ಹೊನ್ನಾವರ: ಕರ್ನಾಟಕ ರಾಜ್ಯ ಸರ್ಕಾರ ರವರ ಅಧ್ಯಕ್ಷತೆಯಲ್ಲಿ ನಡೆದ ಸಭೆಯಲ್ಲಿ ಚರ್ಚಿಸಿದಂತೆ 18 ರಿಂದ 44 ವರ್ಷ ವಯೋಮಾನದವರಲ್ಲಿ ಆದ್ಯತೆ ಗುಂಪುಗಳನ್ನು ಗುರುತಿಸಿ ಕೋವಿಡ್-19 ಲಸಿಕಾರಣವನ್ನ ನಡೆಸುವ ಕುರಿತು.ಆದ್ಯತೆ ಗುಂಪುಗಳನ್ನು ಗುರುತಿಸಿರುತ್ತಾರೆ. ಅದರಂತೆ ಅನುಬಂಧ-1 ರಲ್ಲಿ ರಾಜ್ಯ ಕೊರೊನಾ ಮುಂಚೂಣಿ ಕಾರ್ಯಕರ್ತರ ಪಟ್ಟಿಯಲ್ಲಿ ಆಟೋ ಹಾಗೂ ಕ್ಯಾಬ್ ಚಾಲಕರನ್ನು ಒಟ್ಟುಗೂಡಿಸಿ ಜಿಲ್ಲಾ ಮಟ್ಟದಲ್ಲಿ ಜಿಲ್ಲಾ ಆಸ್ಪತ್ರೆಯಲ್ಲಿ ಹಾಗೂ ಆಯಾ ತಾಲೂಕುಗಳ ತಾಲೂಕು ಸರ್ಕಾರಿ ಆಸ್ಪತ್ರೆಗಳಲ್ಲಿ 29-05-21 ರಂದು ಲಸಿಕಾಕಾರಣಕ್ಕೆ ವ್ಯವಸ್ಥೆಗೊಳಿಸಲಾಗಿರುತ್ತದೆ. ಕಾರಣ ಸದರಿ ಆಟೋ ಹಾಗೂ ಕ್ಯಾಬ್ ಚಾಲಕರು ಅವರವರ ಆಟೋ ಹಾಗೂ ಕ್ಯಾಬ್ ಯೂನಿಯನ್ ಮುಖಾಂತರ ಲಸಿಕೆ ಪಡೆಯುವಂತೆ ಸೂಕ್ತ ಕ್ರಮ ಕೈಗೊಳ್ಳಲಾಗಿದೆ. ಎಂದು ಪಟ್ಟಣ ಪಂಚಾಯತ್ ಅಧ್ಯಕ್ಷ ಹಾಗೂ ಆಟೋ ರಿಕ್ಷಾ ಚಾಲಕ ಮಾಲಕರ ಸಂಘದ ಅಧ್ಯಕ್ಷ ಶಿವರಾಜ್ ಮೇಸ್ತ ತಿಳಿಸಿದ್ದಾರೆ.

ಸಾರಿಗೆ ಇಲಾಖೆಯ ಹಿರಿಯ ಸಹಾಯಕ ಅಧಿಕಾರಿ ಎಲ್.ಪಿ.ನಾಯಕ್ ಈ ಬಗ್ಗೆ ನಮ್ಮ ಸಂಘಟನೆಯ ಬಳಿ ಪ್ರಯೋಜನ ಪಡೆಯಲು ತಿಳಿಸಿದ್ದುನಮ್ಮ ವ್ಯಾಪ್ತಿಯಲ್ಲಿ ಬರುವ ತಾಲೂಕುಗಳಲ್ಲಿ 18 ರಿಂದ 44 ವಯೋಮಾನದಲ್ಲಿ ಬರುವ ಆಟೋ ಹಾಗೂ ಕ್ಯಾಬ್ ಚಾಲಕರು ಅವರ ಮಾಹಿತಿಯನ್ನು ಈ ಪತ್ರದೊಂದಿಗೆ ಲಗತ್ತಿಸಿದ ಅನುಬಂಧ-3 ರಲ್ಲಿ ಭರ್ತಿ ಮಾಡಿ ತಮ್ಮಿಂದ ದ್ರಡೀಕರಣಗೊಳಿಸಿ ಸಂಬಂಧಪಟ್ಟ ಜಿಲ್ಲಾ/ತಾಲೂಕು ಆಸ್ಪತ್ರೆಗಳಿಗೆ ನೀಡಿ ಲಸಿಕೆಯನ್ನು ಹಾಕಿಕೊಳ್ಳಬೇಕೆಂದು ವಿನಂತಿಸುತ್ತೇನೆ.45 ವರ್ಷದ ಮೇಲ್ಪಟ್ಟ ಆಟೋ ಹಾಗೂ ಕ್ಯಾಬ್ ಚಾಲಕರು ಲಸಿಕೆ ಪಡೆಯದೆ ಇದ್ದಲ್ಲಿ ಅಂತವರು ನೇರವಾಗಿ ತಮ್ಮ ಆಧಾರ್ ಕಾರ್ಡ್ ತೋರಿಸಿ ಲಸಿಕೆಯನ್ನು ಪಡೆದುಕೊಳ್ಳಬಹುದು.45 ವರ್ಷದ ಮೇಲ್ಪಟ್ಟ ಆಟೋ ಹಾಗೂ ಕ್ಯಾಬ್ ಚಾಲಕರು ಈಗಾಗಲೇ ಮೊದಲನೇ ಹಂತದ ಲಸಿಕೆ ಪಡೆದಿದ್ದಲ್ಲಿ ಅಂತವರು ಲಸಿಕೆ ಪಡೆದ 84 ದಿನಗಳ ನಂತರ ಪಡೆದುಕೊಳ್ಳಬಹುದು.ಹೆಚ್ಚಿನ ಮಾಹಿತಿಯಾಗಿ ಸಾರಿಗೆ ಅಧಿಕಾರಿ ಬಿ.ಡಿ.ಹರ್ತಿ ಸಂಪರ್ಕ: 9480537194 , ಶಿವರಾಜ್ ಮೇಸ್ತ ಅಧ್ಯಕ್ಷರು ಆಟೋ ರಿಕ್ಷಾ ಚಾಲಕ ಮಾಲಕರ ಸಂಘ ಹಾಗೂ ಅಧ್ಯಕ್ಷರು ಪಟ್ಟಣ ಪಂಚಾಯತ್ ಹೊನ್ನಾವರ ಸಂಪರ್ಕ: 98803 80092, 94811 16866 ಕಾರ್ಯದರ್ಶಿ ಪ್ರಕಾಶ್ ನಾಯ್ಕ 9482112840, ಡಿ.ಎಂ.ನಾಯ್ಕ 9945928999 ಪ್ರಯೋಜನ ಪಡೆಯಲು ಶಿವರಾಜ್ ಮೇಸ್ತ ಈ ಮೂಲಕ ತಿಳಿಸಿದ್ದಾರೆ.
Leave a Comment