• Skip to main content
  • Skip to secondary menu
  • Skip to primary sidebar
  • Skip to footer

Canara Buzz

Daily Updated Canara News

  • ಉತ್ತರಕನ್ನಡ ಜಿಲ್ಲೆ
    • ಹೊನ್ನಾವರ
    • ಕುಮಟಾ
    • ಹಳಿಯಾಳ
    • ಅಂಕೋಲಾ
    • ಭಟ್ಕಳ
    • ಕಾರವಾರ
    • ಯಲ್ಲಾಪುರ
    • ಶಿರಸಿ
    • ಸಿದ್ದಾಪುರ
    • ಮುಂಡಗೋಡ
    • ಜೋಯಿಡಾ
    • ದಾಂಡೇಲಿ
  • ರಾಜ್ಯ
    • ರಾಷ್ಟ್ರೀಯ
      • ಅಂತರರಾಷ್ಟ್ರೀಯ
      • Entertainment
        • Kannada Movies
        • Hindi Movies
        • Telugu Movies
        • Movies
    • ವಾಣಿಜ್ಯ
    • ಭಾಷಣ
    • ಟೆಕ್ನಾಲಜಿ
    • ಪ್ರವಾಸ
    • ಸಿನೆಮಾ
    • ಕ್ರೀಡೆ
    • ಕೃಷಿ
    • ಪಶುವೈದ್ಯಕೀಯ
  • ಉದ್ಯೋಗ
    • Bank job
    • sslc | puc | iti jobs
    • Government jobs
  • ಅಪರಾಧ
  • ಮಾಹಿತಿ
    • ಸೇವೆ
    • ಸಾಧನೆ
  • scholarship
    • Government scholarship
    • Private Scholarship
  • karnataka jobs
  • Central government job
    • English
      • Scholarship
      • Business
      • Job opportunity
      • Job Alert hindi
        • सरकारी नौकरी
      • gadgets
      • APPLY LINK
      • Notification

ಸಂಪೂರ್ಣ ಹದಗೆಟ್ಟು ಸಂಚರಿಸಲಾಗದ ರಸ್ತೆ ದಾಟಲು ಬೇಕಿದೆ ದೋಣಿ ವ್ಯವಸ್ಥೆ”ಹಿಗೊಂದು ವಿಶೇಷ ಆಗ್ರಹದ ಮೂಲಕ‌‌ ರಸ್ತೆ ಸರಿಪಡಿಸುವಂತೆ ಸ್ಥಳೀಯರಿಂದ ಆಗ್ರಹ’

June 20, 2021 by bkl news Leave a Comment

ಭಟ್ಕಳ: ಸದ್ಯ ಒಂದೇ ಸಮನೆ ಸುರಿಯುತ್ತಿರುವ ಮಳೆಯಿಂದಾಗಿ ತಾಲೂಕಿನ ಬೆಂಗ್ರೆ ಪಂಚಾಯತ ವ್ಯಾಪ್ತಿಯ ಮಾವಿನಕಟ್ಟೆ- ಸಣಬಾವಿ ಮಾರ್ಗವಾಗಿ ಸಂಚರಿಸುವ ರಸ್ತೆಯೂ ಹೊಂಡದಿಂದ ಕೂಡಿದ್ದು, ಸಂಚಾರ ಅಸಾಧ್ಯ ಎನ್ನುವಷ್ಟರ ಮಟ್ಟಿಗೆ ನೀರು ನಿಂತಿದ್ದ ಹಿನ್ನೆಲೆ ಜನಪ್ರತಿನಿಧಿಗಳಿಗೆ ಪರಿಸ್ಥಿತಿ ತಿಳಿಯಪಡಿಸಲು ಸ್ಥಳೀಯ ಯುವಕನೋರ್ವ ರಸ್ತೆ ದಾಟಲು ದೋಣಿಯ ವ್ಯವಸ್ಥೆ ಕಲ್ಪಿಸುವಂತೆ ವಿಶೇಷ ರೀತಿಯಲ್ಲಿ ಆಗ್ರಹಿಸಿದ್ದಾರೆ.‌

FB IMG 1624035722421

ಮಳೆಗಾಲಕ್ಕೂ ಪೂರ್ವದಲ್ಲಿ ತಾಲೂಕಿನಾದ್ಯಂತ ನಿರ್ಮಾಣಗೊಂಡ ಬಹುತೇಕ ರಸ್ತೆಗಳಲ್ಲಿ ಯಾವೆಲ್ಲವೂ ಕಳಪೆಯಾಗಿದ್ದು ಅವೆಲ್ಲವುದರ ಡಾಂಬರು ಕಿತ್ತು ಹೋಗಿ ರಸ್ತೆಯ ಮಧ್ಯೆ ಹೊಂಡ ನಿರ್ಮಾಣಗೊಂಡಿರುವುದು ಪ್ರತಿ ವರ್ಷದಂತೆ ಹರಕೆಯಂತಾಗಿದೆ. ಇದಕ್ಕೆ ಸೂಕ್ತ ಬೆಂಗ್ರೆ ಪಂಚಾಯತನ ಮಾವಿನಕಟ್ಟೆ ಸಣಬಾವಿ ರಸ್ತೆ ಮಾರ್ಗವಾಗಿದೆ.
ಈ ರಸ್ತೆಗೆ ಸಾಕಷ್ಟು ಹಿನ್ನೆಲೆಗಳಿವೆ. ಇಲ್ಲಿ ಪ್ರತಿ 2 ವರ್ಷಕ್ಕೊಮ್ಮೆ ಶಕ್ತಿ ಸ್ತಳವಾದ ಅಳ್ವೇಕೋಡಿ ಶ್ರೀ ದುರ್ಗಾಪರಮೇಶ್ವರಿ ದೇವಸ್ಥಾನದ ಪ್ರಸಿದ್ಧ ಮಾರಿಕಾಂಬಾ ಜಾತ್ರೆಯ ಮೂರ್ತಿ ವಿಸರ್ಜನೆಯ ವೇಳೆ ಅದ್ದೂರಿ ಮೆರವಣಿಗೆ ಇದೇ ರಸ್ತೆ ಮಾರ್ಗದಲ್ಲಿ ನಡೆಯುತ್ತಾ ಬಂದಿದೆ. ಆದರೆ ಯಾವತ್ತು ದೇವಸ್ಥಾನ ಆಡಳಿತ ಮಂಡಳಿ ಅವರೇ ತಮ್ಮ ಖರ್ಚಿನಲ್ಲಿ ಇಲ್ಲಿ ಮೆರವಣಿಗೆಗೆ ತಾವೇ ತಾತ್ಕಾಲಿಕ ರಸ್ತೆ ಸರಿ ಮಾಡಿಕೊಳ್ಳುತ್ತಾ ಬಂದಿದ್ದಾರೆ ಹೊರತಾಗಿ ಪ್ರತಿ ವರ್ಷ ಈ ರಸ್ತೆಯ ಸ್ಥಿತಿ ಹೀಗೆ ಇರಲಿದ್ದು ದುರಸ್ತಿಯ ಬಗ್ಗೆ ಇಲ್ಲಿನ ತನಕ ಓರ್ವ ಜನಪ್ರತಿನಿಧಿ ಮುಂದಾಗಿಲ್ಲವಾಗಿದೆ.

ಇಲ್ಲಿ ರಸ್ತೆ ಕಾಣದೇ ಅದೆಷ್ಟೋ ವರ್ಷವನ್ನು ಕಳೆದಿರುವ ಇಲ್ಲಿನ ಸ್ಥಳೀಯರಿಗೆ ಮಳೆಗಾಲ ಬಂತೆಂದರೆ ರಸ್ತೆಯ ಹೊಂಡದಲ್ಲಿ ನಿಲ್ಲುವ ನೀರು ಈಜುಕೊಳದಂತಾಗಲಿದ್ದು ದಿನವಿಡಿ ಮಳೆ ಸುರಿದರೆ ಈ ರಸ್ತೆ ದಾಟುವುದು ಬಹುಕಷ್ಟಸಾಧ್ಯವಾಗಿದೆ.

2 ವರ್ಷದ ಹಿಂದೆ ಈ ರಸ್ತೆಯ ದುರಸ್ಥಿ ಕಾಮಗಾರಿ ಕೂಡಾ ಆಗಿದ್ದು, ಈ ಕಾಮಗಾರಿ ಇದೆ ಪಕ್ಕದ ಊರಿನ ಗುತ್ತಿಗೆದಾರರೇ ಮಾಡಿದ್ದು ನಿತ್ಯವೂ ಇದೇ ರಸ್ತೆಯಲ್ಲಿ ತಿರುಗಾಡಿದರು ಸಹ ಅವರಿಗೆ ರಸ್ತೆಯ ಪರಿಸ್ಥಿತಿ ಕಾಣಿಸುತ್ತಿಲ್ಲದಿರುವುದು ವಿಪರ್ಯಾಸ ಎನ್ನುವ ಮಾತು ಇಲ್ಲಿನ ಸ್ಥಳೀಯರದ್ದಾಗಿದೆ.

ರಸ್ತೆ ಕಾಮಗಾರಿಯ ಗುತ್ತಿಗೆ‌ ಪಡೆದ ಕಂಪನಿಯ ಕೆಲಸದ ಬಗ್ಗೆ ಹೇಳೋದೇ ಬೇಡವಾಗಿದೆ ಯಾಕೆಂದರೆ ಈಗಾಗಲೇ ಮಾಡಲಾಗಿರುವ ಸಾಕಷ್ಟು ರಸ್ತೆ ಕಾಮಗಾರಿಗಳ ಸದ್ಯದ ಪರಿಸ್ಥಿತಿಯೇ ಎಲ್ಲವನ್ನು ಹೇಳಲಿದೆ.‌ ಇದರಲ್ಲಿ ಭಟ್ಕಳದ ಸಾಗರ ರಸ್ತೆ – ಸಂಶುದ್ದೀನ ಸರ್ಕಲ್, ಭಟ್ಕಳ- ಬಂದರ್ ರಸ್ತೆ, ಮುರುಡೇಶ್ವರ ದೇವಸ್ಥಾನಕ್ಕೆ ತೆರಳುವ ರಸ್ತೆಯಾಗಿದೆ ಎನ್ನುತ್ತಾರೆ ಸ್ಥಳೀಯರು. ಇನ್ನು ಸಣಬಾವಿ- ಮಾವಿನಕಟ್ಟೆ ಸಂಪರ್ಕ ರಸ್ತೆಯ ದುರಸ್ಥಿ ಕಾರ್ಯ ಮಾಡಿದ 2 ತಿಂಗಳಲ್ಲೇ ಡಾಂಬರು ಕಿತ್ತು ಹೋಗಿ ದೊಡ್ಡ ದೊಡ್ಡ ಹೊಂಡ ಆಗಿರುವುದು ಮಾತ್ರ ಸ್ಥಳೀಯರ ದುರ್ಬಾಗ್ಯವಾಗಿದೆ.

ಇನ್ನು ಈ ಭಾಗದಲ್ಲಿ ಅಂದಾಜು 200 ಕ್ಕೂ ಅಧಿಕ‌ ಮನೆಗಳಿವೆ. ಜನ ಸಂಚಾರ ನಿತ್ಯವೂ ಇದೆ. ಆದರೆ ರಸ್ತೆಯ ಪರಿಸ್ಥಿತಿ ಸುಧಾರಿಸಿಲ್ಲ. ಈ ರಸ್ತೆಯ ಹೊಂಡಲ್ಲಿ ಅದೆಷ್ಟು ಬೈಕ್ ಸವಾರರು ಬಿದ್ದಿದ್ದಾರೋ ಲೆಕ್ಕವೇ ಇಲ್ಲ. ಮಳೆಗಾಲದಲ್ಲಿ ಈ ರಸ್ತೆಯಲ್ಲಿ ನಡೆದುಕೊಂಡು ಹೋಗಲು ಕೂಡಾ ಅಸಾಧ್ಯವಾಗಿದ್ದು, ಮಹಿಳೆಯರು ಮಕ್ಕಳು ವ್ರದ್ಧರ ಸ್ಥಿತಿ ಇನ್ನು ಕಷ್ಟಕರ.

ಪಂಚಾಯತನಿಂದ ದೋಣಿ ವ್ಯವಸ್ಥೆಗೆ ಮನವಿ:

ಸದ್ಯ ಮಳೆಗಾಲದ ನಿಮಿತ್ತ ವಾಹನ ಸಂಚಾರ ನಿಲ್ಲಿಸಿ ಜನರು ಓಡಾಡಲು ಸಣಬಾವಿಯಿಂದ ಮಾವಿನಕಟ್ಟೆಗೆ ಹೋಗುವ ರಸ್ತೆ ಮಧ್ಯೆಯ ಉಲ್ಮನ್ ಮಜಿರೆಯ ಹತ್ತಿರ ರಸ್ತೆ ದಾಟಲು
ರಸ್ತೆಯ ಕಾಮಗಾರಿ ಸರಿಯಾಗಿ ಆಗುವ ತನಕ ಇಲ್ಲಿಯ ಬೆಂಗ್ರೆ ಗ್ರಾಮ ಪಂಚಾಯತ್ ಅವರು ದಯವಿಟ್ಟು ಊರಿನವರ ಅನುಕೂಲಕ್ಕೆ ಒಂದು ದೋಣಿ ವ್ಯವಸ್ಥೆ ಕಲ್ಪಿಸಬೇಕಾಗಿ ವಿನಂತಿ ಎಂದು ಸ್ಥಳೀಯರ ಮನವಿಯಾಗಿದೆ‌.

ಕೋಟ್: ನಾಗರಾಜ – ಸ್ಥಳೀಯ ನಿವಾಸಿ.
‘ ನಮಗೆ ಈ ರಸ್ತೆಯ ಪರಿಸ್ಥಿತಿ ಅದೆಷ್ಟೋ ವರ್ಷದಿಂದ ಹೀಗೆ ಇದ್ದು, ಜನರು ಬದಲಾದರು ರಸ್ತೆ ಬದಲಾಗಿ ಸುಧಾರಣೆ ಕಂಡಿಲ್ಲ.‌ ಸ್ಥಳೀಯ ಪಂಚಾಯತ ಸಹ ಇತ್ತ ಕಡೆ ಗಮನ ಹರಿಸುತ್ತಿಲ್ಲ. ಶಾಸಕರು ಸಹ ಇತ್ತ ಬಂತು ಸ್ಥಳದ ಸಮಸ್ಯೆ ಅರಿತು ಹೋದಲ್ಲಿ ಮಳೆಗಾಲದ ನಂತರವಾದರು ಸಮರ್ಪಕವಾದ ರಸ್ತೆ ಮಾಡಿಕೊಡಬೇಕು. ಇಲ್ಲವಾದರೆ ಸಂಚಾರ ಬಂದ್ ಮಾಡಿ ದೋಣಿ ವ್ಯವಸ್ಥೆ ಮಾಡಿಕೊಡಿ

Table of Contents

Toggle
  • Share this:
  • Related News:

Share this:

  • Share on WhatsApp (Opens in new window) WhatsApp
  • Share on X (Opens in new window) X
  • Share on Facebook (Opens in new window) Facebook
  • Share on Telegram (Opens in new window) Telegram
  • Email a link to a friend (Opens in new window) Email
  • Print (Opens in new window) Print

Related News:

Filed Under: Bhatkal News, Canara News

Explore More:

About bkl news

Reader Interactions

Leave a CommentCancel reply

Primary Sidebar

Subscribe via Email

Enter your email address to subscribe to Canara Buzz and receive latest news articles by email.

  • 2,217,129 visitors

Footer

ಕರ್ನಾಟಕ ಟೂರಿಸಂ ಅವಾರ್ಡ್ಸ್: ಉತ್ತರ ಕನ್ನಡ ಜಿಲ್ಲೆಯ ನಾಲ್ಕು ಸಂಸ್ಥೆಗಳಿಗೆ ಐದು ಪ್ರಶಸ್ತಿ

September 29, 2026 By Sachin Hegde

ಜಿಲ್ಲಾ ವಿಪತ್ತು ನಿರ್ವಹಣಾ ಪರಿಣಿತರ ಹುದ್ದೆಗೆ ಅರ್ಜಿ ಆಹ್ವಾನ 2025

March 24, 2025 By Sachin Hegde

ತೋಟಗಾರಿಕೆ ಇಲಾಖೆಯ ಗಾರ್ಡನ್‌ರ ಸರ್ಕಾರಿ ಹುದ್ದೆಗೆ ಯಾವುದೇ ಪರೀಕ್ಷೆ ಇಲ್ಲದೆ ನೇರವಾಗಿ ಆಯ್ಕೆ

March 7, 2025 By Sachin Hegde

ವಸ್ತ್ರ ವಿನ್ಯಾಸ (ಹೋಲಿಗೆ) ತರಬೇತಿಗೆ ಅರ್ಜಿ ಆಹ್ವಾನ 2025

February 25, 2025 By Sachin Hegde

ಜಿಲ್ಲಾ ಮಟ್ಟದ ಉದ್ಯೋಗ ಮೇಳ ಫೆ 23ಕ್ಕೆ

February 22, 2025 By Sachin Hegde

ಗ್ರಾಮೀಣ ಅಂಚೆ ಸೇವಕರ ಹುದ್ದೆಗಳಿಗೆ ಅರ್ಜಿ ಆಹ್ವಾನ 2025

February 16, 2025 By Sachin Hegde

© 2026 Canara Buzz · Contributors · Privacy Policy · Terms & Conditions · Member of Digital Avatar

Loading Comments...