ಹಳಿಯಾಳ :- ಕೊರೊನಾ ತುರ್ತು ಪರಿಸ್ಥಿತಿಯಲ್ಲಿ ಮನೆಯಲ್ಲಿ ಆಕ್ಸಿಜನ್ ಅವಶ್ಯಕತೆ ಇದ್ದವರಿಗೆ ರಾಷ್ಟ್ರೀಯ ಸ್ವಯಂಸೇವಕ ಸಂಘ ಹಳಿಯಾಳ ಸೇವಾ ವಿಭಾಗದಿಂದ ಆಕ್ಸಿಜನ್ ಮನೆಬಾಗಿಲಿಗೆ ತಲುಪಿಸಲಾಗುವುದು ಎಂದು ಸಂಘಟನೆ ತಿಳಿಸಿದೆ.

ರಾಷ್ಟ್ರೀಯ ಸ್ವಯಂಸೇವಕ ಸಂಘ ಹಳಿಯಾಳ ಸೇವಾ ಕಾರ್ಯಕ್ಕೆ ಕೊಲ್ಲಾಪುರದ ಕನ್ನೇರಿ ಮಠದಿಂದ ಕೋರೋನ ಹಿಮ್ಯೂನಿಟಿ ಬುಸ್ಟರ್ ಹೋಮಿಯೋಪತಿ ಔಷಧ ಹಾಗೂ ಸಂಜೀವಿನಿ ಕಾಡಾ ಹಳಿಯಾಳ ತಾಲೂಕಿನ ಮುರ್ಕವಾಡ ಹಾಗೂ ದುಃಸಗಿ ಹಾಗೂ ನಗರದ ಕೆಲವು ಭಾಗಗಳಲ್ಲಿ ವಿತರಣೆ ಮಾಡಲಾಯಿತು.
ಈ ಹೋಮಿಯೋಪತಿ ಔಷಧ ತೆಗೆದುಕೊಂಡರೆ ಹಿಮ್ಯೂನಿಟಿ ಶಕ್ತಿ ಹೆಚ್ಚಾಗುತ್ತದೆ ಕೋರೋನ ಎದುರಿಸಲು ಸಹಾಯಮಾಡುತ್ತದೆ ಎಂದು ಜನರಿಗೆ ಜಾಗೃತಿ ಮೂಡಿಸಿ ವಿತರಿಸಲಾಯಿತು ಹಾಗೂ ನಗರದ ಹಲವೆಡೆ ಹಿರಿಯ ನಾಗರಿಕರಿಗೆ ಪ್ರೌಢರಿಗೆ ಹಾಗೂ ಅನಿವಾರ್ಯ ಇರುವರಿಗೆ ಸಹಾಯವಾಣಿಯ ಮೂಲಕ ತರಕಾರಿ ಹಾಗೂ ದಿನಸಿ ಹಾಗೂ ಔಷಧ ಮನೆಗೆ ತಲುಪಿಸುವ ಕಾರ್ಯ ನಡೆಯುತ್ತದೆ ಹಿರಿಯರು ಹಾಗೂ ಪ್ರೌಢರು ಬಹಳ ಅನಿವಾರ್ಯತೆ ಇರುವವರು ದಿನಸಿ, ತರಕಾರಿ, ಔಷಧಿ ಬೇಕಾದರೆ ಅಪ್ಪಾರಾವ್ ಪೂಜಾರಿ 9945433067, ಅಕ್ಷಯ್ ಕುಸನೂರು-9844931234, ಸರ್ವೇಶ ಖಾಂದಳಕರ್ -8971373715, ಸಂಜು ದೇವಕಾರಿ -9901436489, ಇವರನ್ನು ಸಂಪರ್ಕಿಸಬೇಕಾಗಿ ತಿಳಿಸಲಾಗಿದೆ.
Leave a Comment