ನಾಗರಿಕ ವಿಮಾನ ಯಾನ ಸಚಿವಾಲಯ (ಎಂ.ಓ.ಸಿ.ಎ.) ಮತ್ತು ನಾಗರಿಕ ವಿಮಾನ ಯಾನ ಮಹಾ ನಿರ್ದೇಶನಾಲಯ (ಡಿಜಿಸಿಎ) ಭಾರತೀಯ ಸರ್ವೇಕ್ಷಣಾ ವಿಭಾಗ (ಎಸ್.ಓ.ಐ.)ಕ್ಕೆ ಮಾನವ ರಹಿತ ವಿಮಾನ ವ್ಯವಸ್ಥೆ (ಯು.ಎಸ್.ಎ.) ನಿಯಮ 2021ರಿಂದ ಷರತ್ತುಬದ್ಧ ವಿನಾಯಿತಿ ನೀಡಲಾಗಿದೆ. ಕೇಂದ್ರ ಸರ್ಕಾರದ ಯೋಜನೆ ಗ್ರಾಮಗಳ ಸಮೀಕ್ಷೆ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಸುಧಾರಿತ ತಂತ್ರಜ್ಞಾನದೊಂದಿಗೆ ನಕ್ಷೆ ತಯಾರಿಕೆ (ಸ್ವಾಮಿತ್ವ)ಯಡಿ ದೊಡ್ಡ ಪ್ರಮಾಣದಲ್ಲಿ ಗ್ರಾಮಗಳ ಜನವಸತಿ ಪ್ರದೇಶಗಳ ನಕ್ಷೆ ಮಾಡಲು ಡ್ರೋನ್ ನಿಯೋಜನೆ ಅನುಮತಿ ನೀಡಲಾಗಿದೆ. ಈ ವಿನಾಯಿತಿ ಅನುಮೋದನೆಯ ದಿನಾಂಕದಿಂದ ಒಂದು ವರ್ಷದ ಅವಧಿಗೆ ಅಥವಾ ಮುಂದಿನ ಆದೇಶದವರೆಗೆ ಯಾವುದು ಮೊದಲೋ ಅಲ್ಲಿಯವರೆಗೆ ಮಾನ್ಯವಾಗಿರುತ್ತದೆ ಮತ್ತು ಎಸ್.ಒ.ಪಿ (ಡಿಜಿಸಿಎ ಹೊರಡಿಸಿದ) ನಿಯಮಗಳು ಮತ್ತು ಷರತ್ತುಗಳಿಗೆ ಒಳಪಟ್ಟಿರುತ್ತದೆ.

ಸ್ವಾಮಿತ್ವ ಯೋಜನೆ ಗ್ರಾಮೀಣ ಭಾರತಕ್ಕೆ ಸಮಗ್ರ ಆಸ್ತಿ ಮೌಲ್ಯಮಾಪನ ಪರಿಹಾರವನ್ನು ಒದಗಿಸುವ ಗುರಿಯನ್ನು ಹೊಂದಿದೆ. ಆಬಾದಿ ಪ್ರದೇಶಗಳ (ಆಬಾದಿ ಪ್ರದೇಶದಲ್ಲಿ ಜನ ವಸತಿ ಭೂಮಿ, ಅಬಾದಿಗೆ ಸಮೀಪವಿರುವ ಜನವಸತಿ ಪ್ರದೇಶಗಳು ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ವಾಡಿಗಳು / ಬಾಸ್ತಿಗಳನ್ನು ಒಳಗೊಂಡಿರುತ್ತದೆ) ಗಡಿರೇಖೆಯನ್ನು ಡ್ರೋನ್ ಸಮೀಕ್ಷೆ ತಂತ್ರಜ್ಞಾನವನ್ನು ಬಳಸಿ, ಪಂಚಾಯತಿ ರಾಜ್ ಸಚಿವಾಲಯ, ರಾಜ್ಯ ಪಂಚಾಯತಿ ರಾಜ್ ಇಲಾಖೆ. ರಾಜ್ಯ ಕಂದಾಯ ಇಲಾಖೆಯ ಸಹಯೋಗದೊಂದಿಗೆ ಮಾಡಲಾಗುವುದು. ಭಾರತೀಯ ಸರ್ವೇಕ್ಷಣಾ ವಿಭಾಗ ಡ್ರೋನ್ ಬಳಸಲು ನೀಡಿರುವ ಈ ಅನುಮತಿಯು ಬೃಹತ್ ಪ್ರಮಾಣದ ನಕ್ಷೆ (ಎಲ್.ಎಸ್.ಎಂ.)ಗೆ ಅವಕಾಶ ನೀಡುತ್ತದೆ. ವೈಮಾನಿಕ ಪರಿವೀಕ್ಷಣೆ ಉನ್ನತ ಗುಣಮಟ್ಟದ ಮತ್ತು ನಿಖರವಾದ ನಕ್ಷೆ ತಯಾರಿಸಲಿದ್ದು, ಸ್ವತ್ತಿನ ಮಾಲೀಕತ್ವದ ಹಕ್ಕನ್ನು ದಯಪಾಲಿಸುತ್ತದೆ. ಈ ನಕ್ಷೆ ಅಥವಾ ದತ್ತಾಂಶದ ಆಧಾರದಲ್ಲಿ ಗ್ರಾಮೀಣ ಕುಟುಂಬಗಳಿಗೆ ಮಾಲೀಕತ್ವದ ಸ್ವತ್ತಿನ ಕಾರ್ಡ್ ನೀಡಲಾಗುವುದು.
ಡ್ರೋನ್ ಸಮೀಕ್ಷೆಯಡಿಯಲ್ಲಿ ರಚಿಸಲಾದ ಡಿಜಿಟಲ್ ಪ್ರಾದೇಶಿಕ ದತ್ತಾಂಶ/ ನಕ್ಷೆಗಳು ಗ್ರಾಮ ಪಂಚಾಯತಿ ಅಭಿವೃದ್ಧಿ ಯೋಜನೆ (ಜಿಪಿಡಿಪಿ) ತಯಾರಿಕೆಯನ್ನು ಬೆಂಬಲಿಸಲು ಪ್ರಾದೇಶಿಕ ವಿಶ್ಲೇಷಣಾತ್ಮಕ ಸಾಧನಗಳ ರಚನೆಗೆ ಅವಕಾಶ ನೀಡಲಾಗುವುದು. ಡ್ರೋನ್ಸ್ ಮೂಲಕ ಸೆರೆಹಿಡಿಯಲಾದ ಚಿತ್ರಗಳನ್ನು ಭಾರತೀಯ ಸರ್ವೇಕ್ಷಣಾ ವಿಭಾಗ ತನ್ನ ಭೌಗೋಳಿಕ ಮಾಹಿತಿ ವ್ಯವಸ್ಥೆ ಪ್ರಯೋಗಾಲಯದಲ್ಲಿ ಸಂಸ್ಕರಿಸುವುದು.
Leave a Comment