ಭಟ್ಕಳ : ಮಾನಸಿಕವಾಗಿ ಮನನೊಂದು ನರ್ಸಿಂಗ್ ವಿದ್ಯಾರ್ಥಿನಿರ್ವಳು ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಘಟನೆ ತಾಲೂಕಿನ ಮುರ್ಡೇಶ್ವರ ಬಸ್ತಿ ಕಾಯ್ಕಿಣಿಯ ಬಿದ್ರಮನೆ ಯಲ್ಲಿ ನಡೆದಿದೆ.
ಮೃತ ಯುವತಿ ಜಯಶ್ರೀ ವೆಂಕಟ್ರಮಣ ನಾಯ್ಕ ಎಂದು ತಿಳಿದು ಬಂದಿದ್ದು.
ವಿದ್ಯಾರ್ಥಿನಿ ಉಡುಪಿಯಲ್ಲಿ 2 ನೇ ವರ್ಷದ ನರ್ಸಿಂಗ್ ವಿದ್ಯಾಭ್ಯಾಸ ಮಾಡಿಕೊಂಡಿದ್ದು ಇವಳು ಕಳೆದ ಒಂದುವರೆ ತಿಂಗಳ ಹಿಂದೆ ಯಾರೊಂದಿಗೆ ಸರಿಯಾಗಿ ಮಾತನಾಡುತ್ತಿಲ್ಲ ಎಂದು ಶಿಕ್ಷಕರು ಕುಟುಂಬದವರಿಗೆ ತಿಳಿಸಿದ್ದಾರೆ.ನಂತರ ಜಯಶ್ರೀ ಪಾಲಕರಿ ಆಕೆಯನ್ನು, ಮನೆಗೆ ಕರೆದುಕೊಂಡು ಬಂದು ಮುರ್ಡೇಶ್ವರ ಖಾಸಗಿ ಆಸ್ಪತ್ರೆ ವೈದ್ಯರು ಪರೀಕ್ಷಿಸಿ,ನಂತರ ಅನುವಂಶಿಕವಾಗಿ ಹಾಗೂ ಮಾನಸಿಕ ಕಾಯಿಲೆಗೆ ಒಳಗಾದಂತೆ ಕಂಡು ಬಂದಿರುವ ಬಗ್ಗೆ ವೈದ್ಯರು ಕುಟುಂಬದವರಿಗೆ ತಿಳಿಸಿದ್ದಾರೆ.ನಂತರ ಹೆಚ್ಚಿನ ಚಿಕಿತ್ಸೆಯನ್ನು ಹೊನ್ನಾವರದ ಖಾಸಗಿ ಆಸ್ಪತ್ರೆ ಯಲ್ಲಿ ನೀಡುತ್ತಿದ್ದರು. ಆದರೆ ಯುವತಿ ಬೆಳಗಿನ ಜಾವ ಅವದಿಯಲ್ಲಿ ಮನೆಯ ಎದುರಿಗೆ ಇದ್ದ ಬಾವಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡಿದ್ದಾಳೆ ಎಂದು ತಿಳಿದು ಬಂದಿದೆ. ಘಟನೆಗೆ ಸಂಬಂದಿಸಿದಂತೆ ಮೃತ ಯುವತಿ ಅಕ್ಕ ಶೃತಿ ವೆಂಕಟ್ರಮಣ ನಾಯ್ಕ ದೂರು ನೀಡಿದ್ದು ಈ ಬಗ್ಗೆ ಪ್ರಕರಣ ದಾಖಲಿಸಿಕೊಂಡ ಮುರ್ಡೇಶ್ವರ ಠಾಣೆಯಲ್ಲಿ ಪೋಲಿಸರು ಮುಂದಿನ ತನಿಖೆ ಕೈಗೊಂಡಿದ್ದಾರೆ.
Leave a Comment