ಭಟ್ಕಳ:ತಾಲ್ಲೂಕಿನ ಬಂದರ ರೋಡ 1ನೇ ಕ್ರಾಸ ಸಮೀಪಅಕ್ರಮವಾಗಿ ಹಿಂಸಾತ್ಮಕವಾಗಿ ಜಾನುವಾರುಗಳನ್ನು ಸಾಗಿಸುತ್ತಿದ್ದ ವಾಹನವೊಂದನ್ನು ಭಟ್ಕಳ ನಗರ ಠಾಣೆಯ ಪೊಲೀಸರು ಶನಿವಾರ ವಶಕ್ಕೆ ಪಡೆದು ಇಬ್ಬರನ್ನು ಬಂಧಿಸಿರುವ ಘಟನೆ ನಡೆದಿದೆ.
ಬಂಧಿತ ಆರೋಪಿಳು ಸೈಯದ್ ಅದ್ನಾನ್ ಮತ್ತು ಹುಸೇನ್ ದಸ್ತಗಿರಿ ಎಂದು ತಿಳಿದು ಬಂದಿದೆ.
ಇವರು ಟಾಟಾ ಡೆಕೊ ವಾಹನದಲ್ಲಿ ವದೆ ಮಾಡುವ ಉದ್ದೇಶದಿಂದ 40 ಸಾವಿರ ಮೌಲ್ಯದ ಎರಡು ಕೋಣಗಳನ್ನು ಪಾಸ್ ಪರವಾನಿಗೆ ಇಲ್ಲದೆ ಹಿಂಸಾತ್ಮಕ ರೀತಿಯಲ್ಲಿ ಕಟ್ಟಿ ಸಾಗಾಟ ಮಾಡಿಕೊಂಡು ಹೋಗುತ್ತಿರುವಾಗ ಬಂದರ ರೋಡ 1ನೇ ಕ್ರಾಸ ಸಮೀಪ ಪೊಲೀರು ದಾಳಿ ಮಾಡಿ ವಾಹನ ಸಮೇತ ಇಬ್ಬರು ಆರೋಪಿಗಳನ್ನು ಬಂಧಿಸಿದ್ದಾರೆ
ಈ ಕುರಿತು ಭಟ್ಕಳ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ
Leave a Comment