ಭಟ್ಕಳ: ತಾಲೂಕಿನ ಹೆಬಳೆ ಗಾಂಧಿ ನಗರದ ವೃತ್ತಿಯಲ್ಲಿ ಕರಾಟೆ ಶಿಕ್ಷಕ ಲಾಕ್ ಡೌನ ಹಿನ್ನೆಲೆ ಮನೆಯಂಗಳದಲ್ಲಿ ತರಕಾರಿ ವ್ಯಾಪಾರಿ ಮಾಡುತ್ತಿದ್ದು ಇವರ ಮನೆಯ ಎದುರಿಗೆ ಬೀದಿ ಬದಿ ಮಾವಿನ ಹಣ್ಣು ವ್ಯಾಪಾರ ಮಾಡುವ ಮಹಿಳೆಯರು ಇಟ್ಟ ಬಾಕ್ಸ ಯಾರದೆಂಬುದು ವಿಚಾರಿಸದೇ ಭಟ್ಕಳ ಗ್ರಾಮೀಣ ಠಾಣೆ ಎಎಸೈ ಓರ್ವರು ಏಕಾಏಕಿ ಶಿಕ್ಷಕನ ಮೇಲೆ ಲಾಠಿಯಿಂದ ಥಳಿಸಿದ್ದ ಆರೋಪದ ಮೇರೆಗೆ ನಾವು ಏನು ತಪ್ಪು ಮಾಡದೇ ನಮ್ಮ ಮೇಲೆ ಶನಿವಾರದಂದು ಹಲ್ಲೆಗೆ ಮುಂದಾಗಿರುವ ಎಎಎಸೈ ಅವರ ಮೇಲೆ ಕ್ರಮಕ್ಕೆ ಮುಂದಾಗಬೇಕೆಂದು ಶಾಸಕ ಸುನೀಲ ನಾಯ್ಕ ಅವರನ್ನು ಭೇಟಿ ಮಾಡಿ ದೂರು ನೀಡಿ ಆದ ಅನ್ಯಾಯ ವ್ಯಕ್ತಪಡಿಸಿದ್ದಾರೆ.

ತಾಲೂಕಿನ ಹೆಬಳೆ ಗಾಂಧಿನಗರ ನಿವಾಸಿ ಹಾಗೂ ಹಲ್ಲೆಗೊಳಗಾದ ಕರಾಟೆ ಶಿಕ್ಷಕ ಉಮೇಶ ರಾಮಾ ಮೋಗೇರ ಎಂಬುವವರ ಮನೆಯ ಬಳಿ ಊರಿನಲ್ಲಿ ಬೀದಿ ಬದಿ ಹಾಗೂ ಮನೆಗೆ ಬುಟ್ಟಿಯಲ್ಲಿ ಮಾವಿನಹಣ್ಣು ವ್ಯಾಪಾರ ಮಾಡುವ ಮಹಿಳೆಯರು ವ್ಯಾಪಾರ ಮಾಡುತ್ತಾ ಬಂದಿದ್ದಾರೆ. ಎಂದಿನಂತೆ ಶನಿವಾರ ಭಟ್ಕಳದಲ್ಲಿ ಲಾಕ್ ಡೌನ ಇದ್ದ ಹಿನ್ನೆಲೆ ಮನೆಯ ಪಕ್ಕದಲ್ಲಿ ಶಿಕ್ಷಕ ಉಮೇಶ ಅವರು ತರಕಾರಿ ಅಂಗಡಿ ಮಾಡಿಕೊಂಡಿದ್ದು ಮೂರು ದಿನದ ಲಾಕ್ ಡೌನ ಹಿನ್ನೆಲೆ ಬಂದ್ ಮಾಡಿದ್ದರು. ಆದರೆ ಮಾವಿನಹಣ್ಣು ವ್ಯಾಪಾರ ಮಾಡುವ ಮಹಿಳೆಯರು 10-12 ಬುಟ್ಟಿನಲ್ಲಿ ಬಾಕ್ಸ ಇಟ್ಟು ತೆರಳಿದ್ದರು.
ಇದೇ ವೇಳೆ ಡ್ಯೂಟಿಗೆ ಬಂದ ಗ್ರಾಮೀಣ ಠಾಣಾ ಎಎಸೈ ಹಾಗೂ ಇಬ್ಬರು ಸಿಬ್ಬಂದಿಗಳು ಬಂದಿರುವುದನ್ನು ಕಂಡ ರಸ್ತೆಯಲ್ಲಿದ್ದ ಕೆಲ ಯುವಕರು ಶಿಕ್ಷಕನ ಮನೆಯ ಅಂಗಳಕ್ಕೆ ಓಡಿ ಬಂದಿದನ್ನೇ ಕಂಡ ಎಎಸೈ ಮಾವಿನಹಣ್ಣಿನ ಬಾಕ್ಸ ಯಾರದ್ದೆಂಬುದು ವಿಚಾರಿಸುತ್ತಾ ಏಕಾಏಕಿ ಕೈಯಲ್ಲಿದ್ದ ಲಾಠಿಯನ್ನು ಹಿಡಿದು ವ್ಯಾಪಾರಿ ಉಮೇಶ ಮೇಲೆ ತಳಿಸಿದ್ದಾರೆ. ತೀರಾ ಲಾಠಿಯ ನೋವಿನಿಂದ ಹೆದರಿ ಶಿಕ್ಷಕ ಉಮೇಶ ಮನೆಯೊಳಗೆ ಓಡಿದ್ದು ಮನೆಯೊಳಗಿನಿಂದ ಬಂದ ಆತನ ಮಡದಿ ಬೀಸಿದ ಲಾಠಿ ಹಿಡಿಯಲು ಹೋಗಿ ಆಕೆಯ ಕೈಗೂ ಸಹ ಬಲವಾದ ಪೆಟ್ಟು ಬಿದ್ದಿದ್ದು ನಮ್ಮ ಮೇಲೆ ಎಎಸೈ ಹಲ್ಲೆ ನಡೆಸಿ ದೈಹಿಕವಾಗಿ ಘಾಸಿ ಮಾಡಿದ್ದಾರೆಂದು ಶಾಸಕ ಸುನೀಲ ನಾಯ್ಕ ಸೋಮವಾರದಂದು ಭಟ್ಕಳ ಸರಕಾರಿ ಆಸ್ಪತ್ರೆಗೆ ಭೇಟಿಗೆ ಬಂದ ವೇಳೆ ದೂರು ನೀಡಿ ಎಎಸೈ ಅವರ ಮೇಲೆ ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದ್ದಾರೆ.
ಮೂರು ದಿನದ ಬಳಿಕ ಸರಕಾರಿ ಆಸ್ಪತ್ರೆಗೆ ವೈದ್ಯಕೀಯ ತಪಾಸಣೆಗೆ ಬಂದ ಶಿಕ್ಷಕ ಉಮೇಶ ಹಾಗೂ ಆತನ ಮಡದಿ ತೆರಳಿದ್ದು ಸದ್ಯ ಚಿಕಿತ್ಸೆ ಪಡೆದುಕೊಂಡಿದ್ದು ಎಎಸೈ ಮೇಲೆ ದೂರು ನೀಡುವುದಾಗಿ ಶಾಸಕರ ಬಳಿ ಹೇಳಿದ್ದಾರೆ ಎಂಬುದು ತಿಳಿದು ಬಂದಿದೆ.
ಉಮೇಶ ರಾಮಾ ಮೋಗೇರ- ಕರಾಟೆ ಶಿಕ್ಷಕ.‘ನಾನು ಓರ್ವ ಕರಾಟೆ ಶಿಕ್ಷಕನಾಗಿದ್ದು ಲಾಕ್ ಡೌನ ಹಿನ್ನೆಲೆ ಮನೆಯ ಪಕ್ಕದಲ್ಲಿ ತರಕಾರಿ ಅಂಗಡಿ ಹಾಕಿಕೊಂಡಿದ್ದೇನೆ. ಲಾಕಡೌನನಿಂದ ಕರಾಟೆ ತರಬೇತಿ ಇಲ್ಲದೇ ಜೀವನ ನಡೆಸುತ್ತಿದ್ದ ವೇಳೆ ಗ್ರಾಮೀಣ ಠಾಣೆ ಎಎಸೈ ಅವರು ತನಗೆ ಹಾಗೂ ನನ್ನ ಮಡದಿ ಮೇಲೆ ಲಾಠಿಯಿಂದ ಥಳಿಸಿದ್ದಾರೆ. ಈ ಹಿಂದಿನಿಂದಲೂ ನನಗೆ ಪೋಲೀಸರೆಂದರೆ ಹೆಮ್ಮೆಯಿದ್ದು ಇಂತಹ ಪೋಲೀಸರ ವರ್ತನೆಯಿಂದ ಉತ್ತಮ ಪೋಲೀಸರಿಗೂ ಕೆಟ್ಟ ಹೆಸರು ಬರಲಿದೆ. ಈ ಬಗ್ಗೆ ಶಾಸಕರು, ಪೋಲೀಸ ಮೇಲಾಧಿಕಾರಿಗಳು ಎಎಸೈ ಮೇಲೆ ಕ್ರಮಕ್ಕೆ ಮುಂದಾಗಬೇಕೆಂದು ಮನವಿ ಮಾಡಿದರು.
Leave a Comment