ಸ್ವ-ಉದ್ಯೋಗದಲ್ಲಿ ತೊಡಗಿರುವವರಿಗಾಗಿ, ಸ್ವ-ಉದ್ಯೋಗದ ಆಕಾಂಕ್ಷಿಗಳಿಗಾಗಿ, ರಾಜ್ಯದ ಯಾವುದೇ ಆರ್ಸೆಟಿ/ರೂಡ್ಸೆಟಿಯಲ್ಲಿ ತರಬೇತಿ ಪಡೆದವರಿಗಾಗಿ ಲಾಕ್-ಡೌನ್ ಬಿಡುವಿನ ಸಮಯವನ್ನು ಸದುಪಯೋಗ ಪಡಿಸಿಕೊಳ್ಳಲು ಸುವರ್ಣ ಅವಕಾಶ.
ಆಸಕ್ತರು ಈ ಕೆಳಗಿನ ಲಿಂಕ್ ಮೂಲಕ ದಿ.3.6.2021ರೊಳಗಾಗಿ ವರ್ಕಶಾಪ್ ಗಳಿಗೆ ತಮ್ಮ ಹೆಸರು ನೊಂದಣೆ ಮಾಡಿಕೊಳ್ಳಬೇಕು. ಮೊದಲು ನೊಂದಣೆ ಮಾಡಿದವರಿಗೆ ಆದ್ಯತೆ ನೀಡಲಾಗುವುದು.
ಹೆಚ್ಚಿನ ಜನರಿಗೆ ಅವಕಾಶ ಕಲ್ಪಿಸುವ ಉದ್ದೇಶದಿಂದ ಯಾವುದಾದರೂ ಎರಡು ವರ್ಕಶಾಪ್ ಗಳಲ್ಲಿ ಮಾತ್ರ ಭಾಗವಹಿಸಬಹುದು. ಭಾಗವಹಿಸಲು ಇಚ್ಚಿಸುವ ಯಾವುದಾದರೂ ಎರಡು ವಿಷಯಗಳನ್ನು ಆಯ್ಕೆ ಮಾಡಿ. ಆಯ್ಕೆ ಮಾಡಿಕೊಂಡ ತರಬೇತಿ ವಿಷಯದಂದು ಆನ್ ಲೈನ್ ವರ್ಕಶಾಪ್ ನಲ್ಲಿ ಭಾಗವಹಿಸುವುದು ಕಡ್ಡಾಯವಾಗಿದೆ. • ದಿ. 7.6.2021ರಂದು – ಜಿ.ಎಸ್.ಟಿ. ನೊಂದಣೆ ಮಾಡಿಕೊಳ್ಳುವ ವಿಧಾನ, ಮಹತ್ವ ಹಾಗೂ ಜಿ.ಎಸ್.ಟಿಗೆ ಸಂಭಂದಿಸಿದ ಮಾರ್ಗದರ್ಶನ.• ದಿ. 14.6.2021ರಂದು – ಸಾಲ ಸೌಲಭ್ಯ ಪಡೆಯಲು ಅಗತ್ಯವಿರುವ ಸಿಬಿಲ್ ಸ್ಕೋರ್ ಮಹತ್ವ ಹಾಗೂ ಸಾಲದ ಅರ್ಜಿಗಳೊಂದಿಗೆ ಲಗತ್ತಿಸಬೇಕಾದ ಅಗತ್ಯ ದಾಖಲೆಗಳು.• ದಿ. 21.6.2021ರಂದು – ಸ್ವ-ಉದ್ಯೋಗದಲ್ಲಿ ಡಿಜಿಟಲ್ ಮಾರ್ಕೇಟಿಂಗ್ ನ ಮಹತ್ವ ಹಾಗೂ ಈ ಮೂಲಕ ಗ್ರಾಹಕರನ್ನು ಹೇಗೆ ತಲುಪಬಹುದು.• ದಿ. 28.6.2021ರಂದು – ಸ್ವ-ಉದ್ಯೋಗಕ್ಕೆ ಲಭ್ಯವಿರುವ ಸರಕಾರಿ ಯೋಜನೆಗಳು ಹಾಗೂ ಯೋಜನಾ ವರದಿಯ ಮಹತ್ವ ಮತ್ತು ಪರಿಣಾಮಕಾರಿಯಾಗಿ ಯೋಜನಾ ವರದಿ ಸಿದ್ಧಪಡಿಸುವುದು ಹೇಗೆ?
ಆಸಕ್ತರು ಕೂಡಲೇ ಈ ಕೆಳಗಿನ ಲಿಂಕ್ ಮೂಲಕ ತಮ್ಮ ಹೆಸರನ್ನು ನೊಂದಾಯಿಸಿಕೊಳ್ಳಿ. https://forms.gle/Lem5RPEMTv4QZSaq7
ಸೂಚನೆ: ಈ ಮೊದಲು ನೊಂದಣೆ ಮಾಡಿದವರು ಮತ್ತೆ ಪುನಃ ವಿಷಯಗಳನ್ನು ಆಯ್ಕೆ ಮಾಡಿ ಮತ್ತೊಮ್ಮೆ ತಮ್ಮ ಹೆಸರು ನೊಂದಾಯಿಸಿಕೊಳ್ಳಬೇಕು. ಕಡ್ಡಾಯವಾಗಿ ಭಾಗವಹಿಸುವವರು ಮಾತ್ರ ಹೆಸರು ನೊಂದಾಯಿಸಿಕೊಳ್ಳಿ.

Leave a Comment