ಹಳಿಯಾಳ :- 18 ವರ್ಷ ಮೆಲ್ಪಟ್ಟ ವಿವಿಧ ಇಲಾಖೆ ಮುಂಚೂಣಿ ಕಾರ್ಯಕರ್ತರಿಗೆ ಹಳಿಯಾಳದಲ್ಲಿ ಕೊವಿಡ್ ಲಸಿಕೆ ನೀಡುವ ಕಾರ್ಯ ಆರಂಭವಾಗಿದ್ದು ಈ ಬಗ್ಗೆ ವೇಳಾಪಟ್ಟಿಯನ್ನು ಹಳಿಯಾಳ ತಾಲೂಕಾ ವೈದ್ಯಾಧಿಕಾರಿ ಬಿಡುಗಡೆ ಮಾಡಿದ್ದಾರೆ.
ಶನಿವಾರ ಮಾಧ್ಯಮದವರು, ನ್ಯಾಯಾಂಗ ಇಲಾಖೆಗೆ ಕೊವಿಡ್ ಲಸಿಕೆ ನೀಡಲಾಗಿದ್ದು. ದಿ.23 ರಂದು ಹೆಸ್ಕಾಂ, ಅಂಚೆ ಹಾಗೂ ಸಾರಿಗೆ ಇಲಾಕೆ ನೌಕರರಿಗೆ, ದಿ.24 ರಂದು ಕೊವಿಡ್ ಕರ್ತವ್ಯಕ್ಕೆ ನಿಯೋಜಿಸಲ್ಪಟ್ಟ ಶಿಕ್ಷಕರಿಗೆ, ದಿ.25 ರಂದು ವಯೋ ವೃದ್ದರು, ತೀವೃ ಅನಾರೋಗ್ಯದಿಂದ ಬಳಲುತ್ತಿರುವ ಆರೈಕೆದಾರರು, ಅಧಿಕೃತ ಗುರುತಿನ ಚೀಟಿ ಹೊಂದಿದ ಫಲಾನುಭವಿಗಳು-ವೃದ್ದಾಶ್ರಮ ವಾಸಿಗಳು, ನಿರ್ಗತಿಕರು ಹಾಗೂ ಆಯಿಲ್ ಇಂಡಸ್ಟ್ರೀ ಹಾಗೂ ಗ್ಯಾಸ್ ಸರಬರಾಜು ಮಾಡುವವರು, ಪೆಟ್ರೋಲ್ ಬಂಕ ಕರ್ಮಚಾರಿಗಳು ಒಳಗೊಂಡಂತೆ.
ದಿ.26 ರಂದು ಬೀದಿ ಬದಿ ವ್ಯಾಪಾರ ಮಾಡುವವರು, ದಿ.28 ರಂದು ಅಂಗವೈಕಲ್ಯ ಹೊಂದಿರುವ ಮಾನಸಿಕ ಅಸ್ವಸ್ಥರು ಸೇರಿದಂತೆ ಫಲಾನುಭವಿಗಳು ಹಾಗೂ ಓರ್ವ ಆರೈಕೆದಾರರು ಹಾಗೂ ದಿ.29 ರಂದು ಆಟೋ ಮತ್ತು ಕ್ಯಾಬ್ ಚಾಲಕರಿಗೆ ಪಟ್ಟಣದ ಶಿವಾಜಿ ಕಾಲೇಜ್ನಲ್ಲಿಯ ಕೊವಿಡ್ ಲಸಿಕಾ ಕೇಂದ್ರದಲ್ಲಿ ಕೊವಿಡ್ ಲಸಿಕೆ ನೀಡಲಾಗುವುದು ಎಂದು ತಾಲೂಕಾಡಳಿತ ಹಾಗೂ ಆರೋಗ್ಯ ಇಲಾಖೆ ತಿಳಿಸಿದೆ.
Leave a Comment