ಹಳಿಯಾಳ:- ಪಟ್ಟಣದ ಪ್ರಾಥಮಿಕ ಕೃಷಿ ಪತ್ತಿನ ಸಹಕಾರಿ ಅಭಿವೃದ್ದಿ ಬ್ಯಾಂಕ್(ಪಿಎಲ್‍ಡಿ) ಬ್ಯಾಂಕ್ ವ್ಯವಸ್ಥಾಪಕರಾಗಿದ್ದ ಜ್ಯೋತಿ ಎಮ್ ಬೊರಕರ(42) ಕೊರೊನಾ ಮಹಾಮಾರಿಗೆ ಬುಧವಾರ ಉಸಿರು ಚೆಲ್ಲಿದ್ದಾರೆ.

ಕಳೆದ 13 ವರ್ಷಗಳಿಂದ ಬ್ಯಾಂಕನಲ್ಲಿ ಉತ್ತಮ ಸೇವೆ ಸಲ್ಲಿಸಿದ್ದ ಅವರು ಮೂಲತಃ ಶಿರಸಿ ಮೂಲದವರು ಅವರಿಗೆ ಕಳೆದ 13 ದಿನಗಳ ಹಿಂದೆ ಕೊರೊನಾ ಸೊಂಕು ದೃಢಪಟ್ಟಿತ್ತು. ಹಳಿಯಾಳ ಸರ್ಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದ ಅವರನ್ನು ಹೆಚ್ಚಿನ ಚಿಕಿತ್ಸೆಗೆ ಶಿರಸಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಆದರೇ ಚಿಕಿತ್ಸೆ ಫಲಕಾರಿಯಾಗದೆ ಇಂದು ಅವರು ಇಹಲೋಕ ತ್ಯಜಿಸಿದರು. ಅವರ ನಿಧನಕ್ಕೆ ಹಳಿಯಾಳ ಪಿಎಲ್‍ಡಿ ಬ್ಯಾಂಕ್ ಆಡಳಿತ ಮಂಡಳಿ, ಮಾಜಿ ಶಾಸಕ ಸುನೀಲ್ ಹೆಗಡೆ, ಸಿಬ್ಬಂದಿ ವರ್ಗದವರು ಸಂತಾಪ ಸೂಚಿಸಿದ್ದಾರೆ.
Leave a Comment