ಯಲ್ಲಾಪುರ : ಯಲ್ಲಾಪುರ ವಿಧಾನಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಕೋವಿಡ್ ಶಂಕಿತರಿಗಾಗಿ ಮಾನ್ಯ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ” ಹೆಬ್ಬಾರ್ ಕೋವಿಡ್ ಕೇರ್ ಕಿಟ್ ” ಹೆಸರಿನಡಿಯಲ್ಲಿ ಉಚಿತ ಔಷಧ ಕಿಟ್ ನೀಡಲು ತಿರ್ಮಾನಿಸಿದ್ದು.
ಇಂದು ಮಾನ್ಯ ಕಾರ್ಮಿಕ ಖಾತೆ ಸಚಿವರಾದ ಶ್ರೀ ಶಿವರಾಮ ಹೆಬ್ಬಾರ್ ಅವರು ಪಟ್ಟಣದ ಭಾರತೀಯ ಜನತಾ ಪಕ್ಷದ ಕಾರ್ಯಾಲಯದ ಬಳಿ ಪಕ್ಷ ಮುಖಂಡರ ಹಾಗೂ ಕಾರ್ಯಕರ್ತರ ಸಮ್ಮುಖದಲ್ಲಿ ” ಹೆಬ್ಬಾರ್ ಕೋವಿಡ್ ಕೇರ್ ಕಿಟ್ ” ವಿತರಣಾ ಕಾರ್ಯಕ್ಕೆ ಚಾಲನೆ ನೀಡಿ, ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿದರು.
ಈ ಸಂದರ್ಭದಲ್ಲಿ ವಿಧಾನಪರಿಷತ ಸದಸ್ಯರಾದ ಶ್ರೀ ಶಾಂತಾರಾಮ ಸಿದ್ದಿ, ಪಂಚಾಯತ ರಾಜ್ಯ ವಿಕೇಂದ್ರೀಕರಣ ಸಮಿತಿಯ ಉಪಾಧ್ಯಕ್ಷರಾದ ಶ್ರೀ ಪ್ರಮೋದ ಹೆಗಡೆ, ಬಿಜೆಪಿ ಮಂಡಲಾಧ್ಯಕ್ಷರಾದ ಶ್ರೀ ಗೋಪಾಲಕೃಷ್ಣ ಗಾಂವ್ಕರ್, ಶ್ರೀ ನಾಗಭೂಷಣ ಹಾವಣಗಿ , ಯುವ ನಾಯಕರಾದ ಶ್ರೀ ವಿವೇಕ್ ಹೆಬ್ಬಾರ್, ಪ್ರಮುಖರಾದ ಶ್ರೀ ವಿಜಯ ಮಿರಾಶಿ, ಶ್ರೀ ರವಿಗೌಡ ಪಾಟೀಲ್, ಶಿರಿಷ್ ಪ್ರಭು, ಶ್ರೀ ಬಾಲಕೃಷ್ಣ ನಾಯಕ, ಪ.ಪಂ ಅಧ್ಯಕ್ಷರು, ಉಪಾಧ್ಯಕ್ಷರು ಸದಸ್ಯರು,ಪಕ್ಷದ ವಿವಿಧಸ್ತರದ ಪದಾಧಿಕಾರಿಗಳು , ಕಾರ್ಯಕರ್ತರು ಉಪಸ್ಥಿತರಿದ್ದರು.
Leave a Comment