ಭಟ್ಕಳ: ಕೋವಿಡ್ ಹಿನ್ನೆಲೆ ಹುಟ್ಟುಹಬ್ಬ ಆಚರಣೆ ಮಾಡದಿರುವ ಬಗ್ಗೆ ಘೋಷಣೆ ಮುಂಚಿತವಾಗಿ ಘೋಷಣೆ ಮಾಡಿದ ಮಾಜಿ ಶಾಸಕ ಮಂಕಾಳ ವೈದ್ಯ ಶನಿವಾರದಂದು ಅವರ ತಮ್ಮ 49ನೇ ವರ್ಷದ ಹುಟ್ಟುಹಬ್ಬದ ದಿನದ ಪ್ರಯುಕ್ತ ಭಟ್ಕಳ ಹೊನ್ನಾವರ ಕ್ಷೇತ್ರದ ಜನರ ಅಭಿವೃದ್ಧಿಗಾಗಿ ಮಹತ್ವದ ಘೋಷಣೆ ಮಾಡಿದ್ದು, ಕ್ಷೇತ್ರದ ‘ಬಡ ಜನರ ಸಹಾಯಕ್ಕೆ ಹಾಗೂ ಮಠ, ಮಂದಿರಗಳ ಅಭಿವೃದ್ದಿಗಾಗಿ 19.50 ಲಕ್ಷ ಮೊತ್ತದ ಪಿಂಚಣಿ ಹಣ ನೀಡುವುದಾಗಿ ಮಾಧ್ಯಮ ಹೇಳಿಕೆ ಮೂಲಕ ತಿಳಿಸಿದ್ದಾರೆ.
ವಿಧಾನಸಭಾ ಚುನಾವಣೆಯಲ್ಲಿ ಸೋತಿದ್ದ ಮಂಕಾಳ ವೈದ್ಯರಿಗೆ ಸರಕಾರದಿಂದ ಪಿಂಚಣಿ ರೂಪದಲ್ಲಿ 45 ಸಾವಿರ ರೂ.ಗಳು ಬರುತ್ತಿದ್ದು ಸತತ ಮೂರು 3 ವರ್ಷದವರೆ 19.50 ಲಕ್ಷ ರೂ. ಜನರು ಸರಕಾರಕ್ಕೆ ಕಟ್ಟಿದ ತೆರಿಗೆ ಹಣವನ್ನು ನಾನು ಇನ್ನು ತನಕ ಪಡೆದಿಲ್ಲವಾಗಿದ್ದು ಈಗ ಇದರ ಪ್ರಯೋಜನ ಜನರಿಗೆ ಸಲ್ಲಬೇಕೆಂಬ ಉದ್ದೇಶದಿಂದ ಈ ಘೋಷಣೆ ಮಾಡಿದ್ದೇನೆ.
ಈ ಹಿಂದೆಯೂ ಸಹ 5 ವರ್ಷದ ಶಾಸಕತ್ವದ ಅವಧಿಯ ಗೌರವ ಧನವನ್ನು ಕ್ಷೇತ್ರದಲ್ಲಿನ ಶಾಲೆ, ದೇವಸ್ಥಾನ, ಬಡ ವಿದ್ಯಾರ್ಥಿಗಳಿಗೆ, ಬಡವರಿಗೆ, ಮಠ ಮಂದಿರಕ್ಕೆ ಈ ಹಿಂದೆ ನೀಡಲಾಗಿತ್ತು. ಅದರಂತೆ ಈಗ ಪಿಂಚಣಿ ಹಣ 45 ಸಾವಿರ ತಿಂಗಳಿಗೆ ವರ್ಷಕ್ಕೆ 6,40,000 ಸಾವಿರಕ್ಕೆ ಬರುತ್ತಿದ್ದು ಈಗ ಮೂರು ವರ್ಷಕ್ಕೆ 19.50 ಲಕ್ಷ ರೂ ಮೊತ್ತವಾಗಿದ್ದು ಇನ್ನು ತನಕ ಅದನ್ನು ಪಡೆದುಕೊಂಡಿಲ್ಲವಾಗಿದೆ. ಈಗ ಕ್ಷೇತ್ರದಲ್ಲಿನ ಬಡ ಜನರಿಗೆ, ಬಡ ವಿದ್ಯಾರ್ಥಿಗಳಿಗೆ, ದೇವಸ್ಥಾನಕ್ಕೆ, ಮಠ ಮಂದಿರಗಳಿಗೆ ನೀಡಿದ್ದಲ್ಲಿ ಅದು ಸದುಪಯೋಗವಾಗಲಿದೆ.
ಸರಕಾರದಲ್ಲಿಯೇ ಹಣ ಇಡಬೇಕೆಂದಿದ್ದರು ಸದ್ಯ ಸರಕಾರದಿಂದ ಲೂಟಿ ನಡೆಯುತ್ತಿದ್ದು, ಪತ್ರಿಕೆ ಟಿವಿಯಲ್ಲಿ ಈ ಬಗ್ಗೆ ಸುದ್ದಿ ಬರುತ್ತಿದೆ. ಕ್ಷೇತ್ರದ ಜನರು ನನ್ನನ್ನು ಶಾಸಕನನ್ನಾಗಿ ಮಾಡಿಲ್ಲದಿದ್ದರೆ ಅಷ್ಟು ಹಣ ಬರುತ್ತಿಲ್ಲವಾಗಿದ್ದು ಅದಕ್ಕೆ ಅವರಿಗೆ ಅದು ನೀಡುವುದು ಸೂಕ್ತ ಎಂದು ತೀರ್ಮಾನ ಕೈಗೊಂಡಿದ್ದೇನೆ. ಜೊತೆಗೆ ಈ ಹಣದಲ್ಲಿ ಕೋವಿಡ್ ನಿರ್ವಹಣೆಗೆ ಜನರ ಸಹಾಯಕ್ಕೂ ಬಳಕೆ ಮಾಡಿಕೊಳ್ಳಲಿದ್ದು ಕೋವಿಡ್ ಬಳಿಕವೂ ಜನರಿಗೆ ತಲುಪಿಸುವ ಕೆಲಸ ಮಾಡಲಿದ್ದೇನೆ.
ಕ್ಷೇತ್ರದಲ್ಲಿ ಸದ್ಯ ಕೋವಿಡನಿಂದ ಮನೆಯ ಪಾಲಕ ಪೋಷಕರು ಮೃತ ಪಟ್ಟಿದ್ದರೆ ಮಕ್ಕಳು ಅನಾಥರಾಗಿದ್ದರೆ ಅವರಿಗೆ ಪದವಿಯ ತನಕ ಉತ್ತಮ ಶಿಕ್ಷಣ ನೀಡಿ ಅವರನ್ನು ಮುಖ್ಯ ವಾಹಿನಿಗೆ ಬರುವಂತಹ ಕೆಲಸ ಮಾಡುತ್ತಿದ್ದೇನೆ. ಅದರಂತೆ ಮನೆಯಲ್ಲಿ ಕಲಿಯಲು ಅನೂಕೂಲ ಇಲ್ಲದಿದ್ದರೆ ಹಾಸ್ಟೆಲನಲ್ಲಿ ಇರಿಸಿ ವಿದ್ಯಾಭ್ಯಾಸ ಮಾಡಿಸುವ ಜವಾಬ್ದಾರಿ ಹೊತ್ತಿದ್ದೇನೆ. ಕ್ಷೇತ್ರದ ಜನರ ಋಣ ತೀರಿಸಲು ಎಂದಿಗೂ ಸಾಧ್ಯವಿಲ್ಲವಾಗಿದ್ದು ಮುಂದೆಯೂ ಇದು ಮುಂದುವರೆಸಿಕೊಂಡು ಹೋಗಲಿದ್ದೇನೆ ಎಂದರು.
Leave a Comment