ಕಾಂಗ್ರೇಸ್ ಪಕ್ಷದ ಕೊರೋನಾ ಸೇವೆ ಲೋಕಸಭಾ ಚುನಾವಣೆಯ ಪೂರ್ವ ತಯಾರಿ ಎಂದು ಜಿಲ್ಲಾ ಬಿಜೆಪಿ ಮಾಧ್ಯಮ ವಕ್ತಾರ ನಾಗರಾಜ ನಾಯಕ ಗಂಭೀರ ಆರೋಪ ಮಾಡಿದ್ದಾರೆ.ಪಟ್ಟಣದ ಖಾಸಗಿ ಹೊಟೇಲನಲ್ಲಿ ಮಾಧ್ಯಮಗೊಷ್ಟಿಯಲ್ಲಿ ಮಾತನಾಡಿ ಕೇಂದ್ರ ರಾಜ್ಯ ಸರ್ಕಾರ ಕೊರೋನಾ ನಿಯಂತ್ರಣಕ್ಕೆ ಹಲವು ಕ್ರಮ ಕೈಗೊಂಡಿದೆ.

ಆದರೆ ಕಾಂಗ್ರೇಸ್ ಮೊದಲಿಗೆ ಕೊರೋನಾ ವಿರುದ್ದ ಇಲ್ಲಸಲ್ಲದೆ ಹೇಳಿಕೆ ನೀಡುತ್ತಾ ನಂತರ ಕೋವಿಡ್ ಸೇವೆ ಎಂದು ರಾಜಕಾರಣ ಮಾಡಲು ಹೊರಟಿದೆ.ಭಟ್ಕಳ-ಹೊನ್ನಾವರ ಕ್ಷೇತ್ರದ ಶಾಸಕ ಸುನೀಲನಾಯ್ಕ ಕಾಣೆಯಾಗಿದ್ದಾರೆ, ಅವರನ್ನುಹುಡುಕಿಕೊಡಿ ಎಂದು ಮಾಜಿ ಶಾಸಕಮಂಕಾಳ ವೈದ್ಯ ಹೇಳಿಕೆಗೆ ಪ್ರತಿಕ್ರಿಯಿಸಿ ಮಾಜಿ ಶಾಸಕರು ಎಲ್ಲಿ ಸೇವೆಯಲ್ಲಿತೊಡಗಿಕೊಂಡಿದ್ದಾರೆ ಎಂಬುದನ್ನು ತಿಳಿಯಲುಅವರಿಗೆ ಜಿಪಿಎಸ್ ಅಳವಡಿಸಬೇಕು ಎಂದು ವ್ಯಂಗ ಮಾಡಿದರು.
ಕೋವಿಡ್ಎರಡನೇ ಅಲೆಯ ಈ ಸಂದರ್ಭದಲ್ಲಿಶಾಸಕ ಸುನೀಲ ನಾಯ್ಕ ಶಾಸಕರ ಅನುದಾನದಲ್ಲಿ ೨,ವೈಯಕ್ತಿಕ ಧನಸಹಾಯದಲ್ಲಿ ೨ ಅಂಬುಲೆನ್ಸ್ಗಳನ್ನುಭಟ್ಕಳ ಹಾಗೂ ಹೊನ್ನಾವರಸರಕಾರಿ ಆಸ್ಪತ್ರೆಗೆನೀಡಿದ್ದಾರೆ. ತೌಕ್ತೆ ಚಂಡ ಮಾರುತದಸಂದರ್ಭದಲ್ಲಿ ಮನೆ ಹಾನಿಗೊಳಗಾದವರಿಗೆಪರಿಹಾರಕ್ಕೆ ಕಂದಾಯ ಸಚಿವರನ್ನು ಕ್ಷೇತ್ರಕ್ಕೆ ಕರೆತಂದು ಬೇಡಿಕೆ ಸಲ್ಲಿಸಿಪರಿಹಾರ ದೊರಕಿಸುವಲ್ಲಿ ಶ್ರಮಿಸಿದ್ದಾರೆ. ಪ್ರತಿ ಗ್ರಾಮಪಂಚಾಯಿತಿ ಮಟ್ಟದಲ್ಲಿ ಟಾಸ್ಕಪೊರ್ಸ ಸಮಿತಿ ರಚಿಸಿ ಸ್ಪಂದಿಸಿದ್ದಾರೆ. ಭಟ್ಕಳದಲ್ಲಿ ಆಕ್ಸಿಜನ್ ಘಟಕಆರಂಭಿಸಿದ್ದಾರೆ.
ಕೊರೋನಾ ರೋಗಿಗಳಸಂಪರ್ಕ ಇಟ್ಟುಕೊಂಡು ಆತ್ಮಸ್ಥೆರ್ಯತುಂಬಿದ್ದಾರೆ. ಭಟ್ಕಳದಲ್ಲಿ ಡಯಾಲಿಸಿಸ್ ಘಟಕಪುನರಾರಂಭಕ್ಕೆ ವೈಯ್ಯಕ್ತಿವಾಗಿ ಸಹಾಯಮಾಡಿದ್ದಾರೆ. ಹೀಗೆ ಶಾಸಕ ಸುನೀಲ ನಾಯ್ಕಕೊವಿಡ್ಸಂದರ್ಭದಲ್ಲಿ ಸಾಕಷ್ಟು ಕೆಲಸ ಮಾಡುತ್ತಿದ್ದು ಕೋವಿಡ್ ನಿಯಂತ್ರಣಕ್ಕಾಗಿ ಭಗೀರಥ ಪ್ರಯತ್ನ ನಡೆಸುತ್ತಿದ್ದಾರೆ. ಇಷ್ಡಾಗಿಯೂಮಾಜಿ ಶಾಸಕ ಮಂಕಾಳ ವೈದ್ಯಆರೋಪಿಸಿರುವುದು ಇವರ ರಾಜಕೀಯ ಅಸ್ಥಿತ್ವ ಉಳಿಸಿಕೊಳ್ಳುವಂತಹ ಹೇಳಿಕೆ ಇದನ್ನು ಖಂಡಿಸುತ್ತೇವೆ ಎಂದರು. ಕೋವಿಡ್ ಸಮಯದಲ್ಲಿ ಬಿಜೆಪಿ ಕಾರ್ಯಕರ್ತರೂ ಸೇವೆಯಲ್ಲಿತೊಡಗಿಕೊಂಡಿದ್ದಾರೆ.
ಬಿಜೆಪಿ ಹೊನ್ನಾವರ ಮಂಡಲದಕಾರ್ಯಕರ್ತರು ಅಧ್ಯಕ್ಷ ರಾಜೇಶಭಂಡಾರಿಯವರ ನೇತೃತ್ವದಲ್ಲಿ ಕೊರನಾಸಂದರ್ಭದಲ್ಲಿ ೪೭೭೪ ಜನರಿಗೆ ಇದುವರೆಗೂ ಊಟ ನೀಡಿದ್ದು,ಹೆದ್ದಾರಿಯಲ್ಲಿ ಹೋಗುವ ಲಾರಿ ಚಾಲಕರು,ಭಿಕ್ಷಕರು, ಕೊರೊನಾ ಸೇವೆಯಲ್ಲಿತೊಡಗಿಕೊಂಡಿರುವ ಪೋಲಿಸರು, ಸರ್ಕಾರಿ ಆಸ್ಪತ್ರೆಯ ಸಿಬ್ಬಂದಿಗಳು, ಇವರಲ್ಲದೇ ಮೂವರು ತೃತೀಯಲಿಂಗಿಗಳಿಗೆ ಊಟೋಪಚಾರ ನೀಡಿ ರಾಜ್ಯದಲ್ಲೇ ಮಾದರಿಕೆಲಸ ಮಾಡುತ್ತಿದ್ದಾರೆ.೨೭ ಜನರಿಗೆ ಅಂಬುಲೆನ್ಸ್ ಸೇವೆ, ೨೬, ಜನರಿಗೆ ಬೆಡ್ವ್ಯವಸ್ಥೆ ಕಲ್ಪಿಸಲಾಗಿದೆ. ೩೪ ಜನರಿಗೆ ಟೆಲಿ ಮೆಡಿಸಿನ್ಸೌಲಭ್ಯ, ೬ ಜನರ ಶವ ಸಂಸ್ಕಾರ, ೬ಜನರಿಗೆರಕ್ತದಾನ, ೫೩೫ ಜನರಿಗೆ ಮಾಸ್ಕ್, ೧೦೩ ಜನರಿಗೆ ಮೆಡಿಸಿನ್, ೯ಪಿಹೆಚ್‌ಸಿಗಳಿಗೆ ಭೇಟಿ ನೀಡಿ ೧೭೩ ಜನ ಆಶಾಕಾರ್ಯಕರ್ತೆಯರಿಗೆ ಮಾಸ್ಕ್ ಹಾಗೂ ಸೆನಿಟೈಜರ್ನೀಡುವ ಮೂಲಕ ಕೊರೋನಾ ಸೇವೆಯಲ್ಲಿತೊಡಗಿಕೊಂಡು ಮಾದರಿ ಕೆಲಸ ಮಾಡುತ್ತಿದ್ದಾರೆ.
ಕೊರೋನಾವನ್ನು ಚುನಾವಣೆಯ ಸರಕಾಗಿಬಳಸಿಕೊಳ್ಳುವ ಕಾಂಗ್ರೆಸ್‌ನವರ ಹುನ್ನಾರವಿಫಲವಾಗುತ್ತಿದ್ದು, ಎಲ್ಲರೂ ಒಗ್ಗಟ್ಟಾಗಿ ಕೊರೋನಾವಿರುದ್ದ ಹೋರಾಡಬೇಕಿತ್ತು. ಆದರೆಕಾಂಗ್ರೆಸ್‌ನವರು ಕೊರೋನಾದಲ್ಲೂ ರಾಜಕೀಯಮಾಡುತ್ತಿದ್ದಾರೆ. ಕಾಂಗ್ರೆಸ್ ದೇಶಕ್ಕೆ ಅಂಟಿದ”ಬ್ಲಾö್ಯಕ್ ಪಂಗಸ್”ಎಂದು ಆರೋಪಿಸಿದರು.ಪ್ರಧಾನಿ ಮೋದಿ ಸರ್ಕಾರ ದೀಪಾವಳಿಯವರೆಗೆ ಉಚಿತ ಪಡಿತರ ವಿತರಣೆ,೧೮ ವರ್ಷ ಮೇಲ್ಟವರಿಗೆ ಉಚಿತ ಲಸಿಕೆ ಘೋಷಣೆಮಾಡಿದ್ದಾರೆ. ಪ್ರಧಾನಿ ಮೊದಿಯವರ ಸ್ಥಾನದಲ್ಲಿಕಾಂಗ್ರೆಸ್ ನಾಯಕರಾದರೂ ಇದ್ದಿದ್ದರೆದೇಶದ ಪರಿಸ್ಥಿತಿ ಎಲ್ಲಿಗೆ ಹೊಗುತ್ತಿತ್ತು ಎಂದುಊಹಿಸಲು ಕಷ್ಟ ವಾಗುತ್ತದೆ.ಸಚಿವ ಶಿವರಾಹ ಹೆಬ್ಬಾರ ದಣಿವರಿಯದ ನಾಯಕ,ಜಿಲ್ಲೆಯಲ್ಲಿ ೨೯೦ಕ್ಕೂ ಹೆಚ್ಚು ವೈದ್ಯರು ಸೇವೆಯಲ್ಲಿತೊಡಗಿಕೊಂಡಿದ್ದಾರೆ. ಜಿಲ್ಲೆಯಲ್ಲಿ ವೈದ್ಯರಕೊರತೆ ಇಲ್ಲದಂತೆ ನೋಡಿಕೊಂಡಿದ್ದಾರೆ ಎಂದುಪ್ರಶಂಸಿದರು.ಒಂದೇ ವರ್ಷದವಧಿಯಲ್ಲಿ ಸಚಿವ ಶಿವರಾಮಹೆಬ್ಬಾರರು ಒಳ್ಳೆಯ ಕಾರ್ಯ ಮಾಡುತ್ತಿದ್ದು,೨೦ವರ್ಷ ಈ ಜಿಲ್ಲೆಯನ್ನು ಆಳಿ ಯಾವ ಸೇವೆಯನ್ನೂಕೊಡದ ನಾಯಕರಿಗೆ ಹೆಬ್ಬಾರರನ್ನುತೂಗಿನೋಡೋಣ ಎಂದರು.ಸಂಸದ ಅನಂತಕುಮಾರ ಹೆಗಡೆಯವರುಅನಾರೋಗ್ಯದ ಕಾರಣದಿಂದ ವೈದ್ಯರ ಸಲಹೆಯಂತೆವಿಶ್ರಾಂತಿಯಲ್ಲಿದ್ದಾರೆ.
ಆದರೂ ಮನೆಯಿಂದಲೇಜಿಲ್ಲಾಧಿಕಾರಿಗಳು, ಜಿಲ್ಲಾ ಆರೋಗ್ಯಾಧಿಕಾರಿಗಳು, ಜಿ.ಪಂ. ಮುಖ್ಯಕಾರ್ಯ ನಿರ್ವಹಣಾದಿಕಾರಿಯವರಸಂಪರ್ಕ ಇಟ್ಟುಕೊಂಡು ಕೆಲಸ ಮಾಡುತ್ತಿದ್ದಾರೆಎಂದರು. ಯಾರನ್ನೋ ಎಂಪಿ ಮಾಡುವ ಧಾವಂತಕಾಂಗ್ರೆಸ್ಸಿಗರಿಗಿದೆ ಬೇರಡೆಯಿಂದ ಆಗಮಿಸಿ ಪತ್ರಿಕಾ ಹೇಳಿಕೆಕೊಟ್ಟುಹೋದರೆ ಸೇವೆ ಆಗುವುದಿಲ್ಲ. ಎಂದು ಇತ್ತಿಚೀಗೆ ಆಗಮಿಸಿದ ಯುವಕಾಂಗ್ರೆಸ್ ರಾಷ್ಟಿçಯ ಅಧ್ಯಕ್ಷ ಬಿ. ಶ್ರೀನಿವಾಸಅವರಿಗೆ ಪರೋಕ್ಷವಾಗಿ ತಿರುಗೇಟು ನೀಡಿದರು. ಈ ಸಂದರ್ಭದಲ್ಲಿ ಬಿಜೆಪಿ ಹೊನ್ನಾವರ ಮಂಡಲದ ಅಧ್ಯಕ್ಷರಾಜೇಶ ಭಂಡಾರಿ,ಹೊನ್ನಾವರ ಉಸ್ತುವಾರಿ ಶಿವಾನಿಶಾಂತಾರಾಮ,ಮುಖಂಡರಾದ ಎಂ.ಜಿ. ನಾಯ್ಕ,ಮಂಜುನಾಥ ನಾಯ್ಕ ಗೇರುಸೊಪ್ಪಾ ಸುಬ್ರಾಯನಾಯ್ಕ, ಎಂ.ಎಸ್. ಹೆಗಡೆ ಕಣ್ಣಿಮನೆ, ಗಣಪತಿ ನಾಯ್ಕ ಬಿಟಿ, ಪ್ರಮೊದ ನಾಯ್ಕ, ಗಣಪತಿ ಗೌಡ ಚಿತ್ತಾರ,ಹನುಮಂತ ತಾಂಡೇಲ, ಗಣೇಶ ಹಳ್ಳೇರ, ಸುರೇಶ ಹರಿಕಂತ್ರ, ವಿನಾಯಕ ನಾಯ್ಕ ಮೂಡ್ಕಣಿ, ಶ್ರೀಧರ ನಾಯ್ಕ ಮಂಕಿಮತ್ತಿತರರು ಉಪಸ್ಥಿತರಿದ್ದರು.
Leave a Comment