ಹೊನ್ನಾವರ;
ಆಕೆಯದು ಸಾಯುವ ವಯಸ್ಸಂತೂ ಅಲ್ಲವೇ ಅಲ್ಲ. ಎಲ್ಲಾ ಹೆಣ್ಣುಮಕ್ಕಳಂತೆಯೇ ಬದುಕಿನಲ್ಲಿ ನೂರಾರು ಕನಸು ಕಟ್ಟಿಕೊಂಡು ವರ್ಷದ ಹಿಂದಷ್ಟೇ ಮದುವೆಯಂಬ ಮಧುರ ಬಂಧನಕ್ಕೆ ಒಳಗಾಗಿದ್ದಳು.
ಮಗುವಿಗೆ ಪ್ರಪಂಚದ ಬೆಳಕನ್ನು ಕಾಣಿಸಿದ ಮೂರುದಿನಲ್ಲಿಯೇ ಹಾಲುಗಲ್ಲದ ಹಸುಗೂಸನ್ನು, ಕೈ ಹಿಡಿದ ಬಾಳ ಸಂಗಾತಿಯನ್ನು, ಹುಟ್ಟಿದ ಮನೆಯ, ಮೆಟ್ಟಿದ ಮನೆಯ ಅಪಾರ ಬಂಧುಗಳನ್ನು ಕಣ್ಣೀರಿನ ಕೋಡಿಯಲ್ಲಿ ಮುಳುಗಿಸಿ ಬಾರದ ಲೋಕಕ್ಕೆ ನಡೆದುಬಿಟ್ಟಿದ್ದಾಳೆ.

ಚೊಚ್ಚಲ ಹೆರಿಗೆಯ ಬೆನ್ನಲ್ಲೇ ಮಾಲತಿ ಶೆಟ್ಟಿ (28) ಸಾವನ್ನಪ್ಪಿದ ಘಟನೆ ಹೊನ್ನಾವರದಲ್ಲಿ ನಡೆದಿದೆ.
ತಾಲೂಕಿನ ಹಡಿನಬಾಳ ಸಮೀಪದ ಕಡಗೇರಿಯವಳಾದ ಮಾಲತಿಗೆ ವರ್ಷದ ಹಿಂದೆ ಕೆಳಗಿನ ಇಡಗುಂಜಿಯ ರವಿ ಶೆಟ್ಟ ಜೊತೆ ಮದುವೆಯಾಗಿತ್ತು.
ಎಂಟು ತಿಂಗಳ ಗರ್ಭಿಣಿಯಾಗಿದ್ದ ಮಾಲತಿಗೆ ಹೆರಿಗೆ ನೋವು ಕಾಣಿಸಿಕೊಂಡ ಹಿನ್ನಲೆಯಲ್ಲಿ ಆಸ್ಪತ್ರೆಗೆ ಕರೆದೊಯ್ಯಲಾಗಿತ್ತು. ನವಮಾಸ ತುಂಬುವ ಮೊದಲೇ ಮಗುವನ್ನು ತಾಯಿ ಒಡಲೊಳಗಿಂದ ಹೊರ ತೆಗೆಯಬೇಕಾದ ಅನಿವಾರ್ಯತೆ ಎದುರಾದಾಗ ದಿನಾಂಕ 27-05-2021ರಂದು ವೈದ್ಯರು ಮಗುವನ್ನು ಯಶಸ್ವಿಯಾಗಿ ತಾಯಿಯ ಗರ್ಭದಿಂದ ಹೊರ ತೆಗೆದಿದ್ದರು.
ಬಾಣಂತಿಗೆ ವಿಪರೀತ ರಕ್ತ ಸ್ರಾವ ಆಗಿದೆ ಎಂಬ ಆರೋಪವಿದೆ.ಉಡುಪಿಯ ಖಾಸಗಿ ಆಸ್ಪತ್ರೆಯ ತೀವೃ ನಿಗಾ ಘಟಕದಲ್ಲಿಟ್ಟು ಮೂರುದಿನ ಚಿಕಿತ್ಸೆ ನೀಡಿದರೂ ಮಾಲತಿ ಚಿಕಿತ್ಸೆ ಫಲಕಾರಿಯಾಗದೆ ಭಾನುವಾರ ಮತಪಟ್ಟಿದ್ದಾರೆ.
ತಾಯಿಯ ಮುಖವನ್ನೇ ನೋಡದ ಹಸುಳೆಯನ್ನು ಆಸ್ಪತ್ರೆಯಲ್ಲಿ ಆರೈಕೆ ಮಾಡುತ್ತಿದ್ದಾರೆ ಕುಟುಂಬ ವರ್ಗದವರು.

Leave a Comment