ಭಟ್ಕಳ: ಶುಕ್ರವಾರದಂದು ಮಾಜಿ ಶಾಸಕ ಮಂಕಾಳ ವೈದ್ಯರು ಶಾಸಕರ ವಿರುದ್ದ ನೀಡಿದ ಹೇಳಿಕೆ ಸಂಪೂರ್ಣ ಹಾಸ್ಯಾಸ್ಪದವಾಗಿದ್ದು, ಯಾಕೆಂದರೆ ಕೋವಿಡ್ ನಿಯಂತ್ರಣದ ನಿತ್ಯವೂ ಜನರೊಂದಿಗೆ ಒಂದಾಲ್ಲೊಂದು ಚಟುವಟಿಕೆಯಲ್ಲಿ ಪಾಲ್ಗೊಂಡಿದ್ದು ಜನರ ಮಧ್ಯೆ ಇದ್ದಾರೆ. ಇವೆಲ್ಲವೂ ಮಾಜಿ ಶಾಸಕರಿಗೆ ಕಾಣುವುದಿಲ್ಲ ಎಂದರೆ ಅವರು ಪತ್ರಿಕೆ, ಟಿವಿ ಮಾಧ್ಯಮ ಹಾಗೂ ಸಾಮಾಜಿಕ ಜಾಲತಾಣವನ್ನು ವೀಕ್ಷಿಸುವುದಿಲ್ಲ ಮೊದಲು ಇವೆಲ್ಲವನ್ನು ನೋಡಿ ಎಂದು ಭಟ್ಕಳ ಬಿಜೆಪಿ ಮಂಡಲ ಅಧ್ಯಕ್ಷ ಸುಬ್ರಾಯ ದೇವಾಡಿಗ ತಿರುಗೇಟು ನೀಡಿದ್ದಾರೆ.

ಅವರು ಶನಿವಾರದಂದು ಈ ಕುರಿತು ಬಿಜೆಪಿ ಕಛೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾಧ್ಯಮದವರೊಂದಿಗೆ ಮಾತನಾಡುತ್ತಿದ್ದರು. ‘ಕೋವಿಡ್ ಎರಡನೇ ಅಲೆ ಆರಂಭದಿಂದ ಮೇ 1 ಲಾಕ ಡೌನ ಘೋಷಣೆ ಬಳಿಕ ಭಟ್ಕಳ ಹೊನ್ನಾವರ ಕ್ಷೇತ್ರದಲ್ಲಿ ಸಹಾಯಕ ಆಯುಕ್ತರ ಸಮ್ಮುಖದಲ್ಲಿ ತಹಸೀಲ್ದಾರ ಹಾಗೂ ಆರೋಗ್ಯ ಇಲಾಖೆ ಅಧಿಕಾರಿಗಳ ಸಭೆ ಕರೆದು ಕೋವಿಡ್ ನಿಯಂತ್ರಣ, ಜನರಿಗೆ ನೀಡಬೇಕಾದ ಜಾಗೃತಿ ಹಾಗೂ ಅಧಿಕಾರಿಗಳ ಜವಾಬ್ದಾರಿಯುತ ಕೆಲಸದ ಬಗ್ಗೆ ಸೂಚನೆ ನೀಡಿ ಅದರ ನಿರ್ವಹಣೆ ಗಮನಿಸುತ್ತಿದ್ದಾರೆ. ಹಾಗೂ ಭಟ್ಕಳದ ಮತ್ತು ಹೊನ್ನಾವರ ಕೆಲ ಗ್ರಾಮ ಪಂಚಾಯತಗಳು ಕಂಟೈನಮೆಂಟ್‍ಗಳಾಗಿದ್ದು ಅಲ್ಲಿನ ಸ್ಥಳಿಯ ಗ್ರಾಮ ಪಂಚಾಯತ ಮಟ್ಟದಲ್ಲಿ ಟಾಸ್ಕ ಪೋರ್ಸ ಸಮಿತಿ ರಚಿಸಿ ಸಭೆ ನಡೆಸಿ ಅಲ್ಲಿಯೂ ನಿಯಂತ್ರಣದ ಸೂಚನೆ ನೀಡಿದ್ದಾರೆ ಎಂದರು.
ಇನ್ನು ಕೊವಿಡ್ ಸಂದರ್ಭದಲ್ಲಿ ಗ್ರಾಮೀಣ ಭಾಗದ ಜನರಿಗೆ ಅನೂಕೂಲವಾಗುವ ನಿಟ್ಟಿನಲ್ಲಿ ಶಾಸಕ ಸುನೀಲ ನಾಯ್ಕ ಅವರು ತಮ್ಮ ಸ್ವಂತ ಖರ್ಚಿನಲ್ಲಿ ಆಕ್ಸಿಜನ್ ಪೂರೈಕೆ ಸಿಗುವ ಎರಡು ಅಂಬ್ಯುಲೆನ್ಸ ಸೇವೆ ಆರಂಭಿಸಿ ಇಲ್ಲಿಗೆ 500ಕ್ಕೂ ಅಧಿಕ ಜನರಿಗೆ ಇದು ಪ್ರಯೋಜನಕ್ಕೆ ಬಂದಿದೆ. ಅದರಂತೆ ಶಾಸಕರ ಪ್ರದೇಶಾಭಿವೃದ್ಧಿ ನಿಧಿಯಿಂದ 2 ಸುಸಜ್ಜಿತ ಆಕ್ಸಿಜನ್, ವೆಂಟಿಲೇಟರ ಇರುವ ಅಂಬ್ಯುಲೆನ್ಸ ಸಹ ಎರಡು ಸರಕಾರಿ ಆಸ್ಪತ್ರೆಗೆ ಹಸ್ತಾಂತರಿಸಿ ಜನರ ಸೇವೆ ನೀಡಿದ್ದು ಇವೆಲ್ಲವೂ ಕ್ಷೇತ್ರದ ಜನರ ಕಣ್ಣ ಮುಂದೆಯೇ ನಡೆದಿರುವುದಾಗಿದ್ದು ಯಾವುದೇ ಮುಚ್ಚು ಮರೆ ಇಲ್ಲದೇ ನಡೆಸಿಲ್ಲವಾಗಿದೆ ಎಂದರು.
ಇನ್ನು ತೌಕ್ತೆ ಚಂಡಮಾರುತದಿಂದ ಹಾನಿಯಾದ ಸಮುದ್ರ ತೀರದ ಎಲ್ಲಾ ಪ್ರದೇಶಕ್ಕೆ ಕೇವಲೇ ಗಂಟೆಯಲ್ಲಿ ಭೇಟಿ ನೀಡಿ ಎರಡು ದಿನದ ಬಳಿಕ ಕಂದಾಯ ಹಾಗೂ ಉಸ್ತುವಾರಿ ಸಚಿವರನ್ನು ಭಟ್ಕಳಕ್ಕೆ ಕರೆಯಿಸಿ ಸದ್ಯ ಮಾವಿನಕುರ್ವೇ ತಲಗೋಡ ಭಾಗದ ಸಮುದ್ರ ತಡೆಗೋಡೆ ಕಾಮಗಾರಿ ಆರಂಭಿಸಿದ್ದು ಮುಂದುವರೆಯುತ್ತಿದೆ ಎಂದು ತಿಳಿಸಿದರು.
ಮಾಜಿ ಶಾಸಕರು ಶಾಸಕ ಸುನೀಲ ನಾಯ್ಕ ಅವರ ಜನರೊಂದಿಗಿನ ಯಾವುದೇ ಕೆಲಸದ ಬಗ್ಗೆ ಮಾಹಿತಿ ಪಡೆದುಕೊಳ್ಳದೇ ಅವರದ್ದೇ ವೈಯಕ್ತಿಕ ಕೆಲಸದಲ್ಲಿದ್ದು ಮನಸ್ಸಿಗೆ ಬಂದಂಗೆ ಮಾಧ್ಯಮಕ್ಕೆ ಹೇಳಿಕೆ ನೀಡುವುದಲ್ಲ ರಾಜಕೀಯ ಬಿಟ್ಟು ಜನರಿಗೆ ಸಹಕಾರ ಮಾಡುವ ಕೆಲಸದತ್ತ ಗಮನ ನೀಡಿ ಜವಾಬ್ದಾರಿಯುತವಾಗಿರಿ ಎಂದರು.
ನಂತರ ಮಾಜಿ ಬಿಜೆಪಿ ಮಂಡಲಾಧ್ಯಕ್ಷ ರಾಜೇಶ ನಾಯ್ಕ ಮಾತನಾಡಿ ‘ಮಾಜಿ ಶಾಸಕರು ನನ್ನ ಶಾಸಕತ್ವದ ಅವಧಿಯಲ್ಲಿ ಎರಡೂ ಆಸ್ಪತ್ರೆಗಳಿಗೆ 4 ಅಂಬುಲೆನ್ಸ್‍ಗಳನ್ನು ನೀಡಿರುವ ಬಗ್ಗೆ ಹೇಳಿಕೆ ನೀಡಿದ್ದು ಅದು ಎಲ್ಲಿದೆ ಬದರ ಬಳಕೆ ಆಗಿದೆಯಾ ಅಥವಾ ಪತ್ರಿಕೆ ಹೇಳಿಕೆಗಷ್ಟೇ ಸೀಮಿತವಾಗಿದೆಯಾ? ಸದ್ಯ ತಾಲೂಕಾಸ್ಪತ್ರೆಯಲ್ಲಿರುವ ಅಂಬ್ಯುಲೆನ್ಸ 15 ವರ್ಷದ ಹಳೆಯ ಅಂಬ್ಯುಲೆನ್ಸ ಇದ್ದು ಇವೆಲ್ಲದರ ಬಗ್ಗೆ ಅವರೇ ಉತ್ತರಿಸಬೇಕು ಪ್ರಶ್ನೆ ಮಾಡಿದರು.
ಇನ್ನು ಪಿಪಿಇ ಕಿಟ್, ಔಷಧಿಗಳ ಕೊರತೆ ಇರುವ ಬಗ್ಗೆ ಜಿಲ್ಲಾಢಳಿತವಾಗಲಿ ತಾಲೂಕಾಡಳಿತ ಹೇಳಿಕೆ ನೀಡಿಲ್ಲವಾಗಿದ್ದು ಜೊತೆಗೆ ಕೊರತೆ ಇದೆ ಸಹಾಯ ಮಾಡಿ ಎಂದು ಸಹ ಎಲ್ಲಿಯೂ ಹೇಳಿದಿಲ್ಲವಾಗಿದೆ. ಆದರೆ ದೇಶಪಾಂಡೆ ಅವರಿಗೆ ವೈಯಕ್ತಿಕವಾಗಿ ನೀಡಬೇಕೆಂಬ ಇಚ್ಛೆಯಿಂದ ನೀಡಿದ್ದು ಅದು ಅಭಿನಂದನಾರ್ಹ ಅದಕ್ಕೆ ಮಾಜಿ ಶಾಸಕ ಮಂಕಾಳ ವೈದ್ಯ ಅವರು ಸರಕಾರ ವಿಫಲವಾಗಿದೆ, ಜನರನ್ನು ಸರಕಾರ ಕೈಬಿಟ್ಟಿದೆ, ಸೋತಿದ್ದಾರೆಂದು ಹೇಳುವುದು ಸರಿಯಲ್ಲ. ಇವೆಲ್ಲವನ್ನು ದೇಶಪಾಂಡೆ ಹಾಗೂ ಮಂಕಾಳ ಅವರು ಪ್ರಚಾರಕ್ಕೆ ಬಳಸಿಕೊಂಡಿದ್ದಾರೆಂಬುದು ಸಾಬೀತಾಗುತ್ತದೆ ಎಂದರು.
ಇನ್ನು ಶಿರಾಲಿಯಲ್ಲಿ ಕಂಟೈನ್‍ಮೆಂಟ್ ಝೋನನಲ್ಲಿ ಬಾರ ತೆರೆದಿರುವ ಬಗ್ಗೆ ಹೇಳಿಕೆ ನೀಡಿದ ಮಾಜಿ ಶಾಸಕರು ಜಿಲ್ಲಾಢಳಿತದ ಸೂಚನೆಯಂತೆ ಕಂಟೈನ್‍ಮೆಂಟ್ ಝೋನಗಳಲ್ಲಿ ಮೇ 24ರಂದು ಆದೇಶಿಸಲಾದ ಹಾಲು ಹಾಗೂ ಆಲ್ಕೋಹಾಲು ಅಂಗಡಿ ತೆರೆಯಲು ಅವಕಾಶ ನೀಡಿದ ಬಳಿಕವೇ ತೆರೆಯಲಾಗಿದ್ದು ಒಂದು ವೇಳೆ ಸೂಚನೆ ವಿರುದ್ಧ ಅಂಗಡಿ ತೆರೆದಿದ್ದರೆ ಅದರ ಬಗ್ಗೆ ಸಮರ್ಪಕ ಮಾಹಿತಿ, ಪೋಟೋಗಳಿಟ್ಟುಕೊಂಡು ಮಾತನಾಡುವುದು ಸೂಕ್ತ. ಅಷ್ಟಕ್ಕೂ ಅದನ್ನು ಶಾಸಕರ ಮಾಲೀಕತ್ವದಾಗಿಲ್ಲವಾಗಿದ್ದು ಕುಟುಂಬದವರು ವ್ಯವಹಾರವಾಗಿದೆ ಎಲ್ಲವನ್ನು ರಾಜಕೀಯವಾಗಿಯೇ ನೋಡುವ ಗುಣ ಮಾಜಿ ಶಾಸಕರದ್ದಾಗಿದೆ ಎಂದರು.
ಈ ಸಂಧರ್ಭದಲ್ಲಿ ಜಿಲ್ಲಾ ಬಿಜೆಪಿ ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಸಂತೋಷ ನಾಯ್ಕ, ತಾಲೂಕಾ ಬಿಜೆಪಿ ಮಂಡಲದ ಪ್ರಧಾನ ಕಾರ್ಯದರ್ಶಿ ತಾಲೂಕಾ ಯುವ ಮೋರ್ಚಾ ಅಧ್ಯಕ್ಷ ಮಹೇಂದ್ರ ನಾಯ್ಕ, ದಾಸ ನಾಯ್ಕ ತಲಗೋಡ ಮುಂತಾದವರು ಇದ್ದರು.
Leave a Comment