• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಭಾರತಕ್ಕೆ ಆಮ್ಲಜನಕ ಯೋಜನೆ (ಪ್ರಾಜೆಕ್ಟ್‌ ಓ2)

June 13, 2021 by Sachin Hegde Leave a Comment

ಕೋವಿಡ್-19 ಎರಡನೇ ಅಲೆಯ ಸಂದರ್ಭದಲ್ಲಿ ದೇಶದ ವಿವಿಧ ಭಾಗಗಳಲ್ಲಿ ವೈದ್ಯಕೀಯ ಆಮ್ಲಜನಕಕ್ಕಾಗಿ ಭಾರಿ ಬೇಡಿಕೆ ಕಂಡು ಬಂದಿತು. ಪ್ರಸ್ತುತ ಬೇಡಿಕೆಯನ್ನು ಪೂರೈಸುವ ಜೊತೆಗೆ, ಭವಿಷ್ಯದಲ್ಲಿ ನಮಗೆ ಸಮರ್ಪಕ ಪೂರೈಕೆಯನ್ನು ಖಾತರಿಪಡಿಸಿಕೊಳ್ಳುವ ಸಲುವಾಗಿ ವೈದ್ಯಕೀಯ ಆಮ್ಲಜನಕದ ಉತ್ಪಾದನೆ ಸಹ ಮುಖ್ಯವಾಗಿದೆ. ಭಾರತ ಸರಕಾರದ ಪ್ರಧಾನ ವೈಜ್ಞಾನಿಕ ಸಲಹೆಗಾರರ ಕಚೇರಿಯ ʻಭಾರತಕ್ಕೆ ಆಮ್ಲಜನಕ ಯೋಜನೆʼಯು (‘ಪ್ರಾಜೆಕ್ಟ್ ಓ2 ಫಾರ್ ಇಂಡಿಯಾ) ಹೆಚ್ಚಿದ ವೈದ್ಯಕೀಯ ಆಮ್ಲಜನಕದ ಬೇಡಿಕೆಯನ್ನು ಪೂರೈಸುವ ನಿಟ್ಟಿನಲ್ಲಿ ದೇಶದ ಸಾಮರ್ಥ್ಯವನ್ನು ಹೆಚ್ಚಿಸಲು ವಿವಿಧ ಪಾಲುದಾರರಿಗೆ ಅನುವು ಮಾಡಿಕೊಡುತ್ತದೆ.


ʻಭಾರತಕ್ಕೆ ಆಮ್ಲಜನಕ ಯೋಜನೆʼ ಅಡಿಯಲ್ಲಿ, ʻರಾಷ್ಟ್ರೀಯ ಆಮ್ಲಜನಕ ಒಕ್ಕೂಟʼವನ್ನು ರಚಿಸಲಾಗಿದ್ದು, ಇದು ಜಿಯೋಲೈಟ್‌ಗಳಂತಹ ಮುಖ್ಯವಾದ ಕಚ್ಚಾ ಪದಾರ್ಥಗಳ ಪೂರೈಕೆ; ಸಣ್ಣ ಆಮ್ಲಜನಕ ಸ್ಥಾವರಗಳ ಸ್ಥಾಪನೆ; ಆಮ್ಲಜನಕ
ಸಾಂದ್ರಕಗಳು, ಆಮ್ಲಜನಕ ಘಟಕಗಳು, ವೆಂಟಿಲೇಟರ್‌ಗಳಂತಹ ಅಂತಿಮ ಉತ್ಪನ್ನಗಳ ಸ್ಥಾಪನೆಯಲ್ಲಿ ತೊಡಗಿದೆ. ಕೇವಲ ತಕ್ಷಣಕ್ಕೆ ಅಲ್ಪಾವಧಿಯ ಪರಿಹಾರವನ್ನು ಒದಗಿಸುವುದು ಮಾತ್ರವಲ್ಲದೆ, ದೀರ್ಘಕಾಲೀನ ಸನ್ನದ್ಧತೆಗಾಗಿ ಉತ್ಪಾದನಾ ಪರಿಸರ ವ್ಯವಸ್ಥೆಯನ್ನು ಬಲಪಡಿಸಲು ಆಮ್ಲಜನಕ ಒಕ್ಕೂಟವು ಕೆಲಸ ಮಾಡುತ್ತಿದೆ.

ತಜ್ಞರ ಸಮಿತಿಯು ಭಾರತ ಮೂಲದ ತಯಾರಕರು, ನವೋದ್ಯಮಗಳು ಮತ್ತು ʻಎಂಎಸ್‌ಎಂಇʼಗಳು ಉತ್ಪಾದಿಸುವ (ಎಫ್‌ಐಸಿಸಿಐ, ಎಂಇಎಸ್ಎ ಇತ್ಯಾದಿಗಳ ಸಹಭಾಗಿತ್ವದಲ್ಲಿ) ಆಕ್ಸಿಜನ್ ಘಟಕಗಳು, ಸಾಂದ್ರಕಗಳು ಮತ್ತು ವೆಂಟಿಲೇಟರ್‌ಗಳಂತಹ ನಿರ್ಣಾಯಕ ಉಪಕರಣಗಳನ್ನು ಮೌಲ್ಯಮಾಪನ ಮಾಡುತ್ತಿದೆ. ಉತ್ಪಾದನಾ ಮತ್ತು ಪೂರೈಕೆ ಒಕ್ಕೂಟವು ಭಾರತ್ ಎಲೆಕ್ಟ್ರಾನಿಕ್ಸ್ ಲಿಮಿಟೆಡ್ (ಬಿಇಎಲ್); ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್‌(ಟಿಸಿಇ); ಬೆಂಗಳೂರಿನ ಸಿ-ಕ್ಯಾಂಪ್; ಐಐಟಿ ಕಾನ್ಪುರ (ಐಐಟಿ-ಕೆ); ಐಐಟಿ ದೆಹಲಿ (ಐಐಟಿ-ಡಿ); ಐಐಟಿ ಬಾಂಬೆ (ಐಐಟಿ-ಬಿ), ಐಐಟಿ ಹೈದರಾಬಾದ್ (ಐಐಟಿ-ಎಚ್); ಐಐಎಸ್ಇಆರ್-ಭೋಪಾಲ್; ಪುಣೆಯ ವೆಂಚರ್‌ ಸೆಂಟರ್; ಹಾಗೂ 40ಕ್ಕೂ ಹೆಚ್ಚು ʻಎಂಎಸ್ಎಂಇʼಗಳನ್ನು ಒಳಗೊಂಡಿದೆ.


ಒಕ್ಕೂಟವು ʻಯುಎಸ್ಎಐಡಿʼ ಎಡ್ವರ್ಡ್ಸ್ ಲೈಫ್ ಸೈನ್ಸಸ್ ಫೌಂಡೇಶನ್, ಕ್ಲೈಮೇಟ್ ವರ್ಕ್ಸ್ ಫೌಂಡೇಶನ್ ಮುಂತಾದ ಸಂಸ್ಥೆಗಳಿಂದ ಸಿಎಸ್ಆರ್/ ಜನೋಪಕಾರಿ ಅನುದಾನವನ್ನು ಪಡೆಯಲು ಪ್ರಾರಂಭಿಸಿದೆ. ಹೋಪ್ ಫೌಂಡೇಶನ್, ಅಮೇರಿಕನ್ ಇಂಡಿಯನ್ ಫೌಂಡೇಶನ್, ವಾಲ್ ಮಾರ್ಟ್, ಹಿಟಾಚಿ, ಬಿಎನ್‌ಪಿ ಪರಿಬಾಸ್ ಮತ್ತು ಇನ್ಫೋಚಿಪ್ಸ್‌ ಸಂಸ್ಥೆಗಳು ಒಕ್ಕೂಟದ ಕಾರ್ಯಕ್ಕೆ ನೆರವು ನೀಡುವ ನಿಟ್ಟಿನಲ್ಲಿ ತಮ್ಮ ಸಿಎಸ್ಆರ್ ಪ್ರಯತ್ನಗಳ ಭಾಗವಾಗಿ ಆಮ್ಲಜನಕ ಸಾಂದ್ರಕಗಳು ಮತ್ತು ವಿಪಿಎಸ್ಎ/ಪಿಎಸ್ಎ ಘಟಕಗಳನ್ನು ಸಂಗ್ರಹಿಸುತ್ತಿವೆ. ಒಕ್ಕೂಟದಲ್ಲಿರುವ ತಯಾರಕರಿಗೆ ಜಿಯೋಲೈಟ್ ನಂತಹ ಕಚ್ಚಾ ವಸ್ತುಗಳ ಖರೀದಿಗೆ ಹಣ ನೀಡಲು ‘ಎನ್‌ಎಂಡಿಸಿ ಲಿಮಿಟೆಡ್’ ಒಪ್ಪಿಕೊಂಡಿದೆ.

ಈ ಯೋಜನೆಯ ಬಗ್ಗೆ ಪ್ರಶ್ನೆಗಳಿಗೆ [email protected] ಗೆ ಬರೆಯಿರಿ.
ವಿವಿಧ ಕೋವಿಡ್-19 ಯೋಜನೆಗಳ ಬಗ್ಗೆ ಹೆಚ್ಚಿನ ವಿವರಗಳಿಗಾಗಿ ಭೇಟಿ
 ನೀಡಿ: https://www.psa.gov.in/innovation-science-bharat

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: National News Tagged With: industry-engagement, psa.gov.in/innovation-science-bharat, science-bharat, ಆಕ್ಸಿಜನ್ ಘಟಕಗಳು, ಐಐಟಿ ಕಾನ್ಪುರ, ಕಚ್ಚಾ ಪದಾರ್ಥಗಳ ಪೂರೈಕೆ, ಜಿಯೋಲೈಟ್‌ಗಳಂತಹ ಮುಖ್ಯವಾದ, ಟಾಟಾ ಕನ್ಸಲ್ಟಿಂಗ್ ಎಂಜಿನಿಯರ್ಸ್‌(ಟಿಸಿಇ), ಬೆಂಗಳೂರಿನ ಸಿ-ಕ್ಯಾಂಪ್, ಭಾರತ ಸರಕಾರದ ಪ್ರಧಾನ, ರಾಷ್ಟ್ರೀಯ ಆಮ್ಲಜನಕ ಒಕ್ಕೂಟ, ವೆಂಟಿಲೇಟರ್‌ಗಳಂತಹ ನಿರ್ಣಾಯಕ, ವೈದ್ಯಕೀಯ ಆಮ್ಲಜನಕದ ಉತ್ಪಾದನೆ, ಸಾಂದ್ರಕಗಳು

Explore More:

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,203 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar