರು ಅಧಿಕಾರಿಗಳು ದಿನನಿತ್ಯವೂ ತಮ್ಮ ಕಛೇರಿಯಲ್ಲಿ ಕೆಲಸ ನಿರ್ವಹಿಸಿ ವಿದ್ಯುತ್ ವಿತರಣೆಯಲ್ಲಿ ಲೋಪವಾಗದಂತೆ ಸಾರ್ವಕನಿಕರಿಗೆ ಸೇವೆ ನೀಡುತ್ತಿದ್ದಾರೆ. ಅಲ್ಲದೆ, ವಿದ್ಯುತ್ ಬಿಲ್ ಪಾವತಿಗಾಗಿ ಪ್ರತಿ ಮನೆ ಮನೆಗೆ ನೌಕರರು ಹೋಗುತ್ತಿದ್ದಾರೆ. ಹೀಗೆ ದಿನ ನಿತ್ಯವೂ ಕರ್ತವ್ಯ ನಿರ್ವಹಿಸುವ ನೌಕರರು ಜನ ಸೇವೆಯಲ್ಲಿರುವುದರಿಂದ ಅವರಿಗೆ ಕೋವಿಡ್ ತಗಲುವ ಸಾಧ್ಯತೆ ಹೆಚ್ಚಾಗಿದೆ. ಅದಕ್ಕಾಗಿ ಇಂಧನ ಇಲಾಖೆ ಎಲ್ಲಾ ವಿಭಾಗದ ನೌಕರರ ಆರೋಗ್ಯ ಕಾಪಾಡುವುದು ಬಹುಮುಖ್ಯ. ಈಗಾಗಲೆ ಅನೇಕ ನೌಕರರು ಕೋವಿಡ್‌ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಇಂತಹ ಸಂದರ್ಭ ಇಂಧನ ಇಲಾಖೆಯು ಎಲ್ಲಾ ನೌಕರರಿಗೆ ಕೋವಿಡ್ ಲಸಿಕೆ ಶೀಘ್ರವಾಗಿ ನೀಡಬೇಕಾಗಿದೆ. ಅಲ್ಲದೆ, ಅವರನ್ನು ಕೊರೊನಾ ವಾರಿಯರ್ಸ್ ಎಂದು ಪರಿಗಣಿಸಬೇಕಾಗಿದೆ ಎಂದು ಹೆಸ್ಕಾಂನ ಪ್ರಾಥಮಿಕ ಸಮಿತಿ ಸದಸ್ಯ ರಮೇಶ ಮಂಜಪ್ಪ ನಾಯ್ಕ ಪತ್ರಿಕಾ ಪ್ರಕಟನೆಯಲ್ಲಿ ಆಗ್ರಹಿಸಿದ್ದಾರೆ.
Leave a Comment